ಮಂಗಳೂರು :- ಯುವವಾಹಿನಿ (ರಿ.) ಮಂಗಳೂರು ಘಟಕದಿಂದ ರಾಷ್ಟ್ರದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ದಿನಾಚರಣೆಯು ಯುವವಾಹಿನಿ (ರಿ.) ಕೇಂದ್ರ ಸಮಿತಿ ಮತ್ತು ಯುವವಾಹಿನಿ ಸಭಾಂಗಣದ ವರಾಂಡದಲ್ಲಿ 15 ಆಗಸ್ಟ್ 2022 ರಂದು ಸ್ವಾತಂತ್ರೋತ್ಸವ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಹೂಹಾರ ಹಾಕಿ, ದೀಪ ಬೆಳಗಿಸಿ, ಗುರುಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಘಟಕದ ಹಿರಿಯರಾದ ಶ್ರೀರಾಮಚಂದ್ರ ಪೂಜಾರಿ ದೇರೆಬೈಲುರವರು ದೀಪ ಬೆಳಗಿಸಿ ಶುಭ ಹಾರೈಸಿದರು.
ಮಂಗಳೂರು ಘಟಕದ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್ ರವರು ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಉದಯ್ ಅಮಿನ್ ಮಟ್ಟು, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಬಾಬುಪೂಜಾರಿ, ಘಟಕದ ಕಾರ್ಯದರ್ಶಿ ಅಶೋಕ ಅಂಚನ್, ಸಮಾಜಸೇವೆ ನಿರ್ದೇಶಕರಾದ ಭಾಸ್ಕರ್ ಪೂಜಾರಿಯವರನ್ನು ಸ್ವಾಗತಿಸಿ ವೇದಿಕೆಗೆ ಆಹ್ವಾನಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ಶ್ರೀಯುತ ಸಾಧು ಪೂಜಾರಿಯವರು ಎಲ್ಲರಿಗೂ ಹೂ ನೀಡಿ ಗೌರವಿಸಿದರು. ಶ್ರೀಯುತ ಉದಯ ಅಮೀನ್ ಮಟ್ಟುರವರು ಅಮೃತ ಮಹೋತ್ಸವದ ಧ್ವಜಾರೋಹಣಗೈದರು. ಎಲ್ಲರೂ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿ ರಾಷ್ಟ್ರಗೀತೆಯನ್ನು ಹಾಡಿದರು. ಶ್ರೀಯುತ ಉದಯ ಅಮಿನ್ ಮಟ್ಟುರವರು ಎಲ್ಲಾರಿಗೂ ಶುಭಾಶಯಗಳನ್ನು ಸಲ್ಲಿಸಿ, ಅಮೃತ ಮಹೋತ್ಸವದ ಧ್ವಜಾರೋಹಣ ಮಾಡಲು ತುಂಬಾ ಸಂತೋಷವಾಗುತ್ತಿದೆ, ಘಟಕದ ಅಧ್ಯಕ್ಷರಿಗೆ ವಂದನೆಗಳನ್ನು ಸಲ್ಲಿಸಿ, ಯುವವಾಹಿನಿಯ ಸಮಾಜಮುಖೀ ಕಾರ್ಯಗಳು ಸಮಾಜದಲ್ಲಿ ಒಳ್ಳೆಯ ಬದಲಾವಣೆಗಳನ್ನು ತರಲೆಂದು ಆಶಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ತುಕಾರಾಮ್ ಪೂಜಾರಿ, ಲಕ್ಷ್ಮೀನಾರಾಯಣ, ಕೇಂದ್ರ ಸಮಿತಿಯ ಬಾಬುಪೂಜಾರಿ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ಸುನಿತಾ ಗೋಪಾಲಕೃಷ್ಣರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಂಗಳೂರು ಘಟಕದ ಅಧ್ಯಕ್ಷರು ಗಣೇಶ್ ವಿ. ಕೋಡಿಕಲ್ ಮಾತನಾಡುತ್ತಾ ಸಮಾಜಸೇವೆಯಲ್ಲಿ ಉನ್ನತ ಸ್ಥಾನದಲ್ಲಿರುವ ಯುವವಾಹಿನಿಯಲ್ಲಿ ಈ ವರ್ಷ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ದಿನಾಚರಣೆಯನ್ನು ಆಚರಿಸಲು ತುಂಬಾ ಸಂತೋಷವಾಗುತ್ತಿದೆ, ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿ, ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಸಲ್ಲಿಸಿದರು. ಮಂಗಳೂರು ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು, ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಮಕ್ಕಳು ಹಾಗೂ ರಘ ಬಿಲ್ಡಿಂಗ್ ನ ಸದಸ್ಯರು ಸೇರಿ ಒಟ್ಟು 75ಕ್ಕೂ ಅಧಿಕ ಸದಸ್ಯರು ಧ್ವಜಾರೋಹಣದಲ್ಲಿ ಭಾಗವಹಿಸಿದ್ದರು. ಕಾರ್ಯದರ್ಶಿ ಅಶೋಕ್ ಅಂಚನ್ ರವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಎಲ್ಲಾ ಬಂದುಗಳಿಗೆ ಸಿಹಿತಿಂಡಿ ಮತ್ತು ಫಲಹಾರವನ್ನು ನೀಡಿ ಸತ್ಕರಿಸಲಾಯಿತು.