ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕವು ನಾರಾಯಣ ಗುರು ಜಯಂತಿಯ ಪ್ರಯುಕ್ತ ಗುರುವರ್ಯರು ಸಮಾಜಕ್ಕೆ ಕೊಟ್ಟ ಸಂದೇಶವಾದ ಒಂದೇ ಜಾತಿ,ಒಂದೇ ಮತ,ಒಂದೇ ದೇವರು ಎಂಬ ಮಾತಿನಂತೆ ವಿವಿಧ ಮಹಿಳಾ ಮಂಡಳಿಗಳನ್ನು ಜೊತೆಗೂಡಿಸಿ ಬೆಳಗ್ಗೆ12ರಿಂದ ಸಂಜೆ 7 ಘಂಟೆಯವರೆಗೆ ಭಜನಾ ಕಾರ್ಯಕ್ರಮವನ್ನು ನಡೆಯಸಿತು. ಕಾರ್ಯಕ್ರಮಕ್ಕೆಗುರುಸ್ತೋತ್ರ ಹಾಗೂ ಭಜನೆ ಮೂಲಕ ಮಂಗಳೂರು ಮಹಿಳಾ ಘಟಕವು ಚಾಲನೆ ನೀಡಿ ನಂತರ ವಿವಿಧ ಮಹಿಳಾ ಮಂಡಳಿಗಳಿಗೆ ಅವಕಾಶಕೊಟ್ಟು ನಂತರ ಕೊನೆಯ ಹಂತವನ್ನು ಮಂಗಳೂರುಘಟಕದವರೊಂದಿಗೆ ಸೇರಿ ಮುಕ್ತಾಯ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಉಮಾಶ್ರೀಕಾಂತ್, ನೈನವಿಶ್ವನಾಥ್,ರವಿಕಲ, ನಾರಾಯನಗುರು ತತ್ವ ಪ್ರಚಾರ ನಿರ್ದೇಶಕರಾದ ರೇಖಗೋಪಾಲ್, ನಿರ್ದೇಶಕರು, ಪದಾಧಿಕಾರಿಗಳು, ಸದಸ್ಯರು, ಕೇಂದ್ರಸಮಿತಿಯ ಅಧ್ಯಕ್ಷರು, ಮಾಜಿಅಧ್ಯಕ್ಷರುಗಳು ಉಪಸ್ಥಿತರಿದ್ದರು.