ಹೆಜಮಾಡಿ : ಯುವವಾಹಿನಿ (ರಿ) ಹೆಜಮಾಡಿ ಘಟಕದ ಪದಗ್ರಹಣ ಸಮಾರಂಭವು ದಿನಾಂಕ 11-08-2024 ನೇ ಆದಿತ್ಯವಾರ ಹೆಜಮಾಡಿ ಬಿಲ್ಲವರ ಸಂಘದ ರತ್ನಾಶಂಕರ್ ಸಭಾಗೃಹದಲ್ಲಿ ಜರಗಿತು. ಪ್ರಥಮವಾಗಿ ಅತಿಥಿ ಗಣ್ಯರೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಪೂಜೆಯನ್ನು ಸಲ್ಲಿಸಿ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಹೆಜಮಾಡಿ ಘಟಕದ ಅಧ್ಯಕ್ಷರಾದ ದೀಪಕ್ ವಿ ಕೋಟ್ಯಾನ್ ವಹಿಸಿದ್ದರು. ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಲು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ
ಶ್ರೀ ಹರೀಶ್ ಕೆ ಪೂಜಾರಿ ಉಧ್ಘಾಟಕರಾಗಿ ಶ್ರೀ ಮೋಹನ್ ದಾಸ್ ಹೆಜಮಾಡಿ ಅಧ್ಯಕ್ಷರು ಬಿಲ್ಲವರ ಸಂಘ (ರಿ) ಹೆಜಮಾಡಿ , ಮುಖ್ಯ ಅತಿಥಿಗಳಾಗಿ ಡಾ| ಶೇಷಪ್ಪ ಅಮೀನ್ ಸಹಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು, ಶ್ರೀ ವಿವೇಕ್ ಬಿ ಕೋಟ್ಯಾನ್ ಸುರತ್ಕ್ ಲ್, ಸಂಘಟನಾ ಕಾರ್ಯದರ್ಶಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಉಪಸ್ಥಿತರಿದ್ದರು.
ಘಟಕದ ಮಹಿಳಾ ಸದಸ್ಯರ ಮಕ್ಕಳು ಪ್ರಾರ್ಥನೆ ಗೈದರು. ಅಧ್ಯಕ್ಷರಾದ ದೀಪಕ್ ವಿ ಕೋಟ್ಯಾನ್ ಗಣ್ಯರನ್ನು ಸ್ವಾಗತಿಸಿದರು. ಹೆಜಮಾಡಿ ಘಟಕದ ಮಾಜಿ ಅಧ್ಯಕ್ಷರಾದ ಪ್ರಭೋದ್ ಚಂದ್ರ ಹೆಜಮಾಡಿ ಪ್ರಸ್ತಾವನೆಗೈದರು. ಹೆಜಮಾಡಿ ಘಟಕದ ಪ್ರಧಾನ ಕಾರ್ಯದರ್ಶಿ ಕುಮಾರಿ ನಾಗವೇಣಿ ವಾರ್ಷಿಕ ವರದಿಯನ್ನು ಮಂಡಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ನೂತನ ತಂಡಕ್ಕೆ ಶುಭ ಹಾರೈಸಿದರು. ಯುವವಾಹಿನಿಯ ಧ್ಯೇಯೋದ್ದೇಶವಾದ ವಿಧ್ಯೆ, ಉದ್ಯೋಗ, ಸಂಪರ್ಕದ ನೆಲೆಯಲ್ಲಿ ಹೆಜಮಾಡಿ ಗ್ರಾಮದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಹೆಜಮಾಡಿ ಗ್ರಾಮದ ಕೀರ್ತಿಯನ್ನು ಎಲ್ಲೆಡೆ ಪಸರಿಸಿದ ಡಾ|| ಹರ್ಷಿತ ಎನ್ ಅಂಚನ್ ಇವರನ್ನು ಸನ್ಮಾನಿಸಲಾಯಿತು. ಹೆಜಮಾಡಿ ಬಿಲ್ಲವರ ಸಂಘದ ಸತತ 6 ವರ್ಷದ ಅಧ್ಯಕ್ಷತೆಯ ಅಧಿಕಾರವನ್ನು ಚುಕ್ಕಾಣಿಯಲ್ಲಿ ಹಿಡಿದು ಇಂದು ಮಾಜಿ ಅಧ್ಯಕ್ಷರ ಸಾಲಿಗೆ ಸೇರಿದ ಹಾಗೂ ಹೆಜಮಾಡಿ ಯುವವಾಹಿನಿಯ ಮಾಜಿ ಅಧ್ಯಕ್ಷರು ಅಜೀವ ಸದಸ್ಯರೂ ಆದ ಶ್ರೀ ಲೋಕೇಶ್ ಅಮೀನ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಹೆಜಮಾಡಿ ಬಿಲ್ಲವರ ಸಂಘದ ನೂತನ ಅಧ್ಯಕ್ಷರಾದ ಶ್ರೀ ಮೋಹನ್ ದಾಸ್ ಹೆಜಮಾಡಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹೆಜಮಾಡಿ ಗ್ರಾಮದ ಅಂಗನವಾಡಿ ಶಾಲೆಗೆ ಫ್ಯಾನ್ ಕೊಡಗೆಯಾಗಿ ನೀಡಲಾಯಿತು.
ಘಟಕದ ಎಲ್ಲಾ ಕಾರ್ಯಕ್ರಮಗಳಿಗೆ ಸ್ಪಂದಿಸುವ ಹಾಗೂ ಸ್ಥಳಾವಕಾಶವನ್ನು ಒದಗಿಸುವ ಹೆಜಮಾಡಿ ಬಿಲ್ಲವರ ಸಂಘಕ್ಕೆ ನಾಮ ಫಲಕವನ್ನು ಕೊಡುಗೆಯಾಗಿ ನೀಡಲಾಯಿತು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕೆ. ಪೂಜಾರಿಯವರು ದೀಪಕ್ ವಿ ಕೋಟ್ಯಾನ್ ತಂಡಕ್ಕೆ ಅಭಿನಂದನೆ ಸಲ್ಲಿಸಿ, 2024 -25 ಸಾಲಿನ ದೀಪಾ ದಿನೇಶ್ ತಂಡಕ್ಕೆ ಶುಭವನ್ನು ಹಾರೈಸಿ, ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ನೂತನ ಕಾರ್ಯಕಾರಿ ಸಮಿತಿಯ ಸದಸ್ಯರ ಪರಿಚಯವನ್ನು ಯುವವಾಹಿನಿ (ರಿ) ಹೆಜಮಾಡಿ ಘಟಕದ ಚುನಾವಣಾ ಅಧಿಕಾರಿಯಾದ ಶ್ರೀ ಧನಂಜಯ ಪೂಜಾರಿಯವರು ಮಾಡಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ವತಿಯಿಂದ ಆಗಸ್ಟ್ 24 ರಂದು ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಬಿಡುಗಡೆಗೊಳ್ಳಲಿರುವ ಅರವಿಂದಪುರದಿಂದ ಓಂಕಾರೇಶ್ವರದ ವರೆಗೆ ಗ್ರಂಥ ಬಿಡುಗಡೆಯ ಆಮಂತ್ರಣ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
2023-24ನೇ ಸಾಲಿನ ಅಧ್ಯಕ್ಷರಾದ ದೀಪಕ್ ವಿ ಕೋಟ್ಯಾನ್ ರವರನ್ನು ಈ ಸಮಯದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಶ್ರೀ ದೀರಜ್ ಹೆಜಮಾಡಿ ಕೋಡಿ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಪ್ರಥಮೇಶ್ ವಂದಿಸಿದರು. ಕಾರ್ಯಕ್ರದಲ್ಲಿ ಕೇಂದ್ರ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಘಟಕದ ಸದಸ್ಯರು ಪಾಲ್ಗೊಂಡಿದ್ದರು.