ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು

2016 ನೇ ಸಾಲಿನ ’ವಿಶುಕುಮಾರ್ ಪ್ರಶಸ್ತಿ’ ಪುರಸ್ಕೃತ – ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ

ಕನ್ನಡ ಮತ್ತು ತುಳು ಭಾಷೆಗಳೆರಡರಲ್ಲೂ ಕೃತಿಗಳನ್ನು ರಚಿಸಿ ಸಾಹಿತ್ಯಾಭಿಮಾನಿಗಳಿಂದ ಮತ್ತು ವಿಮರ್ಶಕರಿಂದ ಸೈ ಎನಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದವರು ಎಂ. ಜಾನಕಿ ಬ್ರಹ್ಮಾವರರವರು.

ಹುಟ್ಟೂರು ಉಡುಪಿ ತಾಲೂಕಿನ ಮೂಡುತೋನ್ಸೆ ಗ್ರಾಮದ ಕಲ್ಯಾಣಪುರ ಬಳಿಯ ಮೂಡುಕುದುರು. ೧೯೫೦ರ ಜೂನ್ ೨೦ರಂದು ಜನಿಸಿದ ಇವರ ತಂದೆ ಗುಂಡಿಬೈಲ್ ದಾರ ಪಾಲನ್, ತಾಯಿ ಮುತ್ತಕ್ಕ ಮೂಡುಕುದುರು.

ತಮ್ಮ ಪ್ರೌಢ ಶಾಲಾ ಶಿಕ್ಷಣವನ್ನು ಮಿಲಾಗ್ರಿಸ್ ಹೈಸ್ಕೂಲು, ಕಲ್ಯಾಣಪುರದಲ್ಲಿ ಮುಗಿಸಿ ಪದವಿ ಶಿಕ್ಷಣವನ್ನು ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರದಲ್ಲಿ (ಪ್ರಥಮ ಬ್ಯಾಚಿನ ವಿದ್ಯಾರ್ಥಿನಿ) ಪೂರೈಸಿದರು. ಬಿ.ಎಡ್. ಪದವಿ ಶಿಕ್ಷಣವನ್ನು ಮಣಿಪಾಲ್ ಕಾಲೇಜ್ ಆಫ್ ಎಜ್ಯುಕೇಶನ್ ಉಡುಪಿ ಇಲ್ಲಿ ಪಡೆದರು. ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಿಂದ ಎಂ.ಎ. (ಕನ್ನಡ) ಪದವಿಯನ್ನು ಪಡೆದರು.

ಎಸ್.ಎಂ.ಎಸ್. ಪದವಿಪೂರ್ವ ಕಾಲೇಜು ಬ್ರಹ್ಮಾವರ ಇಲ್ಲಿ ಸುಧೀರ್ಘ 35 ವರ್ಷಗಳ ಕಾಲ (1973-2008) ಪದವೀಧರ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ಈ ನಡುವೆ ಕ್ರಾಸ್‌ಲೇಂಡ್ ಸಂದ್ಯಾ ಕಾಲೇಜು ಬ್ರಹ್ಮಾವರ ಇಲ್ಲಿ ಒಂದು ವರ್ಷ (1986-87) ಕನ್ನಡ ಉಪನ್ಯಾಸಕಿಯಾಗಿಯೂ ಸೇವೆ ಸಲ್ಲಿಸಿರುತ್ತಾರೆ.

ತಮ್ಮ ಅಧ್ಯಾಪನ ವೃತ್ತಿಯ ಜೊತೆಜೊತೆಯಲ್ಲೇ ಸಾಹಿತ್ಯ ಕ್ಷೇತ್ರದಲ್ಲಿಯೂ ಕೈಯಾಡಿಸಿ ಸೈ ಎನಿಸಿಕೊಂಡರು. ಭಾಷೆ, ಬರಹ ಮತ್ತು ಕಥಾ ಅಭಿವ್ಯಕ್ತಿಯಲ್ಲಿ ಆಳಕ್ಕೆ ಇಳಿದು ಓದುಗನ ಮನಸ್ಸನ್ನು ಮುಟ್ಟುವಂತೆ, ತಟ್ಟುವಂತೆ ಮಾಡಿ ತನ್ನ ಬರಹದ ಮೂಲಕವೇ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿರುವ ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ ಅವರು ಈ ನಾಡುಕಂಡ ಅಪೂರ್ವ ಸಾಹಿತಿಗಳಲ್ಲಿ ಅಗ್ರ ಪಂಕ್ತಿಯಲ್ಲಿರುವವರು.

’ಕುದುರುದ ಕೇದಗೆ’ (1994), ’ಕಪ್ಪು ಗಿಡಿ’ (1998), ’ಯುಗ ಮಗ್‌ರ್‍ನಗ’ (2002), ’ರುಕ್ಕು’ ಇವು ಇವರ ತುಳು ಕಾದಂಬರಿಗಳು. ’ತಿರ್ಗಾಟದ ತಿರ್‍ಲ್’ (1996), ’ತಿರ್‍ಗಾಟದ ಪೊರ್‍ಲು’ (2011) ಇವರ ಪ್ರವಾಸ ಕಥನಗಳು. ’ಅಮರ್ ಬೈದೆರ್‍ಲ್’ (ಕೋಟಿ-ಚೆನ್ನಯ) (2013೩), ’ತಿಬಿಲೆದ ತುಡರ್’ (೨೦೧೫) ಇವುಗಳು ಇವರ ತುಳು ನಾಟಕಗಳು. ಅಲ್ಲದೆ ’ಕೋಡ್ದಬ್ಬು-ತನ್ನಿಮಾನಿಗ’ (2012), ’ಮಣಿಕಂಠ ಸ್ವಾಮಿ’ (2016) ಎಂಬ ನೃತ್ಯರೂಪಕಗಳನ್ನು ರಚಿಸಿದ್ದಾರೆ. ’ಕೋರ್ಟ್ ಮಾರ್ಶಲ್’ (ಆಧಾರ: ಸಿದ್ಧಲಿಂಗ ಪಟ್ಟಣ ಶೆಟ್ಟಿಯವರ ಕನ್ನಡ ನಾಟಕ-ಕೋರ್ಟ್ ಮಾರ್ಶಲ್, ಮೂಲ: ಸ್ವದೇಶ್ ದೀಪಕ್‌ರವರ ಹಿಂದಿ ಕೋರ್ಟ್ ಮಾರ್ಶಲ್), ’ಏಕಲವ್ಯ’ (ಡಾ. ಸಿದ್ಧಲಿಂಗಯ್ಯನವರ ಕನ್ನಡ ನಾಟಕ-ಏಕಲವ್ಯ), ’ಮಾಯೊದ ಮುರ್‍ಗ’ (ಕೆ.ಟಿ. ಗಟ್ಟಿಯವರ ’ಮಾಯಾಮೃಗ’), ’ರಕ್ತಾಕ್ಷಿ’ (2010), ’ಶೂದ್ರ ತಪಸ್ವಿ’ (2013), ’ಸ್ಮಶಾನ ಕುರುಕ್ಷೇತ್ರ’ (2013೩) [ಕುವೆಂಪುರವರ ನಾಟಕಗಳು], ’ತುಕ್ರನ ಕನ’) (ಡಾ. ಚಂದ್ರಶೇಖರ ಕಂಬಾರರ ’ತುಕ್ರನ ಕನಸು’ ನಾಟಕದ ಭಾಷಾಂತರ ಕೃತಿ (ಪ್ರಕಟನೆಯಲ್ಲಿದೆ) ಇವುಗಳು ಅವರ ತುಳು ಭಾಷಾಂತರ ನಾಟಕಗಳು. ’ಐಲೆಟ್ಸ್ ಸ್ಕ್ರೂ-ಪೈನ್’ (2004) (ಮೂಲ: ಕುದುರುದ ಕೇದಗೆ ತುಳು ಕಾದಂಬರಿ) ಅವರು ಇಂಗ್ಲಿಷ್ ಭಾಷಾಂತರಿಸಿದ ಕೃತಿ.

ತುಳುವಿನಂತೆಯೇ ಕನ್ನಡದಲ್ಲೂ ಹತ್ತಾರು ಕೃತಿಗಳನ್ನು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ರಚಿಸಿರುವರು. ’ಕಂಬಳ’ (1993) ಇವರ ಕವನ ಸಂಕಲನ. ’ಪ್ರಾರ್ಥನಾ ಗೀತೆಗಳು’ ಇವರು ಶಾಲಾ ಕಾಲೇಜುಗಳ ಸಮಾರಂಭಕ್ಕಾಗುವಂತೆ ರಚಿಸಿದ ಪ್ರಾರ್ಥನಾ ಹಾಡುಗಳು. ’ತಿರುಗಾಟದ ತಿರುಳು’ (1999) (ಉತ್ತರ ಭಾರತದ ರಾಜ್ಯಗಳ ಪ್ರವಾಸ ಕಥನ), ’ತಿರುಗಾಟದ ಸೊಗಸು’ (2010) (ಯುರೋಪಿನ ಎಂಟು ದೇಶಗಳಲ್ಲಿನ ಪ್ರವಾಸ ಕಥನ), ’ತಿರುಗಾಟದ ಮರುಳು’ (2013) (ಶ್ರೀಲಂಕಾ, ಥಾಯ್ಲಾಂಡ್, ಮಲೇಷ್ಯಾ, ಸಿಂಗಾಪುರ ಪ್ರವಾಸ ಕಥನ), ’ನೈಲ್ ನದಿ ತೀರದಲ್ಲಿ’ (ಇಜಿಪ್ತ್ ಪ್ರವಾಸ ಕಥನ, ಪ್ರಕಟನೆಗೆ ಸಿದ್ಧವಾಗಿದೆ) ಇವುಗಳು ಅವರ ಪ್ರವಾಸ ಕಥನಗಳು. ’ಯುಗಾಂತರದಲ್ಲಿ’ (2015೫) ಅವರ ಕಾದಂಬರಿ. ’ಸಮಾಜಮುಖಿ ಸಂಶೋಧಕಿ ಡಾ. ಸುಶೀಲಾ ಪಿ. ಉಪಾಧ್ಯಾಯ’ (೨೦೦೯), ’ಸಮಾಜ ಮುಖಿ ಸಾಧಕಿ ಶ್ರೀಮತಿ ಸರಳಾ ಬಿ. ಕಾಂಚನ್’ (2009) ಇವರು ರಚಿಸಿದ ಜೀವನ ಚರಿತ್ರೆಗಳು. ಇವರ ’ಅವಳಿ ಬೈದರ್ಕಳ್’ ನಾಟಕ ಪ್ರಕಟನೆಗೆ ಸಿದ್ಧವಾಗಿದೆ. ಅವರು ರಚಿಸಿದ ’ಕನ್ನಡದ ಓಜ ಪಂಜೆ ಮಂಗೇಶರಾಯರು’ ಮತ್ತು ’ಬಾರೆಲೆ ಹಕ್ಕಿ ಬಣ್ಣದ ಹಕ್ಕಿ’ ಈ ಎರಡು ರೂಪಕಗಳು ಆಕಾಶವಾಣಿಯಲ್ಲಿ ಪ್ರಸಾರಗೊಂಡಿವೆ.

’ದೇಶ ಸುತ್ತು, ಕೋಶ ಓದು’ ಎಂಬಂತೆ ತಿರುಗಾಟದ ಹವ್ಯಾಸವನ್ನು ಹೊಂದಿದ ಇವರು 15 ದೇಶಗಳನ್ನು ಈಗಾಗಲೇ ಸುತ್ತಿ ಅದರ ಅನುಭವಗಳನ್ನು ತಿರ್‍ಗಾಟದ ತಿರ್‍ಲ್, ತಿರುಗಾಟದ ಮರುಳು, ತಿರ್ಗಾಟದ ಪೊರ್‍ಲು, ತಿರುಗಾಟದ ಸೊಗಸು ಮುಂತಾದ ಕೃತಿಗಳಲ್ಲಿ ದಾಖಲಿಸಿದ್ದಾರೆ.

ಇವರ ಪ್ರತಿಭೆ, ಸಾಮರ್ಥ್ಯ, ಸಾಹಿತ್ಯಸೇವೆ, ಸಾಧನೆಗಳನ್ನು ಆಧರಿಸಿ ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವ, ಸನ್ಮಾನಗಳು ದೊರಕಿವೆ. ಇವರ ’ಕುದುರುದ ಕೇದಗೆ’ (1994) ಮತ್ತು ’ರುಕ್ಕು’ (2009) ಕಾದಂಬರಿಗಳಿಗೆ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗಳು, ’ಕುದುರುದ ಕೇದಗೆ’, ’ತಿರ್‍ಗಾಟದ ತಿರ್‍ಲ್’ ಮತ್ತು ’ಯುಗ ಮಗ್‌ರ್‍ನಗ’ ಕೃತಿಗಳಿಗೆ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಪುರಸ್ಕಾರಗಳು ದೊರಕಿವೆ. ಅವಿಭಜಿತ ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಪುರಸ್ಕಾರ (1999), ಅಜಪುರ ಕನ್ನಡ ಸಂಘದ ಸಾಹಿತ್ಯ ಪುರಸ್ಕಾರ (2010), ಆಲದ ಪದವು ’ಅಕ್ಷರ ಪ್ರತಿಷ್ಠಾನ’ದ ’ತುಳುನಾಡ ತುಳುಶ್ರೀ ಪ್ರಶಸ್ತಿ’ (2009೯), ಸಂದೇಶ ಪ್ರತಿಷ್ಠಾನದ ’ಸಂದೇಶ ತುಳು ಸಾಹಿತ್ಯ ಪ್ರಶಸ್ತಿ (2010), ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ, ಉಳ್ಳಾಲ ಇವರಿಂದ ’ವೀರರಾಣಿ ಅಬ್ಬಕ ಪ್ರಶಸ್ತಿ’, ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ’ರಾಣಿ ಚೆನ್ನಮ್ಮ ಪ್ರಶಸ್ತಿ’, ಅಖಿಲ ಭಾರತ ತುಳು ಸಮ್ಮೇಳನ 2011 (ಸವಣೂರು) ಸಂದರ್ಭದ ಗೌರವ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ಪುರಸ್ಕಾರ (2009), ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನದ ಗೌರವ ಸನ್ಮಾನ (2009), ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ-2014 ಗಳು ಅವರ ಮುಡಿಗೇವೆ.

2014 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಬಾರಿಗೆ ಶಿಕ್ಷಕರ ದಿನಾಚರಣೆ ಆಚರಿಸಿದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿದ್ದು ತುಳು, ಕನ್ನಡ ಸಾಹಿತ್ಯ ಸೇವೆ ಮಾಡಿದ ಉಡುಪಿ ಜಿಲ್ಲೆಯ ಶಿಕ್ಷಕಿಯಾಗಿ ಜಾನಕಿ ಬ್ರಹ್ಮಾವರರನ್ನು ಸನ್ಮಾನಿಸಲಾಗಿದೆ.

ಬೆಹರಿನ್ ಕನ್ನಡ ಸಂಘ ಮತ್ತು ಬಿಲ್ಲವ ಸಂಘಗಳು ಆಹ್ವಾನಿಸಿ ಗೌರವ ಸನ್ಮಾನ ಸಲ್ಲಿಸಿವೆ. ಬ್ರಹ್ಮಾವರ ಹೋಬಳಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಗೋರೆಗಾಂವ್ ಕನ್ನಡ ಸಂಘದ ಮುಂಬಯಿಯ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಗಳೂ ಲಭಿಸಿವೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆಯಾಗಿರುವ ಇವರು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಮಾಜಿ ಅಧ್ಯಕ್ಷೆ. ಪ್ರಸ್ತು ಪ್ರತಿಷ್ಠಿತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಧ್ಯಕ್ಷರಾದ ಅಲ್ಪ ಅವಧಿಯಲ್ಲೇ ತುಳು ಸಾಹಿತ್ಯಕ್ಕೆ ಸಂಬಂಧಿಸಿ ಹತ್ತಾರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ರಾಜ್ಯ ಮಟ್ಟದ ಲೇಖಕಿಯರ ಸಾಹಿತ್ಯ ಕಮ್ಮಟಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ, ಆಕಾಶವಾಣಿ, ದೂರದರ್ಶನ ಕಾರ್ಯಕ್ರಮಗಳಲ್ಲಿ ಮತ್ತು ದೆಹಲಿಯಲ್ಲಿ ನಡೆದ ’ತುಳು ಬೊಳ್ಳಿ’ ಸಮಾರಂಭದ ವಿಚಾರಗೋಷ್ಠಿಯಲ್ಲಿ ಪಾಲುಗೊಂಡಿರುತ್ತಾರೆ. ತುಷಾರ, ಕಸ್ತೂರಿ, ಮದಿಪು (ತುಳ ತ್ರೈಮಾಸಿಕ), ವಿಜಯ ಕಿರಣ, ಉದಯವಾಣಿ ಪತ್ರಿಕೆಗಳಲ್ಲಿ ಕವನ, ಕತೆ, ಲೇಖನಗಳ ಪ್ರಕಟಣೆ, ಮುಂಬಯಿಯ ’ಸ್ಪಾರೋ’ ಸಂಸ್ಥೆಯು ಆಯೋಜಿಸಿದ ರಾಷ್ಟ್ರಮಟ್ಟದ ಲೇಖಕಿಯರ ಶಿಬಿರದಲ್ಲಿ ಕಥಾವಾಚನ, ’ಸ್ಪಾರೋ’ ಪ್ರಕಟಿಸಿದ ’ಹಾಟ್ ಈಸ್ ದಿ ಮೂನ್’ ಗ್ರಂಥದಲ್ಲಿ ಸಂದರ್ಶನ ಮತ್ತು ’ಕ್ಲಿಪ್‌ಡ್ ವಿಂಗ್ಸ್’ ಇಂಗ್ಲಿಷ್ ಕಥೆಯ ಪ್ರಕಟಣೆ ಇವರ ಪ್ರತಿಭೆಯ ದ್ಯೋತಕಗಳು.

ಇವರ ಕಪ್ಪುಗಿಡಿ ಕಾದಂಬರಿಯು ಮಂಗಳೂರು ಆಕಾಶವಾಣಿಯ ’ಸಾಹಿತ್ಯ ಸಿರಿದೊಂಪ’ ಕಾರ್ಯಕ್ರಮದಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿದೆ. ಆಕಾಶವಾಣಿಯ ’ವ್ಯಕ್ತಿ ಪರಿಚಯ’, ’ಭಾವಗಾನ’, ’ಝೇಂಕಾರ’ ಮತ್ತು ’ಬಾನ್‌ದನಿ’ ಕಾರ್ಯಕ್ರಮಗಳಿಗೆ ಸಾಹಿತ್ಯ ಪೂರೈಸಿದ್ದಾರೆ. ಇವರ ತುಳು ಕಾದಂಬರಿ ’ಕುದುರುದ ಕೇದಗೆ’ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಐಚ್ಛಿಕ ಪಠ್ಯವಾಗಿದೆ. ಕುದುರುದ ಕೇದಗೆ ಕಾದಂಬರಿಯು ಶ್ರೀಮತಿ ಚಂದ್ರಕಲಾ ನಂದಾವರರಿಂದ ಕನ್ನಡಕ್ಕೆ ಭಾಷಾಂತರಗೊಂಡು ಮುಂಬಯಿಯ ’ಶ್ರೀ ಸತ್ಯ’ ತ್ರೈಮಾಸಿಕದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ಅಲ್ಲದೆ ಶ್ರೀ ಮೆಲ್‌ಕ್ ಮಿಯಾರರಿಂದ ’ಕುದ್ರ್ಯಾಭಿತರ್’ ಎಂಬ ಹೆಸರಲ್ಲಿ ಕೊಂಕಣಿ ಭಾಷೆಗೆ ಭಾಷಾಂತರಗೊಂಡು ’ಅಮ್ಚೊ ಯುವಕ್’ ಮಾಸ ಪತ್ರಿಕೆಯಲ್ಲಿ 2003 ರಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದೆ. ೨೦೦೨ರಲ್ಲಿ ಇದೇ ಕೃತಿಯು ’ಯಾರಿಗೆ ಯಾರುಂಟು’ ಹೆಸರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಬಿ.ಎ. ತರಗತಿಗೆ ಪಠ್ಯವಾಗಿತ್ತು. ತುಳುವಿನ ’ರುಕ್ಕು’ ಮತ್ತು ’ಕಪ್ಪು ಗಿಡಿ’ ಕಾದಂಬರಿಗಳು ಮಂಗಳೂರಿನ ಶ್ರೀ ಕೇಶವ ಕುಡ್ಲರಿಂದ ಕನ್ನಡಕ್ಕೆ ಭಾಷಾಂತರಗೊಂಡು ಪ್ರಕಟವಾಗಿವೆ. ಅಮರ್ ಬೈದೆರ್‍ಲ್ (ಕೋಟಿ-ಚೆನ್ನಯ) ನಾಟಕ ಶ್ರೀ ಎನ್.ಡಿ. ಪೂಜಾರಿಯವರಿಂದ ಇಂಗ್ಲಿಷ್‌ನಲ್ಲಿ ಭಾವಾನುವಾದಗೊಂಡು ಪ್ರಕಟಣೆಗೆ ಸಿದ್ಧವಾಗಿದೆ.

ಇನ್ನಷ್ಟು ಸಾಹಿತ್ಯ ಸೇವೆ ನಡೆಸಬೇಕು ಎನ್ನುವ ತುಡಿತದಲ್ಲಿರುವ ಜಾನಕಿ ಬ್ರಹ್ಮಾವರ ಅವರು ಈಗಾಗಲೇ ಮತ್ತೊಂದಷ್ಟು ಸಾಹಿತ್ಯ ಕೃತಿಗಳನ್ನು ಕೈಗೊಂಡಿದ್ದಾರೆ. ತನ್ನ ಓದು, ಬರಹ, ತಿರುಗಾಟಗಳಿಗೆ ಸದಾ ಬೆಂಬಲ ನೀಡುವ ಪತಿ ಶ್ರೀ ಸುಧಾಕರ ತೋನ್ಸೆಯವರೊಂದಿಗೆ ಉಡುಪಿ ತಾಲೂಕಿನ ಬ್ರಹ್ಮಾವರ ಹೇರೂರಿನಲ್ಲಿ ವಾಸವಿರುವ ಇವರಿಗೆ ಈರ್ವರು ಪುತ್ರಿಯರು (ವಿವಾಹಿತರು). ಓರ್ವರು ಆರ್ಥೊಡೊಂಟಿಸ್ಟ್, ಇನ್ನೋರ್ವರು ಆರ್ಟಿಸ್ಟ್.

ಯುವವಾಹಿನಿಯ ’ವಿಶುಕುಮಾರ್ ದತ್ತಿ ನಿಧಿ’ಯ ಮೂಲಕ ಪ್ರತಿವರ್ಷ ಕೊಡಮಾಡುವ, ಈ ಬಾರಿಯ ’ವಿಶುಕುಮಾರ್ ಪ್ರಶಸ್ತಿ’ಗೆ ಅರ್ಹವಾಗಿಯೇ ಜಾನಕಿ ಬ್ರಹ್ಮಾವರರು ಆಯ್ಕೆಗೊಂಡಿದ್ದಾರೆ. ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತಾ ಅವರ ಸಾಹಿತ್ಯ ಸೇವೆ ಹೀಗೇ ನಿರಂತರವಾಗಿರಲಿ, ಇನ್ನಷ್ಟು ಸಾಹಿತ್ಯ ಕೃತಿಗಳು ಸಾರಸ್ವತ ಲೋಕಕ್ಕೆ ಲಭಿಸಲಿ, ಅವರ ಹೆಸರು ಸಾಹಿತ್ಯ ಲೋಕದ ಕೀರ್ತಿ ಶಿಖರಕ್ಕೆ ಏರಲಿ ಎಂಬ ಹಾರೈಕೆ ಯುವವಾಹಿನಿಯದು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!