ಮುದ್ದು ಮೂಡು ಬೆಳ್ಳೆ- ಸಿಂಚನ ವಿಶೇಷಾಂಕ - 2016

ಹೊಸ ತಲೆಮಾರಿನ ಸವಾಲು, ಸಾಮರ್ಥ್ಯ

ದಿಕ್ಸೂಚಿ

ಇತ್ತೀಚೆಗೆ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ಕಾಣಿಸಲಾದ ತಲೆಮಾರುಗಳ ಅಂತರ ವಿಶ್ಲೇಷಣೆ: ’ಹಿಂದೆ ಮೂವತ್ತು ವರ್ಷಗಳ ಕಾಲಾವಧಿಯಲ್ಲಿ ತಲೆಮಾರುಗಳ ಭಿನ್ನತೆ-ವ್ಯತ್ಯಾಸ. ಆದರೆ ಈಗ? ಕೇವಲ ಒಂದು ವರ್ಷದ ಅಂತರದವರೊಳಗೂ ಜನರೇಶನ್ ಗ್ಯಾಪ್-ತಲೆಮಾರು ಅಂತರದ ಮಿಂಚು ಕಾಣಿಸುತ್ತಿದೆ ಎಂಬ ವಿಚಾರ. ಇದು ವಾಸ್ತವವೇ, ಅಸ್ವಾಭಾವಿಕವೇ ಎನ್ನುವುದು ತರ್ಕದ ಪ್ರಶ್ನೆ. ಇಂದಿನ ತಲೆಮಾರಿಗೂ ಹಿಂದಿನ ತಲೆಮಾರಿಗೂ ಸವಾಲುಗಳೇನು, ಇಂದಿನ ಸಾಮರ್ಥ್ಯಗಳೇನು?

ನಮ್ಮ ಒಟ್ಟು ಬದುಕೇ ಆಧುನಿಕತೆಯ ಸ್ಥಿತ್ಯಂತರದೊಂದಿಗೆ ಸಾಗಿದೆ. ಬದುಕು ಸದಾ ಚಲಿಸುತ್ತಿರುವುದು ಸಹಜ ಪ್ರಕ್ರಿಯೆ. ಆದರೆ ಈ ವಾಸ್ತವಿಕತೆಗೆ ಪೂರಕ ಚಿಂತನೆ, ಅಭಿವೃದ್ಧಿಶೀಲತೆ ಜೊತೆಗೂಡಗಿದ್ದರೆ ಜೀವನ ಅವನತಿಯತ್ತ ಸಾಗುತ್ತದೆ. ಅದು ನಿಧಾನ ವಿಷದಂತೆ. ನಾಶದ ಸೆಳೆತಕ್ಕೆ ಸಿಕ್ಕಿಕೊಂಡ ಅರಿವಾಗುವುದು ತುಂಬ ತಡವಾಗಿ.

ಹುಟ್ಟಿದ ಮಗು ಹೆತ್ತವರ ಪಾಲನೆಯಲ್ಲಿ ಶೈಶವ ಕಳೆದು ಯೋಗ್ಯ ಗುಣನಡತೆಯ ಶಿಕ್ಷಣ ಪಡೆದು ದುಡಿದು ಗಳಿಕೆಗೆ ತೊಡಗಿ ಯೋಗ್ಯ ನಾಗರಿಕನಾಗುವುದು ಅಭಿವೃದ್ಧಿಪರ ಚಲನಶೀಲತೆ.

ಕೆಲವು ದಶಕಗಳಿಂದೀಚಿನ ನಗರ ಗ್ರಾಮೀಣ ಬದುಕಾಗಲೀ, ನಗರ ಜೀವನವಾಗಲಿ ಹಿಂದಿನಂತಿಲ್ಲ. ಜೀವನ ನಿರ್ವಹಣೆಗೆ ಹಿಂದೆ ಇದ್ದಷ್ಟು ತೊಡಕುಗಳು ಈಗಿಲ್ಲ. ಅದು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಯ ಫಲ. ಆದರೆ ಜೀವನದಲ್ಲಿ ಮುಂದೆ ಬಂದಿದ್ದೇವೆ ಎಂದುಕೊಳ್ಳುತ್ತಿರುವಾಗಲೇ ಮತ್ತೊಂದು ಪಕ್ಕದಲ್ಲಿ ಹೊಸ ಹೊಸ ಸಮಸ್ಯೆಗಳು, ಗೊಂದಲ, ಸಂಕಷ್ಟಗಳು ಕಂಗೆಡಿಸುತ್ತವೆ. ಮನೆಯೊಳಗಿನ ಕೌಟುಂಬಿಕ/ಸಾಂಸಾರಿಕ ಬದುಕು ಒಂದು ನೆಲೆಯಲ್ಲಾದರೆ ಮನೆಯ ಹೊರಗಿನ ಸಾಮಾಜಿಕ ಜೀವನ ಇನ್ನೊಂದು ನೆಲೆ. ಇವೆರಡಕ್ಕೂ ಪರಸ್ಪರ ಸಂಬಂಧವಿದೆ. ಒಂದು ಇನ್ನೊಂದರ ಮೇಲೆ ಪರಿಣಾಮ ಬೀರುತ್ತದೆ. ಸಾಮಾಜಿಕವಾಗಿ, ರಾಜಕೀಯವಾಗಿ ದೇಶದಲ್ಲಿ, ಊರಿನಲ್ಲಿ ನಡೆಯುವ ಸಂಗತಿಗಳೆಲ್ಲವೂ ವ್ಯಕ್ತಿಯ ಖಾಸಗಿ ಬದುಕಿಗೆ, ಕೌಟುಂಬಿಕ ಸ್ತರಕ್ಕೆ ಪರೋಕ್ಷ ಪ್ರಭಾವ ಬೀರುತ್ತವೆ. ಅದು ಮನೋಧರ್ಮವಾಗುತ್ತದೆ; ಸಂಸ್ಕೃತಿಯಾಗಿ ರೂಪುಗೊಳ್ಳುತ್ತದೆ.

ಸ್ವಾತಂತ್ರ್ಯದ ಅರಿವು ಇಂದು ಬಹುಪಾಲು ಎಲ್ಲರಲ್ಲೂ ಇದೆ. ನಮ್ಮ ರಾಷ್ಟ್ರ ಸ್ವತಂತ್ರಗೊಂಡು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ರೂಪಿಸಿಕೊಳ್ಳುವಾಗ ನಮ್ಮ ಸಂವಿಧಾನಕರ್ತರು, ವಿಚಾರಶೀಲ ಚಿಂತಕರು, ಮುತ್ಸದ್ದಿಗಳು ಬಹಳಷ್ಟು ಅಧ್ಯಯನ ಮುಂದಾಲೋಚನೆ ಮಾಡಿದರು. ಭಾರತೀಯ ಪ್ರಾಚೀನ ಪರಂಪರೆ, ಇಲ್ಲಿನ ವೈವಿಧ್ಯಮಯ ಸಂಸ್ಕೃತಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಪ್ರಜೆಗಳು, ಪ್ರಜೆಗಳ ಪ್ರತಿನಿಧಿಗಳು ಹೀಗೆ ಹೀಗೆಯೇ ಇದ್ದರೆ ಸುಸೂತ್ರ ಬಾಳ್ವೆ ಎಂಬುದಕ್ಕಾಗಿ ನೀತಿ ನಿಯಮಗಳನ್ನು ಕಲ್ಪಿಸಿದರು; ಅತ್ಯುತ್ತಮ ಸಂವಿಧಾನವನ್ನು ರೂಪಿಸಿದರು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹಲವು ರೀತಿಯ ಹಕ್ಕುಗಳನ್ನು, ಹೊಣೆಗಾರಿಕೆ-ಕರ್ತವ್ಯಗಳನ್ನು ನಿರೂಪಿಸಿದರು.

ಆದರೆ ಇಂದು ಹಕ್ಕುಗಳ ಬಗ್ಗೆ ನಮಗೆ ಅರಿವಿರುವಷ್ಟು ಹೊಣೆಗಾರಿಕೆಗಳ ಬಗ್ಗೆ ಎಚ್ಚರವಿಲ್ಲ. ನನಗೆ ಸ್ವಾತಂತ್ರ್ಯವಿದೆ ಎನ್ನುವಾಗ ನನ್ನ ಜೊತೆಗಿರುವ ಇನ್ನೊಬ್ಬನಿಗೂ ಅಥವಾ ಪುರುಷನಷ್ಟೇ ಮಹಿಳೆಗೂ, ಎಲ್ಲ ಮತಧರ್ಮ ಆಚರಣೆಗಳಿಗೂ ಸ್ವಾತಂತ್ರ್ಯವಿದೆ ಎಂಬುದನ್ನು ಕೆಲವೊಮ್ಮೆ ಮರೆಯುತ್ತೇವೆ. ಭ್ರಷ್ಟಾಚಾರವೆಂಬುದು ನಮ್ಮ ಅಧಿಕಾರಶಾಹಿಯನ್ನು ಇಡಿಯಾಗಿ ತುಂಬಿಕೊಂಡು, ಅದು ವ್ಯಕ್ತಿಜೀವನದ ಭ್ರಷ್ಟತೆಗೂ ಸಾಮಾನ್ಯ ಎನ್ನುವಂತೆ ಮುಂದುವರಿದಿದೆ. ’ನಾನು ಹೇಳಿದಂತೆ ಎಲ್ಲವೂ ನಡೆಯಬೇಕು, ಹೇಗಾದರೂ ಸರಿ-ಐಶ್ವರ್ಯ ಸಂಪಾದಿಸಿ ಐಷಾರಾಮಿ ಜೀವನ ಮಾಡಬೇಕು’ ಎಂಬುದು ಒಂದು ವರ್ಗದ ಚಿಂತನೆಯಾದರೆ ಇನ್ನೊಂದು ವರ್ಗ ದುರ್ಬಲ, ಶೋಷಿತರದ್ದು, ಅಧಿಕಾರ, ಆರ್ಥಿಕ ಶಕ್ತಿ ಇಲ್ಲದವರದ್ದು. ಉಳ್ಳವರು ಇಲ್ಲದವರನ್ನು ಶೋಷಣೆ ಮಾಡುವುದು ಇತಿಹಾಸ ಕಾಲದಿಂದ ಆಧುನಿಕ ದಿನಗಳವರೆಗೂ ಬೇರೆ ಬೇರೆ ಸ್ವರೂಪದಿಂದ ಮುಂದುವರಿದುಕೊಂಡೇ ಬಂದಿದೆ. ಇದನ್ನು ಹೇಗೆ ನಿಭಾಯಿಸಬಹುದು?

ಒಂದೊಂದು ಸಾರ್ವಜನಿಕ ಸೇವಾ ಇಲಾಖೆಯಲ್ಲಿಯೂ ಸಾರ್ವಜನಿಕರಿಗೆ ಸೇವೆ ಸರಳವಾಗಿ ಒದಗುತ್ತಿಲ್ಲ. ನೀತಿ, ನಿಬಂಧನೆಗಳೇನೋ ಇವೆ. ಆದರೆ ಜನೋಪಯೋಗಿಯಾಗಿ ಅದು ಅನುಷ್ಠಾನಗೊಳ್ಳುವಲ್ಲಿ ಹತ್ತಾರು ಅಡ್ಡಿಗಳು. ಬಳಕೆದಾರ ಬೇಸತ್ತು ಹೋಗುವಂತಹ ದುಃಸ್ಥಿತಿ. ಗ್ರಾಮ ಪಂಚಾಯತುಗಳ ಮಟ್ಟದಲ್ಲಿ, ತಾಲೂಕು ಕಚೇರಿ ಮಟ್ಟದಲ್ಲಿ, ಜಿಲ್ಲಾ ಮತ್ತು ರಾಜ್ಯದ ಹಂತದಲ್ಲಿ ಸಂಬಳ ತಿನ್ನುವ ಅಧಿಕಾರವರ್ಗ-ಎಲ್ಲರೂ ಅಲ್ಲದಿದ್ದರೂ ಹೆಚ್ಚಿನವರು- ತಾವು ಜನಸೇವಕರು ಎಂಬುದನ್ನು ಮರೆತು ಬಿಟ್ಟಿದ್ದಾರೆ. ಮಂತ್ರಿಮಂಡಳಗಳು ರಾಜಕೀಯ ಪಕ್ಷದ ನೆಲೆಯಲ್ಲಿ ಮತದಾರರನ್ನು ಸೆಳೆದುಕೊಳ್ಳುವ ಒಳದಾರಿ ಹಿಡಿದು ಮತದಾರನ ತುಷ್ಟೀಕರಣಕ್ಕಾಗಿ ಆ ಭಾಗ್ಯ, ಈ ಭಾಗ್ಯ ಎಂಬೆಲ್ಲ ಭಾಗ್ಯಗಳ ಪರಿಮಳದ ಯೋಜನೆಗಳನ್ನು ಜ್ಯಾರಿಗೊಳಿಸುತ್ತವೆ. ಇದರ ಮೂಲಕ ಕೆಲವು ಜನವರ್ಗಕ್ಕೆ ದುಡಿಯದೆಯೂ ತಿನ್ನಬಹುದಾದ ಸುಖವಾದರೆ ಇನ್ನೊಂದು ವರ್ಗಕ್ಕೆ ಎಲ್ಲವೂ ತುಟ್ಟಿಯಾಗಿ ಜೀವನ ನಿರ್ವಹಣೆಯೇ ದುರ್ಬರವೆನಿಸುವುದೂ ಸುಳ್ಳಲ್ಲ. ರಸ್ತೆಗಳು, ಹೆದ್ದಾರಿಗಳು ವರ್ಷಗಟ್ಟಲೆ ದುರಸ್ಥಿ ಕಾರ್ಯ ಮುಗಿಯದೆ ಜನರ ನಿತ್ಯವ್ಯವಹಾರಗಳು ತಲೆಶೂಲೆಯ ನೆನೆಗುದಿಯಾಗುತ್ತಿವೆ. ಆಧಾರ್‌ಕಾರ್ಡ್, ರೇಶನ್ ಕಾರ್ಡ್ ಪಡೆಯಲೆಂದು, ಸೌಲಭ್ಯಗಳಿಗೆ ಶಿಫಾರಸು ಪತ್ರಕ್ಕೆಂದು ಸರಕಾರಿ ಕಚೇರಿಗಳ ಮುಂದೆ ಕ್ಯೂನಿಲ್ಲುತ್ತಾ, ದಿನಗೂಲಿ ನೌಕರರು ಮತ್ತಿತರ ಕೆಲವು ವರ್ಗದ ಉದ್ಯೋಗಿಗಳು ಸಂಬಳ-ಸಂಪಾದನೆಯಿಲ್ಲದೆ ಹಪಹಪಿಸುವ ಸ್ಥಿತಿ ಸದ್ದಿಲ್ಲದ ನೋವಾಗಿದೆ.

ಬಂದ್, ಗಲಭೆ, ಸಂಘರ್ಷ, ಬಾಂಬ್-ಚೂರಿ-ಚಾಕು ಬೆದರಿಕೆ, ರಸ್ತೆ ಅಪಘಾತ ಇವೆಲ್ಲ ಇತ್ತೀಚಿನ ವರ್ಷಗಳ ಸಹಜ ಸ್ಥಿತಿ ಎಂಬಂತಾಗಿದೆ. ಸಾಮಾಜಿಕ ಸಂಘರ್ಷಗಳು ಆಗೀಗ ಧುತ್ತೆಂದು ಉದ್ಭವಿಸುವ ಇಂದಿನ ಸಂದರ್ಭದಲ್ಲಿ ಮೊದಲು ಪ್ರಚೋದಿತರಾಗುವವರು. ಯುವಜನರು, ವಿದ್ಯಾರ್ಥಿಗಳು. ಒಂದರ್ಥದಲ್ಲಿ ಇದೂ ಸಹಜವೇ. ಯುವಶಕ್ತಿಯೇ ನಿರ್ಣಾಯಕ, ಸಮರ್ಥ. ಆದರೆ ಕೆಲವೊಮ್ಮೆ ಯಾವುದು ನ್ಯಾಯ, ಯಾವುದು ಅನ್ಯಾಯ/ಸುಳ್ಳು ಎಂಬುದು ಅರಿವಾಗುವುದರೊಳಗೆ ದುರಂತ ನಡೆದು ಹೋಗಿರುತ್ತದೆ. ಇಂಥ ಸಂದರ್ಭ ವಿವೇಕ, ಹಿರಿಯರ ಸೂಕ್ತ ಮಾರ್ಗದರ್ಶನ ಅಗತ್ಯ.

ಜನಜೀವನ ಸುಸೂತ್ರವಾಗಲು ನಮ್ಮ ಗಾಳಿ, ನೀರು, ಭೂಮಿ, ಪರಿಸರ ಸುಸ್ಥಿತಿಯಲ್ಲಿರಬೇಕು. ನಾವದನ್ನು ಕಾಪಾಡಿಕೊಳ್ಳಬೇಕು. ನಮ್ಮ ಪ್ರದೇಶದ ವಾಯುಮಂಡಲವನ್ನು ಕಲುಷಿತಗೊಳಿಸುವ, ಸಾವಿರಾರು ಜನರ ಅನ್ನದ ಬಟ್ಟಲಾದ ಕೃಷಿ ಭೂಮಿ ನಾಶವಾಗಿ ಅದರಲ್ಲಿ ಮೇಲೇಳುವ ಬೃಹತ್ ಕೈಗಾರಿಕೆಗಳು ಕರಾವಳಿ ಜಿಲ್ಲೆಗಳಿಗೆ ಕಾಲೂರತೊಡಗಿ ದಶಕಗಳೇ ಸಂದಿವೆ. ಆರ್ಥಿಕ ಅಭಿವೃದ್ಧಿಗೆ ಕೈಗಾರಿಕೆಗಳೂ ಬೇಕು ನಿಜ. ಆದರೆ ನಮ್ಮ ಪರಂಪರೆಯ ಪ್ರತೀಕವಾಗಿರುವ, ಅನೇಕರ ಜೀವನಾಧಾರವಾಗಿದ್ದ ಕೃಷಿ ನಾಶವಾಗಿ ಎಲ್ಲೋ ಕೆಲವರಿಗೆ ಲಾಭವಾಗುವ ಇಂಥ ಕೈಗಾರಿಕೆಗಳು ಬೇಕೇ? ಪರಿಸರದ ಹೋರಾಟಗಾರರಿಗೆ ಈ ನಿಟ್ಟಿನಲ್ಲಿ ಯುವ ಸಮುದಾಯ ಅನೇಕ ಸಂದರ್ಭಗಳಲ್ಲಿ ಬೆಂಬಲವಿತ್ತುದು ಮೆಚ್ಚತಕ್ಕ ವಿಚಾರ. ನೇತ್ರಾವತಿ ನದಿ ಬತ್ತುವ ಅಪಾಯದ ’ಎತ್ತಿನ ಹೊಳೆ ಯೋಜನೆ’ಯ ವಿರುದ್ಧ ಪರಿಸರಾಸಕ್ತ ಒಕ್ಕೂಟದ ನಿರಂತರ ಹೋರಾಟಕ್ಕೆ ಹಿರಿಯ ರಾಜಕಾರಣಿ ಶ್ರೀ ಜನಾರ್ದನ ಪೂಜಾರಿಯವರೂ ಸೇರಿದಂತೆ ಪಕ್ಷಭೇದ ಮರೆತು ಹಲವು ನೇತಾರರು ಬೆಂಬಲವಿತ್ತರು. ಕರಾವಳಿ ಎಲ್ಲೆಡೆ ಯುವ ಸಮುದಾಯ ಇದರಲ್ಲಿ ಪಾಲ್ಗೊಂಡದ್ದು ಹೋರಾಟಕ್ಕೆ ಭೀಮಬಲ ಒದಗಿಸಿತ್ತು. ಇಂತಹ ಹಲವು ಸಂದರ್ಭಗಳು ಯುವಜನತೆಯ ಕ್ರಿಯಾಶೀಲ ಬೆಂಬಲದಿಂದ ನಾಡಿನ ಉನ್ನತಿಯ, ಪರಂಪರೆ ರಕ್ಷಣೆಯ ಕಾರ್ಯವನ್ನು ಯಶಸ್ವಿಗೊಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿತು.

ನೆಲಜಲ ಪ್ರೀತಿಯ ಸಂಘಟನಾತ್ಮಕ ಕಾರ್ಯಗಳು ನಮ್ಮ ಯುವಜನತೆಯ ಆದರ್ಶವಾಗಬೇಕು. ತಮ್ಮ ಶೈಕ್ಷಣಿಕ, ನೈತಿಕ, ಆರ್ಥಿಕ ಉನ್ನತಿಯ-ವ್ಯಕ್ತಿತ್ವ ವಿಕಸನದ ಸಾಧನೆಯೊಂದಿಗೆ, ದೀನ, ದಲಿತ, ನೊಂದವರ, ವಯೋವೃದ್ಧರ ಬಗ್ಗೆ ಆದರ, ಸಹಾಯಹಸ್ತ, ಕುಟುಂಬ ಸದಸ್ಯರು, ನೆರೆಹೊರೆ, ಸಮಾಜದ ಜೊತೆಗೆ ಹೊಂದಾಣಿಕೆಯ, ಸಾಮರಸ್ಯದ ಧೋರಣೆ, ಮಹಿಳೆಯರ ಬಗ್ಗೆ ಗೌರವ, ದಬ್ಬಾಳಿಕೆ, ದೌರ್ಜನ್ಯದ ಸಂದರ್ಭ ಹಿಂಸಾರಹಿತ ಪ್ರತಿಭಟನೆ, ಅಮಾಯಕರ ರಕ್ಷಣೆ, ಇಂತಹ ಜೀವನ ಧೋರಣೆಗಳನ್ನು ರೂಪಿಸಿಕೊಂಡಾಗ ಯುವಜನತೆ ಎಲ್ಲರ ಪ್ರೀತ್ಯಾದರ ಗಳಿಸುತ್ತಾರೆ. ತಲೆಮಾರಿನೊಂದಿಗೆ ಅಂತರವೆನಿಸದೆ ಯಶಸ್ಸುಗಳಿಸುತ್ತಾರೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!