ಯುವವಾಹಿನಿ ಕಂಕನಾಡಿ ಘಟಕದ ವತಿಯಿಂದ ಆಯೋಜಿಸಲ್ಪಟ್ಟ 6ತಿಂಗಳ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ದಿನಂಕ 19-08-2017ರಂದು ಉಜ್ಜೋಡಿ ಗೋರಿಗುಡ್ಡೆಯಲ್ಲಿ ನಡೆಯಿತು. ಸಮಾರಂಭದ ಅದ್ಯಕ್ಷತೆಯನ್ನು ಯುವವಾಹಿನಿ ಕಂಕನಾಡಿ ಘಟಕದ ಅಧ್ಯಕ್ಷರಾದ ಗೋಪಾಲ.ಎಂ ಪೂಜಾರಿ ವಹಿಸಿದ್ದರು. ಕೆ.ಪಿ.ಟಿಯ Co-ordinator ಆದ ಗೀತಾಜೈನ್ ರವರು ಹಾಗೂ ಹೊಲಿಗೆ ತರಬೇತಿ ನೀಡಿದ ಶಿಕ್ಷಕಿಯಾದ ಶ್ರೀಮತಿ ಕಾಂತಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು
ತರಬೇತಿ ಪಡೆದ ಮಹಿಳಾ ಸದಸ್ಯರು ಹಾಗೂ ಘಟಕದ ಮಾಜಿ ಅಧ್ಯಕ್ಷರು, ನಿಕಟಪೂರ್ವ ಅಧ್ಯಕರು, ಉಪಾಧ್ಯಕ್ಷರು ಹಾಗೂ ಸದಸ್ಯರು ಭಾಗವಾಹಿಸಿದರು. ಹೊಲಿಗೆ ತರಬೇತಿ ನಡೆನಲು, 6 ತಿಂಗಳ ಕಾಲ ಉಚಿತವಾಗಿ ಸ್ಥಳಾವಕಾಶ ನೀಡಿದ ಶ್ರೀ ದೇವದಾಸ ಸುವರ್ಣ ದಂಪತಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಲಾಯಿತು. ಶ್ರೀಮತಿ ಗೀತಾಜೈನ್ ಮತ್ತು ಶ್ರೀಮತಿ ಕಾಂತಿಯವರಿಗೂ ಶಾಲು ಹೋದಿಸಿ ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಲಾಯಿತು.
ಉತ್ತಮ ಕಾರ್ಯಕ್ರಮ ಅಭಿನಂದನೆಗಳು