ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದಿಂದ ಹಳೇ ಬೇರು ಹೊಸ ಚಿಗುರು : ಬಾಂಧವ್ಯ ಬೆಸುಗೆ ಕಾರ್ಯಕ್ರಮ ದಿನಾಂಕ 07/07/2019ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ಹಳೆ ಬೇರು ಹೊಸ ಚಿಗುರು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಯಶ್ರೀ ನಾನಿಲ್ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಕಲಾವತಿ ಜಯಂತ್ ನಡುಬೈಲ್, ಪಿ ವಿ ಸ್ ಎಸ್ ಗುಂಪಿನ ಕಾನೂನು ಸಲಹೆಗಾರರಾದ ಕುಮಾರಿ ಶ್ರೀದೇವಿ, ಘಟಕದ ಸಲಹೆಗಾರರಾದ ಜಿತ್ಹೇಂದ್ರ ಸುವರ್ಣ, ಕೇಂದ್ರಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕರಾದ ಪಾರ್ವತಿ ಅಮೀನ್, ಘಟಕದ ಮಹಿಳಾ ನಿರ್ದೇಶಕರಾದ ರಮಣಿ, ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಉಮಾ ಶ್ರೀಕಾಂತ್ ವಹಿಸಿಕೊಂಡಿದ್ದರು. ಮಹಿಳಾ ಸಂಘಟನೆ, ಸವಾಲುಗಳು, ಸಾಧನೆ,ಬಗ್ಗೆ ಸಂವಾದ ಕಾರ್ಯಕ್ರಮವನ್ನು ನಮ್ಮ ಕುಡ್ಲ ಚಾನೆಲ್ ನ ನಿರೂಪಕಿ ಪವಿತ್ರ ನಡೆಸಿಕೊಟ್ಟರು.14 ಮಂದಿ ಮಾಜಿ ಮಹಿಳ ಅಧ್ಯಕ್ಷ ರುಗಳು ಹಾಗೂ ಘಟಕದ ಅಧ್ಯಕ್ಷರು ಸಂವಾದದಲ್ಲಿ ಭಾಗವಹಿಸಿದರು. ನಂತರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವೀಣಾ ಟಿ ಶೆಟ್ಟಿ , ಶಾಲಿನಿ ರವಿ ಉಪಸ್ಥಿತರಿದ್ದರು. ನಂತರ ಘಟಕದ ಮಾಜಿ ಅಧ್ಯಕ್ಷರುಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.