ಮಂಗಳೂರು: 15-08-2024 ಗುರುವಾರದಂದು 78ನೇ ಸ್ವಾತಂತ್ರೋತ್ಸವ ಆಚರಣೆಯ ಪ್ರಯುಕ್ತ ಬೆಳಿಗ್ಗೆ 10.00 ಘಂಟೆಗೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕುಂಟಲ್ಪಾಡಿಯಲ್ಲಿ ನಡೆಯಿತು.
ನಾರಾಯಣ ಗುರುವರ್ಯರನ್ನು ಪ್ರಾರ್ಥಿಸಿ, ಘಟಕದ ಅಧ್ಯಕ್ಷರಾದ ಗಣೇಶ್ ಕೆ ಮಹಾಕಾಳಿ ಇವರು ಬಂದಂತಹ ಎಲ್ಲರನ್ನು ಸ್ವಾಗತಿಸಿದರು. ಘಟಕದ ಹಿರಿಯ ಸದಸ್ಯರೆಲ್ಲ ಸೇರಿ ಧ್ವಜಾರೋಹಣವನ್ನು ಮಾಡಿದರು. ಎಲ್ಲರೂ ಒಟ್ಟಿಗೆ ಧ್ವಜ ಗೀತೆಯನ್ನು ಹಾಡಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು.
ಕುಮಾರಿ ಧೃತಿಯವರು ದೇಶಾಭಿಮಾನದ ಬಗ್ಗೆ ದೇಶಭಕ್ತಿ ಗೀತೆಯನ್ನು ಹಾಡಿದರು. ನಂತರ ಘಟಕದ ಹಿರಿಯ ಸದಸ್ಯರು ಹಾಗೂ ಬಂದಂತಹ ಅತಿಥಿಗಳು 78ನೇ ಸ್ವಾತಂತ್ರ್ಯೋತ್ಸವದ ಬಗ್ಗೆ ಶುಭಾಶಯ ನೀಡಿದರು. ಸ್ಥಾಪಕ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಪೂಜಾರಿಯವರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನು ತ್ಯಜಿಸಿದ ಹುತಾತ್ಮರ ಬಗ್ಗೆ ಗೌರವವಾಗಿ ಎರಡು ಮಾತುಗಳನ್ನಾಡಿದರು. ಘಟಕದ ಅಧ್ಯಕ್ಷರಾದ ಗಣೇಶ್ ಕೆ ಮಹಾಕಾಳಿ ಅವರು ಸ್ವಾತಂತ್ರ್ಯೋತ್ಸವದ ಕುರಿತು ಒಂದೆರಡು ಮಾತುಗಳನ್ನಾಡಿ ನಮ್ಮ ಘಟಕದ ಪರವಾಗಿ ಹೆಮ್ಮೆಯನ್ನು ವ್ಯಕ್ತಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಗಣೇಶ್ ಕೆ ಮಹಾಕಾಳಿ ಒಂದನೇ ಉಪಾಧ್ಯಕ್ಷರಾದ ಶ್ರೀ ತುಕಾರಾಂ ಕುಂಟಲ್ಪಾಡಿ ಕೋಶಾಧಿಕಾರಿಗಳಾದ ಶ್ರೀ ನವೀನ್ ಕುಮಾರ್, ಸ್ಥಾಪಕ ಅಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ, ಉಪಸ್ಥಿತರಿದ್ದರು.
ಕಾರ್ಯದರ್ಶಿಗಳಾದ ಅಕ್ಷತ ಚರಣ್ ಬಂದಂತಹ ಎಲ್ಲರಿಗೂ ಧನ್ಯವಾದಗೈದರು. ಶ್ರೀಮತಿ ಕವಿತಾ ತುಕರಾಮ್ ಕಾರ್ಯಕ್ರಮ ನಿರೂಪಿಸಿದರು.