ಯುವವಾಹಿನಿ (ರಿ) ಬೆಳ್ತಂಗಡಿ ಘಟಕ ದಿಂದ ತುಳುನಾಡ ತುಡರ್ ಪರ್ಬ ಸಾಮೂಹಿಕ ದೀಪವಾಳಿ ಆಚರಣೆ.
ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಯುವವಾಹಿನಿ ಮಹಿಳಾ ಸಂಚಲನ ಸಮಿತಿ ಬೆಳ್ತಂಗಡಿ, ಗೆಳೆಯರ ಬಳಗ ಗುರುವಾಯನಕೆರೆ,ಶಾರದಾಂಬ ಭಜನಾ ಮಂಡಳಿ ಗುರುವಾಯನಕೆರೆ,ಶ್ರೀ ಗುರು ಮಿತ್ರ ಸಮೂಹ ಬೆಳ್ತಂಗಡಿ, ವಿದ್ಯಾ ನಿಕೇತನ ನ್ರತ್ಯ ಶಾಲೆ ಗುರುವಾಯನಕೆರೆ ಇವರ ಸಹಕಾರದಿಂದ ದೀಪಾವಳಿ ಹಬ್ಬದ ಪ್ರಯುಕ್ತ ತುಳುನಾಡ ತುಡರ್ ಪರ್ಬ ಸಾಮೂಹಿಕ ದೀಪಾವಳಿ ಆಚರಣೆ ಅ 26ರಂದು ಗುರುವಾಯನಕೆರೆ ಶಾರದಾ ಮಂಟಪದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಇದರ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ನಿರೂಪಕ ದಿನೇಶ್ ಸುವರ್ಣ ರಾಯಿ, ಕಾರ್ಯಕ್ರಮ ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಯುವವಾಹಿನಿ ಕೆಂದ್ರ ಸಮಿತಿಯ ಅಧ್ಯಕ್ಷ ನರೇಶ್ ಕುಮಾರ್ ಸಶಿಹಿತ್ಲ್ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷ ತೆಯನು ಬೆಳ್ತಂಗಡಿ ಘಟಕದ ಅಧ್ಯಕ್ಷ ಹರೀಶ್ ಸುವರ್ಣ ವಹಿಸಿದರು.
ಈ ಸಂದರ್ಭದಲ್ಲಿ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಇಂದು ಕುಣಿತ ಭಜನೆ, ಸ್ಪಂದನ ಸೇವಾ ಯೋಜನೆಯ ಅಡಿಯಲ್ಲಿ 35000 ಆರ್ಥಿಕ ಸಹಾಯ.
1000 ಹಣತೆಯನ್ನು ಸಾಮೂಹಿಕ ಬೆಳಗಿಸಲಾಹಿತ್ತು.ಗೋಪೂಜೆ, ಇಂತಹ ವಿಶೇಷ ಕಾರ್ಯಕ್ರಮ ದಲ್ಲಿ ಗುರುವಾಯನಕೆರೆಯ ಜನಪ್ರಿಯ ವ್ಯದ್ಯ ಡಾ! ವೇಣು ಗೋಪಾಲ ಶರ್ಮಾ ಇವರನ್ನು ಗೌರವಿಸಲಾಯಿತು.
ಸ್ಪಂದನ ಸೇವಾ ಯೋಜನೆಯಿಂದ. ಬೆಳ್ತಂಗಡಿ ಹುಣ್ಸೆಕಟ್ಟೆಯ ನಿವಾಸಿ ವಾಮದಪದವು ಕಾಲೇಜಿನಲ್ಲಿ Ist year M.Com ವ್ಯಾಸಂಗ ಮಾಡುತ್ತಿರುವ ದಿವ್ಯ ಇವರಿಗೆ ರೂಪಾಯಿ 10,000.00 ವಿದ್ಯಾನಿಧಿ ನೀಡಲಾಯಿತು.
ಬೆಳ್ತಂಗಡಿ ಸುವರ್ಣ ಪ್ರತೀಷ್ಟಾನದ ಅಧ್ಯಕ್ಷ ಸಂಪತ್ ಸುವರ್ಣ, ಗುರುವಾಯನಕೆರೆ ಗೆಳೆಯರ ಬಳಗದ ಅಧ್ಯಕ್ಷ ಮೋಹನ್ ಕಂಚಿಂಚೆ, ಯುವವಾಹಿನಿ ಮಹಿಳಾ ಸಂಚಲನ ಸಮಿತಿಯ ಅಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ, ಶ್ರೀ ಶಾರದಾಂಬ ಭಜನಾ ಮಂಡಳಿ ಅಧ್ಯಕ್ಷೆ ರೀತಾ ವೈ ಆಚಾರ್ಯ, ವಿದ್ಯಾ ನೀಕೆತನ ನ್ರತ್ಯ ಶಾಲಾ ನೀರ್ದೆಶಕಿ ಹರ್ಷಿತಾ ಟಿ.ಪಿ ಮುಖ್ಯ ಅತಿಥಿಗಳಾಗಿ ಬಾಗವಹಿಸಿದರು.
ಯುವವಾಹಿನಿ ಬೆಳ್ತಂಗಡಿ ಘಟಕದ ನಿಕಟ ಪೂರ್ವ ಅಧ್ಯಕ್ಷ ಪ್ರಶಾಂತ್ ಮಚ್ಚಿನ ಸ್ವಾಗತಿಸಿದರು.
ಸುಧಾ ರಮಾನಂದ ಮತ್ತು ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.
ಗೆಳೆಯರ ಬಳಗದ ಮಾಜಿ ಅಧ್ಯಕ್ಷ ಆನಂದ ಕೋಟ್ಯಾನ್ ವಂದಿಸಿದರು.