ಮಂಗಳೂರು : ಶ್ರೀ ನಾರಾಯಣ ಗುರುಗಳ ಸಂದೇಶಗಳು ಇಂದಿನ ಕಾಲಘಟ್ಟಕ್ಕೆ ಪೂರಕವಾಗಿದ್ದು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಇಂದಿನ ಜನತೆ ಮುಂದಾಗಬೇಕು. ನಾವು ಕಷ್ಟದಲ್ಲಿರುವಾಗ ನಮಗೆ ಯಾರೂ ಸಹಾಯ ಮಾಡಲಾರರು ಎನ್ನುವುದನ್ನು ಅರಿತು ಸ್ವಾವಲಂಬಿಯಾಗಿ ಬದುಕಬೇಕು ಎಂದು ಚಲನಚಿತ್ರ ನಿರ್ದೇಶಕ, ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸ್ಮಿತೇಶ್ ಎಸ್.ಬಾರ್ಯ ತಿಳಿಸಿದರು. ಅವರು 16-09-2024 ರವಿವಾರದಂದು ಯುವವಾಹಿನಿ (ರಿ) ಕಂಕನಾಡಿ ಘಟಕ ಆಯೋಜಿಸಿದ್ದ ಗುರು ಸ್ಮರಣೆ – ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಗುರು ಸಂದೇಶ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಡಾ. ಪ್ರೀತಂರಾಜ್ ಸಾಲ್ಯಾನ್ “ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳಿಂದ ಪ್ರೇರಿತವಾದ ಯುವವಾಹಿನಿ ಸಂಘಟನೆಯಿಂದ ಇನ್ನಷ್ಟು ಹೆಚ್ಚಿನ ಸಮಾಜಮುಖಿ ಕಾರ್ಯಕ್ರಮ ನಡೆಯಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಕನಾಡಿ ಘಟಕದ ಅಧ್ಯಕ್ಷರಾದ ರಾಹುಲ್ ಸನಿಲ್ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು.
ಡಾ. ಉಜ್ವಲ್.ಯು.ಸುವರ್ಣ, ಯುವವಾಹಿನಿ (ರಿ) ಕೇಂದ್ರ ಸಮಿತಿಯ ನಾರಾಯಣ ಗುರು ತತ್ವಾದರ್ಶ ಅನುಷ್ಠಾನ ಹಾಗೂ ಪ್ರಚಾರ ನಿರ್ದೇಶಕರಾದ ಮೋಹನ್ ಮಾಡೂರು, ಘಟಕದ ನಾರಾಯಣ ಗುರು ತತ್ವಾದರ್ಶ ಅನುಷ್ಠಾನ ಹಾಗೂ ಪ್ರಚಾರ ನಿರ್ದೇಶಕರಾದ ರೋಹಿತ್, ಘಟಕದ ಕಾರ್ಯದರ್ಶಿ ನವೀನ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಪೂರ್ವ ಮತ್ತು ತಜ್ಞರವರು ಪ್ರಾರ್ಥಿಸಿದರು. ವೀಣಾ. ಬಿ. ಕೆ. ಮತ್ತು ತನುಷ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.