ಕೆಂಜಾರು : ಸಾಧನೆಗೆ ಗುರಿಗಿಂತ ಛಲವೇ ಮುಖ್ಯ, ತರಬೇತಿಗಳಿಗೆ ಬದುಕಿನ ಹಾದಿಗೆ ಹೊಸ ತಿರುವು ನೀಡಬಲ್ಲ ಶಕ್ತಿ ಇದೆ. ಈ ನಿಟ್ಟಿನಲ್ಲಿ ಯುವವಾಹಿನಿ ಕೆಂಜಾರು ಕರಂಬಾರು ಘಟಕದ ಕಾರ್ಯ ಶ್ಲಾಘನೀಯ ಎಂದು ಯುವವಾಹಿನಿ ಕೆಂಜಾರು ಕರಂಬಾರು ಘಟಕದ ಸಲಹೆಗಾರ ಪರಮೇಶ್ವರ ಪೂಜಾರಿ ತಿಳಿಸಿದರು.
ಅವರು ದಿನಾಂಕ 16.06.2018 ರಂದು ಯುವವಾಹಿನಿ (ರಿ) ಕೆಂಜಾರು ಕರಂಬಾರು ಘಟಕದ ಆಶ್ರಯದಲ್ಲಿ ಕೆಂಜಾರು ಶ್ರೀ ದೇವಿ ಭಜನಾ ಮಂದಿರದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಜರುಗಿದ ವೃತ್ತಿ ಕೌಶಲ್ಯ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸರ್ವಜ್ಞ ಐ.ಎ.ಎಸ್ ಅಕಾಡೆಮಿಯ ನಿರ್ದೇಶಕ ಸುರೇಶ್ ಎಮ್.ಎಸ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಬಿರ ನಡೆಸಿಕೊಟ್ಟರು. ಯುವವಾಹಿನಿ ಕೆಂಜಾರು ಕರಂಬಾರು ಘಟಕದ ಅಧ್ಯಕ್ಷ ಗಣೇಶ್ ಅರ್ಬಿ ಸಮಾರಂಭ ಅಧ್ಯಕ್ಷತೆ ವಹಿಸಿದ್ದರು.
ಈ ಶಿಬಿರದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು. ಘಟಕದ ಕಾರ್ಯದರ್ಶಿ ಜಿತೇಶ್ ಪೂಜಾರಿ ಸ್ವಾಗತಿಸಿದರು,