ಉಡುಪಿ:- ಯುವವಾಹಿನಿ ಉಡುಪಿ ಘಟಕದಿಂದ ತಲೆಗೊಂದು ಸೂರು ಯೋಜನೆಯ ಬಡ ಕುಟುಂಬದ ಮನೆ ಕಟ್ಟಿ ಕೊಡುವ ಸಹಾಯಾರ್ಥ ದಿನಾಂಕ 17 ಡಿಸೆಂಬರ್ 2022 ಶನಿವಾರದಂದು ಅಜ್ಜರಕಾಡು ಬಯಲು ರಂಗ ಮಂದಿರದಲ್ಲಿ ಅಭಿನಯ ಕಲಾವಿದರು ಉಡುಪಿ ತಂಡದ “ಶಾಂಭವಿ” ನಾಟಕ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ರಾಜಕುಮಾರ್ ಅಂಬಲಪಾಡಿ ಇವರನ್ನು ಗೌರವಿಸಲಾಯಿತು, ಅತಿಥಿಗಳಾಗಿ ಆಗಮಿಸಿದಂತ ಕೃಷ್ಣ ಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಪೊಲೀಸ್ ಅಧಿಕಾರಿಗಳಾದ ರಾಮಚಂದ್ರ ಬೈಂದೂರು , ಅಭಿನಯ ತಂಡದ ಅಧ್ಯಕ್ಷರಾದ ಉಮೇಶ್ ಅಲೆವೂರು ಇವರಿಗೆ ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ಮಹಾಬಲ ಅಮೀನ್ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ತಲೆಗೊಂದು ಸೂರು ಸಮಿತಿಯ ಸಂಚಾಲಕರಾದ ರಘುನಾಥ್ ಮಾಬಿಯನ್, ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್, ಉಮೇಶ ಕರ್ಕೇರ, ಹಾಗೂ ಮಾಜಿ ಅಧ್ಯಕ್ಷರು, ಸದಸ್ಯರು ಮಹಿಳಾ ಸದಸ್ಯರು ಉಪಸ್ಥಿತರಿದ್ದರು. ದಯಾನಂದ ಉಪ್ಪುರು ಕಾರ್ಯಕ್ರಮ ನಿರೂಪಿಸಿದರು. ಶಾಂಭವಿ ನಾಟಕ ಯಶಸ್ವೀಯಾಗಿ ಪ್ರದರ್ಶನ ಗೊಂಡಿತು.ಅಧ್ಯಕ್ಷರಾದ ಮಹಾಬಲ ಅಮೀನ್ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.