ಕೊಲ್ಯ :- ಬ್ರಹ್ಮಶ್ರೀ ನಾರಾಯಣಗುರುಗಳ 168 ನೇ ಜನ್ಮದಿನಾಚರಣೆಯ ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಅಭಯ ಆಶ್ರಯ ಅಸೈಗೋಳಿಯಲ್ಲಿ, ನಾರಾಯಣಗುರುಗಳ ತತ್ವ ಮತ್ತು ಸಂದೇಶಗಳಲ್ಲಿ ಒಂದಾಗಿರುವ ಪರಿಸರವನ್ನು ರಕ್ಷಿಸಿ ಅದು ನಿಮ್ಮನ್ನು ರಕ್ಷಿಸುತದೆ ಎನ್ನುವುದಕ್ಕೆ ಪೂರಕವಾಗಿ ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳುವ ಕೆಲವೊಂದು ಗಿಡಗಳನ್ನು ನೆಡಲಾಯಿತು. ಅಭಯ ಆಶ್ರಯದ ಪದಾಧಿಕಾರಿಗಳು, ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷರಾದ ಶ್ರೀ ಸುಂದರ್ ಸುವರ್ಣ , ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಬ್ರಹ್ಮಶ್ರೀ ನಾರಾಯಣಗುರು ತತ್ವ ಮತ್ತು ಪ್ರಚಾರ ನಿರ್ದೇಶಕರಾದ ಕು.ಭಾರತಿ ಸನಿಲ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಶ್ರೀ ನಿತಿನ್ ಕರ್ಕೆರ ಧನ್ಯವಾದ ಸಮರ್ಪಿಸಿದರು.