ಯುವವಾಹಿನಿ ಸಂಸ್ಥೆಯು ಯುವ ಸಮುದಾಯವನ್ನು ಕಟ್ಟಿ ಬೆಳೆಸುವ ಧ್ಯೇಯದೊಂದಿಗೆ ಇಂದು ಮಾದರಿಯಾಗಿ ಬೆಳೆದಿದೆ. ಸಮಾಜಮುಖಿ ಚಿಂತನೆಯಿಂದ ತಮ್ಮ ಸೇವೆಯನ್ನು ಎಲ್ಲಾ ಸಮಾಜಕ್ಕೂ ನೀಡುತ್ತಿರುವುದು ಶ್ಲಾಘನೀಯ ಇಂತಹ ಸೇವಾ ಸಂಸ್ಥೆಗೆ ಉತ್ತಮ ಭವಿಷ್ಯವಿದೆ ಎಂದು ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಚಂದ್ರಶೇಖರ ನಾನಿಲ್ ಹೇಳಿದರು.
ಅವರು ದಿನಾಂಕ 20.03.2022 ರಂದು ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ವಠಾರದಲ್ಲಿ ಹಳೆಯಂಗಡಿ ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಘಟಕದ ನಿರ್ಗಮನ ಅಧ್ಯಕ್ಷರಾದ ಹರೀಶ್ ಆರ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಹಳೆಯಂಗಡಿ ಘಟಕದಿಂದ ಹಳೆಯಂಗಡಿ ಬಿಲ್ಲವ ಸಂಘದ ಕಟ್ಟಡ ಸಮಿತಿಗೆ ರೂ ಒಂದು ಲಕ್ಷ ವನ್ನು ಹಸ್ತಾಂತರಿಸಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಅವರು ನೂತನ ಅಧ್ಯಕ್ಷರಾದ ಕಿರಣ್ ಕುಮಾರ್ ಅವರ ತಂಡದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಶೈಕ್ಷಣಿಕ ಸಾಧಕಿ ರಶ್ಮಿ ಆರ್., ಕ್ರೀಡಾ ಕ್ಷೇತ್ರದ ಸುಷ್ಮಾ ತಾರನಾಥ್ ಅಮೀನ್ ಪಿಎಚ್. ಡಿ. ಪದವೀಧರೆ ಡಾ. ಅನುಷಾ ಶರತ್ ಸಾಲಿಯಾನ್, ಲಯನ್ಸ್ ಕ್ಲಬ್ ನ ಸಾಧಕ ರಮೇಶ್ ಬಂಗೇರ ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ವಿನೋದ್ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರು ಉದಯ ಅಮೀನ್ ಮಟ್ಟು ಅವರನ್ನು ಸಂದರ್ಭ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ನ ಪ್ರಾಂತೀಯ ಅಧ್ಯಕ್ಷರು ರಮೇಶ್ ಬಂಗೇರ,ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರು ಮೋಹನ್ ಸುವರ್ಣ, ಸಂಘದ ಗೌರವಾಧ್ಯಕ್ಷ ಗಣೇಶ್ ಬಂಗೇರ ಉಪಸ್ಥಿತರಿದ್ದರು. ದೀಪಕ್ ನಾನಿಲ್ ಸ್ವಾಗತಿಸಿದರು, ಶರತ್ ಸಾಲಿಯಾನ್ ಪ್ರಸ್ತಾವನಾಗೈದರು, ಕೇಂದ್ರ ಸಮಿತಿ ಯ ಸಂಘಟನ ಕಾರ್ಯದರ್ಶಿ ಅರುಣ್ ಕುಮಾರ್ ಹಾಗೂ ಭಾಸ್ಕರ್ ಸಾಲಿಯಾನ್ ಪರಿಚಯಿಸಿದರು. ಘಟಕದ ಕಾರ್ಯದರ್ಶಿ ಚೇತನ್ ವಾರ್ಷಿಕ ವರದಿ ವಾಚಿಸಿದರು. ಕಲ್ಲಾಡಿ ಹಿಮಕರ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.