ಕಂಕನಾಡಿ : ಸಂಸ್ಕೃತಿ ಉಳಿದರೆ ಪರಿಸರ ಉಳಿಯುತ್ತದೆ. ದೇಶದ ಅಭಿವೃದ್ಧಿ ಯಾಗಬೇಕಾದರೆ ಮಾನವರ ಅಭಿವೃದ್ಧಿಯಾಗಬೇಕು. ಸುಸ್ಥಿರ ಅಭಿವೃದ್ಧಿ ಗುರಿಗಳಿದ್ದರೆ ಮಾತ್ರ ಮಾನವರ ಅಭಿವೃದ್ಧಿ ಸಾಧ್ಯ ಎಂದು ರೋಶನಿ ನಿಲಯದ ಚೈಲ್ಡ್ ಲೈನ್ ನಗರ ಸಂಚಾಲಕರಾದ ಯೋಗಿಶ್ ಮಲ್ಲಿಗೆ ಮಾಡು ತಿಳಿಸಿದರು.
ಅವರು ದಿನಾಂಕ 07-06-2018ರಂದು ಯುವವಾಹಿನಿ (ರಿ) ಕಂಕನಾಡಿ ಘಟಕದ ವಾರದ ಸಭೆಯಲ್ಲಿ “ತಂಬಾಕು ರಹಿತ ದಿನ” ಮತ್ತು “ವಿಶ್ವ ಪರಿಸರ ದಿನಾಚರಣೆ”ಯ ಪ್ರಯುಕ್ತ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಮಾದಕ ವ್ಯಸನಗಳಲ್ಲಿ ತಂಬಾಕು ಕೂಡ ಒಂದು. ವ್ಯಸನ ನಿರತ ವ್ಯಕ್ತಿ ಸ್ವ ಅರಿವು ಮೂಡಿಸಿಕೊಂಡು ವ್ಯಸನಗಳನ್ನು ಬಿಡಬೇಕೇ ಹೊರತು ಬೇರೆಯವರಿಂದ ಬಿಡಿಸಲು ಸಾಧ್ಯ ಇಲ್ಲ. ಆದರೆ ವ್ಯಸನಗಳಿಂದ ಹೊರಬರಲು ಅವರಿಗೆ ಬೆಂಬಲ ನೀಡುವ ವ್ಯಕ್ತಿ ಬೇಕು ಎಂದರು
ಅತಿಥಿಯಾಗಿ ಆಗಮಿಸಿದ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಪದ್ಮನಾಭ ಮರೋಳಿಯವರು ಮಾತನಾಡಿ ಹಸಿರಿದ್ದರೆ ಮಾತ್ರ ಉಸಿರು. ನಾವು ಪರಿಸರ ಉಳಿಸುವ ಕೆಲಸ ಮಾಡೋಣ ಎಂದರು. ಘಟಕದ ಸಲಹೆಗಾರರಾದ ಜಿತೇಂದ್ರ ಸುವರ್ಣ ರವರು ನಾವು ಪರಿಸರ ದೊಂದಿಗೆ ಹೊಂದಿಕೊಂಡು ಬಾಳಬೇಕು ಎಂದರು.
ಕಂಕನಾಡಿ ಘಟಕದ ಅಧ್ಯಕ್ಷ ಭವಿತ್ ರಾಜ್ , ಕಾರ್ಯದರ್ಶಿ ಸುಮಾ ವಸಂತ್, ನಿಕಟಪೂರ್ವ ಅಧ್ಯಕ್ಷ ಗೋಪಾಲ ಪೂಜಾರಿ ಉಪಸ್ಥಿತರಿದ್ದರು.