ಮಂಗಳೂರು :- ದಿನಾಂಕ 26 ಅಕ್ಟೋಬರ್ 2022ರಂದು ಮಂಗಳೂರು ಘಟಕದ ವತಿಯಿಂದ ದೀಪಾವಳಿಯ ಸಂಭ್ರಮಾಚರಣೆಯನ್ನು ಯುವವಾಹಿನಿ ಸಭಾಂಗಣದಲ್ಲಿ ಆಚರಿಸಲಾಯಿತು. ಪ್ರಾರಂಭದಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸಲಾಯಿತು. ಗುರುಗಳ ಭಾವಚಿತ್ರದ ಸಾನಿಧ್ಯದಲ್ಲಿ ಗುರು ಪೂಜೆಯನ್ನು ನಡೆಸಿ, ಎಲ್ಲರಿಗೂ ಪ್ರಸಾದ ವಿತರಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್ ರವರು ಎಲ್ಲಾ ಮಾಜಿ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು ಹಾಗೂ ಸರ್ವ ಸದಸ್ಯರನ್ನು ಆತ್ಮೀಯವಾಗಿ ಸಭೆಗೆ ಸ್ವಾಗತಿಸಿದರು. ಕಾರ್ಯದರ್ಶಿಯವರಾದ ಅಶೋಕ್ ಅಂಚನ್ ರವರು ಗತ ಸಭೆಯ ವರದಿಯನ್ನು ಮಂಡಿಸಿ, ಅನುಮೋದನೆ ಪಡಕೊಂಡರು. 2008ರಲ್ಲಿ ಮಂಗಳೂರು ಘಟಕದ ಅಧ್ಯಕ್ಷರಾಗಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ ಮಾಧವ ಕೋಟ್ಯಾನ್ ರವರು ಸರ್ವ ಧರ್ಮ ಸಮನ್ವತೆಯ ದೀಪಗಳ ಹಬ್ಬ ದೀಪಾವಳಿಯ ಮೊದಲ ದಿವಸ ಬಲಿಪಾಡ್ಯಮಿ, ಎರಡನೇ ದಿನ ಲಕ್ಷ್ಮಿ ಪೂಜೆ ಹಾಗೂ ಮೂರನೇ ದಿವಸದ ಸಂಭ್ರಮದ ದೀಪಾವಳಿಯ ಆಚರಣೆಯ ಬಗ್ಗೆ ಸವಿಸ್ತಾರವಾಗಿ ಸಭೆಯಲ್ಲಿ ತಿಳಿಸಿದರು. ಮಾಧವ್ ಕೋಟ್ಯಾನ್ ರವರನ್ನು ಘಟಕದ ಎಲ್ಲಾ ಸದಸ್ಯರು ಅಭಿನಂದಿಸಿ ಹಾಗೂ ಪರಸ್ಪರ ದೀಪಾವಳಿಯ ಶುಭಾಶಯಗಳನ್ನು ಹಂಚಿಕೊಂಡರು. ಕಾರ್ಯದರ್ಶಿಯವರು ಬಂದಂತಹ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರೆ, ಪ್ರವೀಣ್ ಕುಮಾರ್ ಕೋಡಿಕಲ್ ರವರು ಲೋಕಕಲ್ಯಾಣ ಮಂತ್ರ ಪಠಿಸುವುದರೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು. ಎಲ್ಲಾ ಸದಸ್ಯರು ಗುರುಗಳ ಸಾನಿಧ್ಯದಲ್ಲಿ ಹಣತೆಯನ್ನ ಹಚ್ಚಿ, ಗುರುಗಳಿಗೆ ಪ್ರಾರ್ಥನೆ ಸಲ್ಲಿಸಿ, ವರಾಂಡದಲ್ಲಿ ಪಟಾಕಿ ಸಿಡಿಸಿ, ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಿದರು. ಕೊನೆಯಲ್ಲಿ ಎಲ್ಲರಿಗೂ ದೀಪಾವಳಿಯ ಸಿಹಿ ತಿಂಡಿ ಹಂಚಿ, ಫಲಾಹಾರ ನೀಡಿ ಸತ್ಕರಿಸಲಾಯಿತು.