ಯುವ ಸಿಂಚನ : ಗಂಗಾಧರ ಪೂಜಾರಿ -ಕಾರ್ಯನಿರ್ವಾಹಕ ಸಂಪಾದಕರು

ಸಂಪಾದಕರ ಮಾತು

ಪ್ರೀತಿಯ ವಾಚಕರೇ,

ಅನುಭವ ಮತ್ತು ಛಲ ಮನುಷ್ಯನ ಭವಿಷ್ಯವನ್ನು ರೂಪಿಸುತ್ತದೆ. ಇದು ಕೇವಲ ಒಬ್ಬ ಮನುಷ್ಯನಿಗೆ ಮಾತ್ರವಲ್ಲ. ಸಿಬ್ಬಂದಿ ಇರುವ ಎಲ್ಲಾ ಸಂಸ್ಥೆಗಳಿಗೂ ಕೂಡ ಅನ್ವಯಿಸುತ್ತದೆ. ಯಾವ ಸಂಸ್ಥೆಯಲ್ಲಿ ಸಕಾರಾತ್ಮಕವಾಗಿ ಯೋಚಿಸುವ ಸಿಬ್ಬಂದಿ ಇರುತ್ತದೋ ಅಂತಹ ಸಂಸ್ಥೆ ಯಶಸ್ವಿಯಾಗುತ್ತದೆ. ಯಾವ ಸಂಸ್ಥೆಯ ಸಿಬ್ಬಂದಿಗಳಲ್ಲಿ ಪ್ರಾಮಾಣಿಕತೆ ಮತ್ತು ಸಕಾರಾತ್ಮಕ ದುಡಿಮೆ ಇರುವುದಿಲ್ಲವೋ, ಕೇವಲ ಸಂಬಳಕ್ಕಾಗಿ ಮಾತ್ರ ಕಾದು ನೋಡುತ್ತಾರೋ ಅಂತಹ ಸಂಸ್ಥೆ ಹೇಳ ಹೆಸರಿಲ್ಲದೆ ನಿರ್ಣಾಮವಾಗಿ ಹೋಗುತ್ತದೆ. ಇದಕ್ಕೆ ಕಾರಣ ದುಡಿತದ ಹಿಂದಿರುವ ಜವಾಬ್ದಾರಿಯ ಕೊರತೆ. ನಮ್ಮ ಜನರಲ್ಲಿ ಅಪಾರ ಜ್ಞಾನವಿದೆ, ಕೌಶಲ್ಯವಿದೆ. ಆದರೆ ಮಾಡಬೇಕಾದ ಕೆಲಸವನ್ನು ತ್ವರಿತವಾಗಿ ಮತ್ತು ನಿಷ್ಠೆಯಿಂದ ತನ್ನದೇ ಕೆಲಸವೆಂಬ ಜವಾಬ್ದಾರಿಯಿಂದ ಮಾಡುವುದಿಲ್ಲ. ಹಾಗಾದಾಗ ಸಂಸ್ಥೆ ಯಶಸ್ವಿಯಾಗಲು ಹೇಗೆ ಸಾಧ್ಯ? ಈ ಬಗ್ಗೆ ಸಂಸ್ಥೆಯ ಮಾಲೀಕರು ಮತ್ತು ಸಿಬ್ಬಂದಿ ವರ್ಗದವರು ಯೋಚಿಸಬೇಕಾದ್ದು ಅಗತ್ಯ.

ಯಾರು ಶ್ರಮ ಪಟ್ಟು ಕೆಲಸವನ್ನು ಮಾಡುವರೋ ಅವರಿಗೆ ಗುರಿ ಎನ್ನುವುದು ಸಿಕ್ಕೇ ಸಿಗುತ್ತದೆ. ಆ ಗುರಿ ತಲುಪಲು ಅವರು ಹಗಲು ಇರುಳೆನ್ನದೆ ಶ್ರಮಿಸುತ್ತಾರೆ. ಹಾಗೆಯೇ ಹಾದಿಯನ್ನು ಹುಡುಕುತ್ತಾರೆ. ಅವರಿಗೆ ಆಯಾಸ, ಬೇಸರ ಎಂಬುದೆ ಇರುವುದಿಲ್ಲ. ಗುರಿ ತಲುಪುವವರೆಗೆ ಅವರು ನಿರಂತರ ಪ್ರಯತ್ನ ಮತ್ತು ಕೆಲಸ ಮಾಡುತ್ತಲೇ ಇರುತ್ತಾರೆ. ಅವರು ಬೇರೆಯವರಿಗಿಂತ ಭಿನ್ನವಾಗಿರುತ್ತಾರೆ ಮತ್ತು ಕೆಲಸದಲ್ಲಿ ಮೇಲು ಕೀಳು ಎಂಬ ಭಾವನೆ ಬಿಟ್ಟು ದುಡಿಯಲು ಪ್ರಯತ್ನಿಸುತ್ತಾರೆ. ಯಾರು ಬದುಕನ್ನು ಪ್ರೀತಿಸುವರೋ, ಅವರು ಕೆಲಸವನ್ನು ಪ್ರೀತಿಸುತ್ತಾರೆ. ಯಾರು ಕೆಲಸ ಅಥವಾ ತನ್ನ ಕರ್ತವ್ಯವನ್ನು ಪ್ರೀತಿಸುತ್ತಾರೋ ಅವರನ್ನು ಜಗತ್ತು ಗುರುತಿಸುತ್ತದೆ.

ಲೋಕದ ಸಮಸ್ತ ಮಾನವ ಕೋಟಿಗೆಲ್ಲಾ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶವನ್ನು ನೀಡಿ, ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಎತ್ತಿ ತೋರಿಸಿದವರು ಮಾನವತಾವಾದಿ, ಚಿಂತಕ, ದಾರ್ಶನಿಕ ಬ್ರಹ್ಮಶ್ರೀ ನಾರಾಯಣ ಗುರುಗಳು. ಶ್ರೀ ಗುರುವರ್ಯರು ತೋರಿದ ಜ್ಞಾನದ ಬೆಳಕು ಜಗತ್ತಿನ ಸಮಸ್ತ ಜೀವ ಸಂಕುಲಗಳಿಗೆ ಅನ್ವಯವಾಗುವ ಸಾರ್ವಕಾಲಿಕ ಸತ್ಯ. ಈ ಜಗತ್ತಿನ ಜ್ಞಾನ ಪುತ್ರನನ್ನು ಜಗದ್ಗುರು ಎಂದು ಆರಾಧಿಸುವುದು ಸರಿಯಾದ ಕ್ರಮ. ಇಡೀ ಸಮಾಜ ಒಪ್ಪುವಂತಹ ಈ ದಿವ್ಯ ಚೇತನದ ಹೆಸರಿನಲ್ಲಿ, ಸರಕಾರದ ವತಿಯಿಂದಲೇ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಪೀಠದ ಸ್ಥಾಪನೆಯ ಘೋಷಣೆಯಾಗಿ ಇದೀಗ ಉದ್ಘಾಟನೆಗೊಂಡು ಕಾರ್‍ಯಚರಿಸುತ್ತಿರುವುದು, ಸಮಾಜದಲ್ಲಿ ಶೋಷಿತರಿಗೆ, ದೀನ ದಲಿತರಿಗೆ ದೊರೆತಂತಹ ಅದ್ಭುತ ಜಯವಾಗಿದೆ. ಇದರ ಹಿಂದೆ ಶ್ರಮ ಪಟ್ಟಂತಹ ಎಲ್ಲರಿಗೂ ನಾವು ಕೃತಜ್ಞತೆಯನ್ನು ಸಲ್ಲಿಸೋಣ. ಸಾಹಿತ್ಯ ಲೋಕದಲ್ಲಿಯೂ, ಸುದ್ದಿ ಮಾಧ್ಯಮದಲ್ಲಿಯೂ ಅದ್ಭುತ ಸಾಧನೆಗೈದ ಮುದ್ದು ಮೂಡುಬೆಳ್ಳೆಯವರು ಈ ಗುರುಪೀಠದ ನಿರ್ದೇಶಕರಾಗಿ, ಸರಕಾರದಿಂದಲೇ ಆಯ್ಕೆಗೊಂಡಿರುವುದು ಇನ್ನೊಂದು ಸಂತೋಷದ ಸಂಗತಿ. ಶ್ರೀ ನಾರಾಯಣಗುರುಗಳ ತತ್ವಾದರ್ಶಗಳ ಮುಖಾಂತರ ಕರ್ಮವೀರರೂ, ಸಾಧನಶೂರರೂ ಆದ ಉತ್ತಮೋತ್ತಮ ಜನಾಂಗವನ್ನೇ ನಿರ್ಮಿಸುವಲ್ಲಿ ಗುರುಪೀಠವು ನಾಂದಿಯಾಗಲೆಂದು ನಮ್ಮ ಹಾರೈಕೆ.

ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಯೌವನ ಎಂಬ ಆಶಯ ಲೇಖನ ಮುಖಾಂತರ ಯುವಜನಾಂಗವು ಸರಿಯಾದ ದಾರಿಯಲ್ಲಿ ನಡೆಯಲು ಸರಿಯಾದ ಬೆಳಕನ್ನು ತೋರಿಸಿಕೊಟ್ಟಿರುವ ಶ್ರೀ ಶಿವಾನಂದ ಕರ್ಕೇರ ಇವರಿಗೆ ಯುವಸಿಂಚನ ಬಳಗದ ಕೃತಜ್ಞತೆಗಳು.

ಈ ಬಾರಿಯ ಸಂಚಿಕೆಯಲ್ಲಿ ’ಆತ್ಮ ವಿಶ್ವಾಸ, ಇಂದ್ರಿಯ ನಿಗ್ರಹ ಶಕ್ತಿ ಮತ್ತು ನಮ್ಮ ಸಮಾಜ’ ಎಂಬ ಆಶಯ ಲೇಖನ, ವಿವಿಧ ಘಟಕಗಳು ಹಮ್ಮಿಕೊಂಡ ಸಮಾಜಮುಖಿ ಕಾರ್‍ಯಕ್ರಮಗಳ ವರದಿಯನ್ನು ನಿಮಗೆ ನೀಡುತ್ತಿದ್ದೇವೆ. ಆದರೂ ಒಂದು ಮಾತು. ಯುವವಾಹಿನಿಯ ಹಿರಿಯ-ಕಿರಿಯ ಬರಹಗಾರರನ್ನು ಈಗಾಗಲೇ ಪತ್ರ ಮುಖೇನ ಭೇಟಿ ಮಾಡಿದ್ದೇನೆ. ದಯವಿಟ್ಟು ನಿಮ್ಮದೇ ಈ ಪತ್ರಿಕೆಯಲ್ಲಿ ಸದಸ್ಯರಾಗಿ ತಮ್ಮ ಪ್ರಬುದ್ಧ ಬರಹಗಳ ವಾಹಿನಿಯು ಹರಿಯಲಿ, ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ನೀವು ಕೂಡಾ ನಮ್ಮದೇ ಆದ ಸಾಹಿತ್ಯಿಕ ದೇಣಿಗೆಯನ್ನು ನೀಡಿ – ಬನ್ನಿ – ಸ್ಪಂದಿಸಿ.

– ಕಾರ್ಯನಿರ್ವಾಹಕ ಸಂಪಾದಕ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!