ಬದುಕಿನಲ್ಲಿ ಸುನಿಶ್ಚಿತ ಗುರಿಯುಳ್ಳ ಇತ್ಯಾತ್ಮಕ ಸಾಧನೆಯ ಮುಂಚೂಣಿ ಮತ್ತು ಮುನ್ನಗ್ಗುವ ಎದೆಗಾರಿಕೆಯುಳ್ಳ ಯುವಜನರಲ್ಲಿ ಕೆಲವೇ ಕೆಲವರು ವಿದ್ಯಾರ್ಥಿ ಜೀವನದಲ್ಲಿ ಸ್ವಯಂಪ್ರೇರಿತವಾಗಿ ಉತ್ತಮ ನಾಯಕತ್ವದ ಲಕ್ಷಣಗಳನ್ನು ಮೈಗೂಡಿಸಿಕೊಂಡು ಯಶಸ್ವೀ ನಾಯಕರಾಗುತ್ತಾರೆ. ಇಂತಹದ್ದೇ ಒಂದು ಮನೋಧರ್ಮದವರಾಗಿದ್ದು ರಾಷ್ಟ್ರ ಚಿಂತನೆಯ ಹಾದಿಯಲ್ಲಿ ಸಾಗುತ್ತಾ ಕರ್ನಾಟಕ ರಾಜ್ಯಪಾಲರಿಂದ ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂ ಸೇವಕ ರಾಜ್ಯ ಪ್ರಶಸ್ತಿ (2014-15 ರಲ್ಲಿ) ಬಾಚಿಕೊಂಡ ಓರ್ವ ವಿದ್ಯಾರ್ಥಿಯ ಯಶೋಗಾಥೆ ಇದು.
ಆತ ಬೇರಾರೂ ಅಲ್ಲ; ಪುತ್ತೂರಿನ ಶ್ರೀ N. ಶೀನಪ್ಪ ಪೂಜಾರಿ- ರೇಖಾ ದಂಪತಿಗಳ ಹೆಮ್ಮೆಯ ಪುತ್ರ ಶ್ರೀ ರಜತ್ ಕುಮಾರ್ N.S. ಕಲಿಕೆಯಲ್ಲಿ SSLC ಯಲ್ಲಿ 73%, ಪಿಯುಸಿಯಲ್ಲಿ 90.17% ಹಾಗೂ B.Comನಲ್ಲಿ 75% ಅಂಕಗಳಿಸಿ ಕಲಿಕೆಯಲ್ಲಿ ತನ್ನ ಶ್ರೇಷ್ಠತೆಯನ್ನು ಸಾಬೀತು ಪಿಡಿಸಿ NCCಯಲ್ಲಿ ರಾಷ್ಟಪ್ರೇಮದ ಪಾಠ ಕಲಿತು A,B ಹಾಗೂ C ಸರ್ಟಿಫಿಕೇಟ್ ಗಳಿಸಿರುವುದು ಒಂದು ಅಸಾಧಾರಣ ಸಾಧನೆಯೇ ಸರಿ.
ಇದರೊಂದಿಗೆ ಸಮಾಜ ಸೇವೆಯ ಮೂಲಭೂತ ತತ್ವ ಮೈಗೂಡಿಸಿಕೊಳ್ಳಲು ಪೂರಕವಾದ ವಿದ್ಯಾರ್ಥಿಗಳ ರಾಷ್ಟ್ರೀಯ ಸೇವಾ ಯೋಜನೆಯಲ್ಲೂ ತನ್ನನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡು 2015 ರ ಮಂಗಳೂರು ವಿಶ್ವವಿದ್ಯಾಲಯದ ಸರ್ವಶ್ರೇಷ್ಠ NSS ಸ್ವಯಂಸೇವಕ ಪ್ರಶಸ್ತಿ; ಕರ್ನಾಟಕ ರಾಜ್ಯದಲ್ಲೇ ’ಸರ್ವಶ್ರೇಷ್ಠ NSS ಸ್ವಯಂಸೇವಕ’ ಪ್ರಶಸ್ತಿಯನ್ನು ರಾಜ್ಯಪಾಲ ಗೌ| ವಜೂಭಾಯಿವಾಲರಿಂದ ಪಡೆದು ಜಿಲ್ಲೆಗೇ ಹೆಸರು ತರುವ ಮಹೋನ್ನತ ಸಾಧನೆ ಮಾಡಿರುತ್ತಾರೆ. ಇದು ರಜತ್ ಕುಮಾರ್ ಸೇವಾ ಮನೋಭಾವಕ್ಕೆ ಸಂದ ಗೌರವ.
ಶ್ರೇಷ್ಠ ನಾಯಕತ್ವ ಗುಣಗಳಿಂದ ಕೂಡಿದ ಈ ಯುವಕ ಓರ್ವ ಸರ್ವಶ್ರೇಷ್ಠ ವಿದ್ಯಾರ್ಥಿ ಹಾಗೂ ಸೇವಾ ಮನೋಭಾವ ಶ್ರೇಷ್ಠ ಎಂದು St. ಅಲೋಶಿಯಸ್ ಕಾಲೇಜಿನಲ್ಲಿ ಸಾದರ ಪಡಿಸಿ ರಾಷ್ಟ್ರ ಮಟ್ಟದ ಗಣರಾಜ್ಯ ಪೆರೇಡ್‌ಗೆ ಕರ್ನಾಟಕದಿಂದ ಆಯ್ಕೆಯಾದ ಬೆರಳೆಣಿಕೆಯ ವಿದ್ಯಾರ್ಥಿಗಳಲ್ಲಿ ಒಬ್ಬ.
ಪ್ರತಿಭೆ ಎಂಬುವುದು ಸರ್ವತೋಮುಖವಾಗಿದ್ದರೆ ಅದು ಸಮರ್ಥ ನಾಯಕತ್ವಕ್ಕೆ ಬುನಾದಿ ಇಂಥ ಸಾಧನೆಯ ಪ್ರತಿಭೆ ಶ್ರೀ ರಜತ್ ಕುಮಾರ್ N.S ಇವರನ್ನು ಯುವವಾಹಿನಿ ಅಭಿನಂದಿಸುತ್ತಾ ಯುವವಾಹಿನಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿದೆ.