ಅವಕಾಶಗಳು ಎಳವೆಯಲ್ಲಿಯೇ ಸಿಕ್ಕಾಗ ಮಕ್ಕಳ ಪ್ರತಿಭಾ ವಿಕಸನವು ಅತ್ಯಂತ ವೇಗದಿಂದ ಸಾಗುತ್ತದೆ. ಮಕ್ಕಳ ಪ್ರಾಯಕ್ಕೆಅನುಗುಣವಾದ ಸಾಮಥ್ರ್ಯಗಳು ಪ್ರತಿಯೊಬ್ಬರಲ್ಲೂ ಇದೆ ಅದನ್ನು ಗುರುತಿಸಿಕೊಳ್ಳುವ ಕೆಲಸವನ್ನು ಹೆತ್ತವರು ಮಾಡಬೇಕಿದೆ, ಇಂತಹ ಅವಕಾಶಗಳಲ್ಲಿ ಇಂದಿನ ಕಾರ್ಯಕ್ರಮವೂ ಹೆಚ್ಚು ಪ್ರಸ್ತುತ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಅಗ್ಗಿದಕಳಿಯ ಸಸಿಹಿತ್ಲು ಇದರ ಅಧ್ಯಕ್ಷರಾದ ಪ್ರಕಾಶ್‍ಕುಮಾರ್ ಬಿಎನ್ ತಿಳಿಸಿದರು.
ಅವರು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಯುವವಾಹಿನಿ(ರಿ) ಸಸಿಹಿತ್ಲು ಘಟಕದ ವತಿಯಿಂದ ನಡೆದ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಸೌಹಾರ್ದ ಮತ್ತು ಸಾಂಸ್ಕ್ರತಿಕ ಸಮಾಜ ಹೆಚ್ಚು ಕ್ರೀಯಾಶೀಲವಾಗುತ್ತದೆ ಎನ್ನುವ ಪರಿಕಲ್ಪನೆಯಲ್ಲಿ ಯುವವಾಹಿನಿ ಸಸಿಹಿತ್ಲು ಘಟಕವು ದಿನಾಂಕ 12-08-2017 ರಂದು ವಲಯ ಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ನಡೆಸಿತ್ತು.ಊರ ಪರವೂರಿನಿಂದ 33 ಮಂದಿ ಮಕ್ಕಳು ಮೂರು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಪ್ರತಿಯೊಂದು ವಿಭಾಗದ ವಿಜೇತರಿಗೂ ಮೊದಲ ಬಹುಮಾನ ಚಿನ್ನದ ಉಂಗುರ ಎರಡನೇ ಬಹುಮಾನ 10 ಗ್ರಾಂ ಬೆಳ್ಳಿಯ ನಾಣ್ಯವನ್ನು ವಿತರಿಸಲಾಯಿತು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಯಶವಂತ ಪೂಜಾರಿ ಅವರು ಬಹುಮಾನ ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದು ಗ್ರಾಮ ವ್ಯಾಪ್ತಿಗೆ ಹೊಂದಿಕೊಂಡಂತೆ ಸಸಿಹಿತ್ಲು ಘಟಕ ಇದೆಯಾದರೂ ಸಾಂಸ್ಕ್ರತಿಕವಾಗಿ ಮತ್ತು ಹೊಸತನದ ಕಾರ್ಯಕ್ರಮ ರೂಪಿಸುವಲ್ಲಿ ಕೇಂದ್ರ ಸಮಿತಿಯಲ್ಲಿ ಉತ್ತಮ ಹೆಸರು ಸಸಿಹಿತ್ಲು ಘಟಕಕ್ಕೆಇದೆ.ಮಕ್ಕಳನ್ನು ವೇದಿಕೆಯ ಮೇಲೆ ಕರೆಸಿ ಅವರಿಂದ ಪ್ರತಿಭೆಯನ್ನು ಹೊರಹೊಮ್ಮಿಸಿ ಚಿನ್ನದ ಬಹುಮಾನ ನೀಡಿ ಪ್ರೋತ್ಸಾಹಿಸುವ ಕೆಲಸ ಹಿರಿದಾದುದು ಎಂದರು.ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಮಾವೇಶ ನಿರ್ದೇಶಕರಾದ ಹರೀಶ್ ಪೂಜಾರಿ ಮಾತನಾಡಿ, ನನಗೆ ಸಸಿಹಿತ್ಲು ಘಟಕದ ಮೇಲೆ ವಿಶೇಷ ಪ್ರೀತಿ, ಹೊಸತನದ ಕಾರ್ಯಕ್ರಮಇಲ್ಲಿ ಮೂಡಿಬರುತ್ತಿದೆ, ಇಂದಿನ ಕಾರ್ಯಕ್ರಮ ಇತರ ಕಾರ್ಯಕ್ರಮಕ್ಕಿಂತ ಭಿನ್ನವಾಗಿದ್ದು ಮನಸಿಗೆ ಮುದ ನೀಡಿತು ಎಂದರು. ಅದೇರೀತಿ ವೇದಿಕೆಯಲ್ಲಿದ್ದ ಘಟಕದ ಸಲಹೆಗಾರರಾದ ರಾಜೀವ ಪೂಜಾರಿಅವರು ಸಸಿಹಿತ್ಲು ಘಟಕಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಅಗ್ಗಿದಕಳಿಯ ಸಸಿಹಿತ್ಲು ಇದರ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್‍ಕುಮಾರ್ ಬಿ.ಎನ್, ಮಹಿಳಾ ಸಮಿತಿಯ ಅಧ್ಯಕ್ಷೆ ಶುಭಾ ಪ್ರೇಮ್‍ನಾಥ್, ಘಟಕದಅಧ್ಯಕ್ಷರಾದ ಪ್ರದೀಪ್‍ಎಸ್.ಆರ್, ಕಾರ್ಯಕ್ರಮದ ಸಂಚಾಲಕರಾದ ಪ್ರತಾಪ್‍ಚಂದ್ರ ಮತ್ತುರೀತಾ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಕಳೆದ ಬಾರಿಯ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಘಟಕದ ಸದಸ್ಯರನ್ನುಅಭಿನಂದಿಸಲಾಯಿತು.
Good