ಯುವವಾಹಿನಿ (ರಿ.) ಮೂಡಬಿದ್ರೆ ಘಟಕ, ಬಿಲ್ಲವ ಸಂಘ (ರಿ.) ಶಿರ್ತಾಡಿ ಹಾಗೂ ಮಾಜಿ ಸೈನಿಕರ ವೇದಿಕೆ (ರಿ.) ಮೂಡಬಿದರೆ- ಕಾರ್ಕಳ ಇವರ ಸಹಭಾಗಿತ್ವದಲ್ಲಿ ದಿನಾಂಕ 28.05.2022 ಶನಿವಾರದಂದು ಎಸೆಸೆಲ್ಸಿ ನಂತರ ಮುಂದೇನು ಹಾಗೂ ಎಸೆಸೆಲ್ಸಿ ನಂತರ ಸರಕಾರ ಸಂಘ-ಸಂಸ್ಥೆಗಳಿಂದ ಸಿಗುವ ವಿದ್ಯಾರ್ಥಿವೇತನದ ಸಮಗ್ರ ಮಾಹಿತಿ ಶಿಬಿರವನ್ನು ಬಿಲ್ಲವ ಸಂಘ ಶಿರ್ತಾಡಿಯ ಸಭಾಭವನದಲ್ಲಿ ನಡೆಯಿತು. ಘಟಕದ ಅಧ್ಯಕ್ಷರಾದ ನವಾನಂದರವರು ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು. ಮಾಹಿತಿ ಶಿಬಿರದ ಉದ್ಘಾಟನೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮಿನ್ ಮಟ್ಟುರವರು ದೀಪ ಬೆಳಗಿಸಿ ನೆರವೇರಿಸಿದರು. ಮುಖ್ಯಅತಿಥಿಯಾಗಿ ಆಗಮಿಸಿದ್ದ ಗ್ರಾಮ ಪಂಚಾಯತ್ ಶಿರ್ತಾಡಿಯ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಮಾತನಾಡುತ್ತಾ ಗ್ರಾಮೀಣ ಮಕ್ಕಳಿಗೆ ಮಾಹಿತಿ ಶಿಬಿರಗಳನ್ನು ಹೆಚ್ಚೆಚ್ಚು ಹಮ್ಮಿಕೊಂಡರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಎಂದರು. ಇನ್ನೋರ್ವ ಅತಿಥಿ ಉದ್ಯಮಿ ಹಾಗೂ ತಾಲೂಕ್ ಪಂಚಾಯತ್ ಮಾಜಿ ಸದಸ್ಯರಾದ ರುಕ್ಕಯ್ಯ ಪೂಜಾರಿಯವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಇಂತಹ ಶಿಬಿರಗಳು ತುಂಬಾ ಪರಿಣಾಮಕಾರಿ ಹಾಗೂ ಉನ್ನತ ಸರಕಾರಿ ಸೇವೆಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಮುಂದೆ ಬರಲು ತರಭೇತಿಗಳು ಸಹಕಾರಿ ಎಂದರು.ಸಭೆಯಲ್ಲಿ ಬಿಲ್ಲವ ಸಂಘ (ರಿ.) ಶಿರ್ತಾಡಿ ಇದರ ಅಧ್ಯಕ್ಷರಾದ ಅಶೋಕ್ ಮಾಂಟ್ರಾಡಿ, ಮಾಜಿ ಸೈನಿಕರ ವೇದಿಕೆ( ರಿ.) ಮೂಡಬಿದ್ರೆ -ಕಾರ್ಕಳ ಇದರ ಅಧ್ಯಕ್ಷರಾದ ದೊಂಬಯ್ಯ ಶೆಟ್ಟಿ ಉಪಸ್ಥಿತರಿದ್ದರು.
ಸಭೆಯಲ್ಲಿ ಮೂರು ಸಂಘಗಳ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು. ಎಸೆಸೆಲ್ಸಿಯಲ್ಲಿ ಈ ಬಾರಿ 600 ಕ್ಕಿಂತ ಅಧಿಕ ಅಂಕ ಗಳಿಸಿದ ಆರು ಮಂದಿ ವಿದ್ಯಾರ್ಥಿಗಳನ್ನು ಹೂ, ಸ್ಮರಣಿಕೆ, ಶಾಲು ಹೊದಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಕೇಂದ್ರ ಬಿಂದು ಚಂದ್ರಶೇಖರ್ ಎಸ್ ಎಡಪದವು ಸೀನಿಯರ್ ಇಂಜಿನಿಯರ್ ಎಂಸಿಎಫ್ ಮಂಗಳೂರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ಮಾಜಿ ಸೈನಿಕರಾದ ಗಿಲ್ಬರ್ಟ್ ಬ್ರಿಗಾನ್ಸರವರು ದೇಶದ ರಕ್ಷಣಾ ಸೇವೆಯಲ್ಲಿ ವಿದ್ಯಾರ್ಥಿಗಳು ಯಾವ ರೀತಿ ಸೇರಿಕೊಳ್ಳಬೇಕು ರಕ್ಷಣಾ ಸೇವೆಯಲ್ಲಿನ ಉದ್ಯೋಗ ಹಾಗೂ ಜೀವನ ಎನ್ನುವ ವಿಚಾರದ ಬಗ್ಗೆ ವಿಚಾರ ಮಂಡಿಸಿದರು. ಗ್ರಾಮಾಂತರ ಪರಿಸರದ 140 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯದರ್ಶಿ ರಮೇಶ್ ಅಮೀನ್ ಧನ್ಯವಾದ ನೀಡಿದರು. ಇಂದು ಚೇತನ್ ಹಾಗೂ ಕುಮಾರಿ ಸೌಮ್ಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.