ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್‌ನಿಂದ ಶೈಕ್ಷಣಿಕ ದತ್ತು ಸ್ವೀಕಾರ – ಪ್ರತಿಭಾ ಪುರಸ್ಕಾರ ‘ಪ್ರೇರಣಾ -2019’
ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶೈಕ್ಷಣಿಕ ದತ್ತು ಸ್ವೀಕಾರ ವಿದ್ಯಾರ್ಥಿ ವೇತನ ವಿತರಣೆ ಅಕ್ಷರ ಪುರಸ್ಕಾರ ಮತ್ತು ಪ್ರತಿಭಾ ಪುರಸ್ಕಾರ – ಪ್ರೇರಣಾ -2019 ಕಾರ್ಯಕ್ರಮವು ನ.11 ರಂದು ನಡೆಯಿತು.
ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಸಲಹೆಗಾರರಾದ ಲೋಕಯ್ಯ ಪೂಜಾರಿಯವರು ಕಾರ್‍ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು, ವಿದ್ಯಾನಿದಿ ಟ್ರಸ್ಟ್ ನ ಆಡಳಿತ ಟ್ರಸ್ಟಿ , ಕಾರ್‍ಯದರ್ಶಿ, ಪದಾಧಿಕಾರಿಗಳು ಉಪಸಮಿತಿಯ ಸಂಚಾಲಕರು , ಟ್ರಸ್ಟಿಗಳು ಉಪಸ್ಥಿತರಿದ್ದರು.
ಶೈಕಣಿಕ ಕಾರ್ಯಾಗಾರ: ಕನಸುಗಳಿಗೆ ಬಣ್ಣ -2019
ಜೆಸಿಐ ನ ರಾಷ್ಟ್ರೀಯ ತರಬೇತುದಾರ ಮತ್ತು ಯುವವಾಹಿನಿ(ರಿ) ಕಾರ್ಕಳ ಘಟಕದ ಅಧ್ಯಕ್ಷರಾದ ಸುಧಾಕರ್ ಕಾರ್ಕಳ ಇವರು ಸಂಪನ್ಮೂಲ ವ್ಯಕ್ತಿಯಾಗಿ ಅಗಮಿಸಿ ಕಾರ್ಯಾಗಾರ ನಡೆಸಿಕೊಟ್ಟರು. ಪ್ರಸ್ತುತ ಸಮಾಜದಲ್ಲಿ ಸಾಮಾಜಿಕ ಜಾಲತಾಣಗಳಿಂದ ವಿದ್ಯಾರ್ಥಿಗಳ ಮೇಲಾಗುವ ದುಷ್ಪರಿಣಾಮಗಳ ಕುರಿತು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ವಿದ್ಯಾಬಾಸಕ್ಕೆ ಉಪಯುಕ್ತ ಮಾಹಿತಿ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಪೂರ್ವ ಸಿದ್ಧತೆ ವಿಷಯದ ಕುರಿತು ಸರ್ವಜ್ಞ ಐ .ಎ,ಎಸ್ ಅಕಾಡೆಮಿ ಮಂಗಳೂರು ಮತ್ತು ಯುವವಾಹಿನಿ (ರಿ) ಕಂಕನಾಡಿ ಘಟಕದ ಅಧ್ಯಕ್ಷರಾದ ಸುರೇಶ್ ಎಮ್. ಎಸ್ ವಿಧ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಅಕ್ಷರ ಪುರಸ್ಕಾರ ,ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ
ವಿದ್ಯಾರ್ಥಿಗಳಲ್ಲಿ ಸ್ವದೇಶ ಪ್ರೀತಿಯಿರಲಿ : ಸುಮನ್ ತಲ್ವಾರ್
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಂಚಭಾಷಾ ಚಿತ್ರ ನಟರಾದ ಸುಮನ್ ತಲ್ವಾರ್ ನಮ್ಮ ದೇಶದಲ್ಲಿ ಕಲಿತ ವಿದ್ಯೆಯು ವಿದೇಶದಲ್ಲಿ ವಿದೇಶಿ ಕಂಪನಿಗಳಿಗೆ ಪ್ರಯೋಜನವಾಗದೆ ನಮ್ಮ ದೇಶದಲ್ಲಿಯೇ ಉದ್ದಿಮೆಗಳನ್ನು ಪ್ರಾರಂಭಿಸಿ ಇತರರಿಗೆ ಉದ್ಯೋಗವನ್ನು ನೀಡಬೇಕೆಂದರು. ಹಾಗೂ ವಿದ್ಯೆಗೆ ಪ್ರೋತ್ಸಾಹ ನೀಡುತ್ತಿರುವ ಯುವವಾಹಿನಿ ಕಾರ್ಯವನ್ನು ಶ್ಲಾಘಿಸಿದರು.
ಯುವವಾಹಿನಿಗೆ ಸದಾ ಚಿರರುಣಿ : ಡಾ| ಪ್ರೀತಿ ಕಾರ್ತಿಕೇಯನ್
ಮುಖ್ಯ ಅತಿಥಿಗಳಾಗಿ ಆಗಮಿಸಿದ ಟ್ಯೂಬ್ ಇನ್ ವೆಸ್ಟ್ವೆಂಟ್ ಆಫ್ ಇಂಡಿಯಾ ಲಿ, ಚೆನ್ನೈ ಇದರ AGM ಆಗಿರುವ ಡಾ. ಪ್ರೀತಿ ಕಾತಿಕೇಯನ್ ತನ್ನ ಕಡು ಬಡತನದ ನಡುವೆ ನನ್ನನ್ನು ಗುರುತಿಸಿ ನನ್ನ ವಿದ್ಯಾಭ್ಯಾಸಕ್ಕೆ ನೆರವಾದ ಯುವವಾಹಿನಿಗೆ ನಾನು ಸದಾ ಚಿರರುಣಿ ಎಂದು ಭಾವುಕರಾದರು. ಕಠಿಣ ಪರಿಶ್ರಮ ಶ್ರದ್ದೆ , ಆತ್ಮವಿಶ್ವಾಸವಿದ್ದರೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಲು ಸಾದ್ಯ ಎಂದರು.
ವಿದ್ಯಾರ್ಜನೆ ಪ್ರೋತ್ಸಾಹ ನೀಡಲು ಸದಾ ಸದ್ಧ ; ಗೋವಿಂದ ಬಾಬು ಪೂಜಾರಿ
ಶೆಪ್ ಟಾಕ್ ಮತ್ತು ಹಾಸ್ಪಿಟಾಲಿಟಿ ಸರ್ವಿಸಸ್ ಲಿ. ಸಮಾಜದಲ್ಲಿ ಬಡತನದಿಂದ ವಿದ್ಯಾರ್ಜನೆಗೆ ವಂಚಿತರಾದ ವಿಧ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಜನೆಗೆ ನೆರವಾಗುತ್ತಿರುವ ಯುವವಾಹಿನಿಯ ಕಾರ್ಯ ಶ್ಲಾಘನೀಯ ಎಂದರು, ಮತ್ತು ಕಾರ್ಯಕ್ರಮದಲ್ಲಿ ಅಕ್ಷರ ಪುರಸ್ಕಾರವನ್ನು ಸ್ವೀಕರಿಸಿದ ಎಸ್, ಎಸ್.ಎಲ್, ಸಿ, ಯಲ್ಲಿ 99.52/% ಅಂಕಗಳನ್ನು ಗಳಿಸಿರುವ ಜ್ಯೋತಿಕಾ ಎಸ್ ವಿದ್ಯಾರ್ಥಿನಿಗೆ 25000 ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದರು.
ವಿದ್ಯಾನಿಧಿ ಟ್ರಸ್ಟಿನ ಕಾರ್ಯ ಶ್ಲಾಘನೀಯ : ನರೇಶ್ ಕುಮಾರ್ ಸಸಿಹಿತ್ಲು
ಯುವವಾಹಿನಿ ವಿದ್ಯಾನಿಧಿ ಟ್ರಸ್ಟು ಮಾಡಿದ ಕೆಲಸವನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಪ್ರಶಂಸಿದರು. ಮಾತ್ರವಲ್ಲದೆ ಕಾರ್ಯಕ್ರಮಕ್ಕೆ ಸಮಾಜದಲ್ಲಿ ಗುರುತಿಸಿ, ಸಾಧನೆ ಮಾಡಿರುವ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಸಂತಸದ ವಿಚಾರ ಎಂದರು ಹಾಗೂ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿರುವ ವಿದ್ಯಾನಿಧಿ ಟ್ರಸ್ಟಿನ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಅಕ್ಷರ ಪುರಸ್ಕಾರ :
ಎಸ್, ಎಸ್, ಎಲ್, ಸಿ ಯಲ್ಲಿ 98% ಮತ್ತು ಪಿ.ಯು.ಸಿ ಯಲ್ಲಿ 95% ಕ್ಕಿಂತ ಹೆಚ್ಚು ಅಂಕ ಪಡೆದ 18 ವಿದ್ಯಾರ್ಥಿಗಳಿಗೆ ಕಾರ್‍ಯಕ್ರಮದಲ್ಲಿ ಅಕ್ಷರ ಪುರಸ್ಕಾರ ನೀಡಿ ಗೌರವಿಸಲಾಯಿತು. ಜ್ಯೋತಿಕಾ ಎಸ್ , ಶ್ರಾವ್ಯ, ಯಕ್ಷಿತಾ, ಕುಮಾರಿ ಕೃತಿ ಶ್ರೇಯಾ , ಸ್ನೇಹಾ ಆಕಾಂಕ್ಷಾ , ಸುಕ್ಷಿತಾ , ಸಿಂಚನೆ ಎಮ್. ಬಂಗೇರ, ನಿರೀಕ್ಷಾ, ವೈಷ್ಣವಿ , ಸ್ವಸ್ತಿ ಕುಮಾರಿ ಸುಕ್ಷಿತಾ , ಮನಿಷಾ , ಧ್ಯಾನ್, ಐಶ್ವರ್ಯ , ಮನಿಷಾ , ದ್ಯಾನ್, ಪ್ರಥಮ್ , ಅಶ್ವತ್ ಇವರಿಗೆ ಅಕ್ಷರ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ :
ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆಗೈದ ಯೋಗ್ನ ಬಿ . ಅಮಿನ್ ಮತ್ತು ಪ್ರಕೃತಿ ಮಾರೂರ್ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸನ್ಮಾನ:
ವಿದ್ಯಾನಿಧಿ ಟ್ರಸ್ಟಿ ನ ಪ್ರಯೋಜನ ಪಡೆದು ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿರುವ ಡಾ. ಪ್ರೀತಿ ಕಾರ್ತಿಕೇಯನ್ ಇವರನ್ನು ಟ್ರಸ್ಟಿನ ವತಿಯಿಂದ ಸನ್ಮಾನಿಸಲಾಯಿತು.
ಅಭಿನಂದನೆ:
ತಮ್ಮ ಘಟಕದ ವ್ಯಾಪ್ತಿಯಲ್ಲಿ ವಿದ್ಯಾನಿಧಿ ವಿತರಿಸಿರುವ ವಿವಿಧ ಘಟಕಗಳಾದ ಮೂಡಬಿದ್ರೆ, ಮುಲ್ಕಿ, ಮಾಣಿ, ಬೆಂಗಳೂರು , ಅಡ್ವೆ ,ಬಜ್ಪೆ, ಕೂಳೂರು ,ಉಡುಪಿ, ಹೆಜಮಾಡಿ, ವೇಣೂರು, ಮಂಗಳೂರು ,ಮಂಗಳೂರು ಮಹಿಳಾ ,ಕಡಬ ,ಕೊಲ್ಯ , ಬೆಳ್ತಂಗಡಿ, ಕೆಂಜರೂ ಕೆರಂಬಾರು , ಸುರತ್ಕಲ್, ಉಪ್ಪಿನಂಗಡಿ, ಪಣಂಬೂರು ಕುಳಾಯಿ ಅಧ್ಯಕ್ಷರಿಗೆ ಶಾಲು ಹಾಕಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ 47 ವಿದ್ಯಾರ್ಥಿಗಳಿಗೆ ರೂ . 3.71 ಲಕ್ಷ ಆರ್ಥಿಕ ಧನ ಸಹಾಯ ವಿತರಿಸಲಾಯಿತು. ವಿದ್ಯಾರ್ಥಿವೇತನ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಅನುಭವವನ್ನು ಹಂಚಿಕೊಂಡರು. ವೇದಿಕೆಯಲ್ಲಿ ಕೇಂದ್ರ ಸಮಿತಿಯ ಸಲಹೆಗಾರರಾದ ಲೋಕಯ್ಯ ಪೂಜಾರಿ, ನಾರಾಯಣ ಪೂಜಾರಿ ಹಾಗೂ ಟ್ರಸ್ಟಿಗಳಾದ ಶೇಕರ ಪೂಜಾರಿಎಮ್. ಎಮ್ ಸಂಜೀವ ಪೂಜಾರಿ , ವಾಸು ಪೂಜಾರಿ , ಆಡಳಿತ ಟ್ರಿಸ್ಟಿ ಜಯಂತ ನಡುಬೈಲು ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲು ಉಪಸ್ಥಿತರಿದ್ದರು.
ಯುವವಾಹಿನಿ ವಿದ್ಯಾನಿಧಿ , ಟ್ರಸ್ಟಿನ ಆಡಳಿತ ಟ್ರಸ್ಟಿ ಜಯಂತ ನಡುಬೈಲು ಸ್ವಾಗತಿಸಿ, ಟ್ರಸ್ಟಿನ ಸ್ಥಾಪಕ ಕಾರ್ಯದರ್ಶಿ ಪ್ರೇಮನಾಥ ಕರ್ಕೆರರವರು ಪ್ರಸ್ತಾವನೆ ಗೈದು , ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲು ಧನ್ಯವಾದ ಸಮರ್ಪಿಸಿದರು, ದಯಾನಂದ ಉಪ್ಪೂರ್ ಕಾರ್ಯಕ್ರಮ ನಿರೂಪಿಸಿದರು.