ಕೊಲ್ಯ: ಯುವವಾಹಿನಿ (ರಿ) ಕೊಲ್ಯ ಘಟಕದ ಮಹತ್ವಾಕಾಂಕ್ಷೆಯ ಯೋಜನೆ ಶಾಶ್ವತ ವಿದ್ಯಾನಿಧಿ ಯೋಜನೆಗೆ ಪ್ರಥಮ ಹಂತದ ಚಾಲನೆ ಆಗಷ್ಟ್ 3 ಶುಕ್ರವಾರದಂದು ಸಾಯಂಕಾಲ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಕೊಲ್ಯ ಇಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರಿಗೆ ಪೂಜೆಸಲ್ಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಸಭಾಕಾರ್ಯಕ್ರಮವನ್ನು ಬಿಲ್ಲವ ಸೇವಾ ಸಮಾಜದ ಹಿರಿಯ ಸದಸ್ಯರಾದ ಶ್ರೀ ಮುತ್ತಪ್ಪ ಪೂಜಾರಿಯವರು ದೀಪ ಬೆಳಗಿಸುವುದರೊಂದಿಗೆ ಉಧ್ಘಾಟಿಸಿದರು.ಮುಖ್ಯ ಅತಿಥಗಳಾಗಿ .ಲೆಕ್ಕಪರಿಶೋಧಕರು ದಯಾನಂದ.ಪಿ. ವಿಶ್ವ ಬಿಲ್ಲವರ ಸೇವಾ ಚಾವಡಿ ಸಂಸ್ಥಾಪಕರು ಚಂದ್ರಶೇಖರ ಪೂಜಾರಿ ಬಂಟ್ವಾಳ , ರೋಟರಿ ಕ್ಲಬ್ ಮಂಗಳೂರು ಪೂರ್ವ ಇದರ ಅಧ್ಯಕ್ಷ ರೊ!ಜೈಕುಮಾರ್ ಕೊಲ್ಯ ಶ್ರೀಮತಿ ಕುಮಾರಿ ಅಶೋಕ್ ಪರ್ಯತ್ತೂರು ಮೆಸ್ಕಾ ಇಲಾಖೆ, ತುಕಾರಾಮ್.ಎನ್.ಮಂಗಳೂರು,ಸಂತೋಷ್ ಸುವರ್ಣ ಕನೀರುತೋಟ(ಅನಿವಾಸಿ ಭಾರತೀಯರು), ಬಿಲ್ಲವ ಸೇವಾ ಸಮಾಜ(ರಿ) ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷ ಆನಂದ.ಎಸ್.ಕೊಂಡಾಣ, ಅಜಿತ್ ಪೂಜಾರಿ ಪಜೀರು ,ಉಪಾಧ್ಯಕ್ಷರು ಹೀಲ್ಸ್ ಮಂಗಳೂರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಯುವವಾಹಿನಿ ರಿ ಕೊಲ್ಯ ಘಟಕದ ಅಧ್ಯಕ್ಷ ಕುಸುಮಾಕರ್ ಕೊಲ್ಯ ಪ್ರಾಸ್ತಾವಿಕದೊಂದಿಗೆ ಅತಥಿಗಳನ್ನು ಸ್ವಾಗತಿಸಿದರು.
ಘಟಕದ ಸದಸ್ಯರಾದ ಲತೀಷ್ ಸಂಕೊಳಿಗೆ ಹಾಗೂ ಸುರೇಶ್.ಬಿ.ಕೊಲ್ಯರವರು ಕಾರ್ಯಕ್ರಮ ನಿರೂಪಿಸಿದರು,ಆನಂದ.ಎಮ್.ಮಳಯಾಳಕೋಡಿ ವಂದಿಸಿದರು.
ಅಂದಾಜು 3 ಲಕ್ಷ ರೂಪಾಯಿಯನ್ನು ಸಂಗ್ರಹಿಸಿ ಬ್ಯಾಂಕ್ ಠೇವಣಿಯಿರಿಸಿ ಅದರಿಂದ ಬಂದ ಶೇಕಡಾ ಬಡ್ಡಿ ಹಣವನ್ನು ಕೊಲ್ಯ ಬಿಲ್ಲವ ಸೇವಾ ಸಂಘದ ವ್ಯಾಪ್ತಿಯಲ್ಲಿ ಬರುವ ಅರ್ಹ ಬಡ ವಿದ್ಯಾರ್ಥಿ ಗಳಿಗೆ ವಿತರಿಸುವ ಯೋಜನೆ ಇದಾಗಿದ್ದು ಪ್ರಥಮ ಹಂತದ ಯೋಜನೆಯಲ್ಲಿ ಒಟ್ಟು ಒಂದು ಲಕ್ಷದ ನಲವತ್ತು ಸಾವಿರ ರೂಪಾಯಿ ವಿದ್ಯಾನಿಧಿ ಗೆ ದೇಣಿಗೆಯಾಗಿ ಬಂದೊದಗಿದೆ.