ದಿನಾಂಕ 2/11/2019 ರಂದು ಶ್ರೀ ಗೋಕರ್ಣನಾಥ ಬಿ ಎಡ್ ಕಾಲೇಜು ಗಾಂಧಿನಗರ ಇಲ್ಲಿ ಬಿ ಎಡ್ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಮಾಹಿತಿ ಶಿಬಿರ ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ದೀಪ್ತಿ ನಾಯಕ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಧ್ಯಕ್ಷರಾದ ಉಮಾಶ್ರೀಕಾಂತ್ ಸ್ವಾಗತಿಸಿದರು. ನಂತರ ಸಂಪನ್ಮೂಲ ವ್ಯಕ್ತಿಯಾದ ಅಲೋಸಿಯಸ್ ಕಾಲೇಜಿನ assistant professor, ಎಂ ಸಿ ಎ department ಹಾಗೂ ಮಾಜಿ ಅಧ್ಯಕ್ಷರು ಮಂಗಳೂರು ಘಟಕದ ರಾಕೇಶ್ ಕುಮಾರ್ ಇವರು ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ವಿವಿಧ ಕಥೆಗಳನ್ನು , ಚಟುವಟಿಕೆಗಳನ್ನು ನೀಡುತ್ತಾ ಮನರಂಜಿಸುತ್ತ , ಮನಸ್ಸಿಗೆ ತಟ್ಟುವಂತೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ಅವರನ್ನು
ಪ್ರಾಂಶುಪಾಲರು ಗೌರವಿಸಿದರು.
ಕಾರ್ಯಕ್ರಮದಲ್ಲಿ ಕೋಶಾಧಿಕಾರಿಯಾದ ರವಿಕಲ, ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಸರಸ್ವತಿ,ಲೋಲಾಕ್ಷಿ, ಮಾಜಿ ಅಧ್ಯಕ್ಷರಾದ ವಿದ್ಯಾ ಉಪಸ್ಥಿತರಿದ್ದರು.