ವೇಣೂರು:- ಯುವವಾಹಿನಿ ವೇಣೂರು ಘಟಕದ ವತಿಯಿಂದ ಗರ್ಡಾಡಿ ಗ್ರಾಮದ ಕುಂಡದಬೆಟ್ಟು ರನ್ನಾಡಿ ಪಲ್ಕೆ ನಿವಾಸಿ ಕೃಷ್ಣಪ್ಪ ಗುರು ಸ್ವಾಮಿ ತೀವ್ರ ಅನಾರೋಗ್ಯದಿಂದ ಇದ್ದು, ಸರಳ ಸಜ್ಜನ ವ್ಯಕ್ತಿಯಾದ ಇವರು ಶ್ರೀ ಅಯ್ಯಪ್ಪ ಸ್ವಾಮಿಯ ಆರಾಧಕರಾಗಿ ಗುರುಸ್ವಾಮಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದು, ಇದೀಗ ತೀರಾ ಅಸೌಖ್ಯದಿಂದಾಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು ಇವರಿಗೆ ಯುವವಾಹಿನಿ(ರಿ.) ವೇಣೂರು ಘಟಕವು ನಡೆಸಿಕೊಂಡು ಬರುತ್ತಿರುವ “ಆಸರೆ ಸೇವಾ ಯೋಜನೆ” ಯ ಮೂಲಕ ರೂಪಾಯಿ 5000/- ಚೆಕ್ ನ್ನು ದಿನಾಂಕ 14-06-2022ನೇ ಮಂಗಳವಾರದಂದು ಕೃಷ್ಣಪ್ಪ ಪೂಜಾರಿಯವರ ಮನೆಗೆ ಭೇಟಿ ನೀಡಿ ನೀಡಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಯೋಗೀಶ್ ಬಿಕ್ರೋಟ್ಟು, ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಕ್ರೀಡಾ ಹಾಗೂ ಆರೋಗ್ಯ ನಿರ್ದೇಶಕರಾದ ನವೀನ್ ಪೂಜಾರಿ ಪಚ್ಚೇರಿ,ತಾಲೂಕು ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ನಿತೀಶ್ ಎಚ್, ಸದಾನಂದ ಪೂಜಾರಿ, ಹೆಚ್ ಎಲ್ ಉದಯ , ಪ್ರವೀಣ್ ಕೆ, ಸಂತೋಷ ಪೂಜಾರಿ, ಸಂಪತ್ ಪೂಜಾರಿ, ಸಂತೋಷ ಪೂಜಾರಿ ಮಂಜಲುಕ್ಕು, ಪ್ರಕಾಶ್ ಪೂಜಾರಿ, ಘಟಕದ ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಕುಕ್ಕೇಡಿ ಹಾಗೂ ಮನೆಯವರು ಉಪಸ್ಥಿತರಿದ್ದರು.