ಕೆಂಜಾರು ಕರಂಬಾರು : ಪುಲ್ವಾಮ ದ ಘಟನೆಯಲ್ಲಿ ವೀರ ಸ್ವರ್ಗ ಸೇರಿದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಯುವವಾಹಿನಿ (ರಿ) ಕೆಂಜಾರು ಕರಂಬಾರು ಘಟಕದ ಆಶ್ರಯದಲ್ಲಿ ದಿನಾಂಕ . 16.02.2019 ರಂದು ಕೆಂಜಾರು ಕರಂಬಾರು ಶ್ರೀದೇವಿ ಭಜನಾ ಮಂದಿರದಲ್ಲಿ ಕ್ಯಾಂಡಲ್ ಬೆಳಕಿನ ಮೂಲಕ ಪುಲ್ವಾಮ ಘಟನೆಯಲ್ಲಿ ವೀರ ಮರ ಹೊಂದಿದ ವೀರ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ದೇಶಕ್ಕಾಗಿ ವೀರ ಸ್ವರ್ಗ ಸೇರಿದ ಸೈನಿಕರ ಬಗ್ಗೆ ಯುವವಾಹಿನಿ (ರಿ) ಕೆಂಜಾರು ಕರಂಬಾರು ಘಟಕದ ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಸಂಧರ್ಬೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕೆಂಜಾರು ಕರಂಬಾರು ಘಟಕದ ಅಧ್ಯಕ್ಷರಾದ ಯಶವಂತ ಬಿ, ಕಾರ್ಯದರ್ಶಿ,ಪ್ರಸಾದ್ ಪಾಲನ್ , ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾದ್ ಪಾಲನ್ ನಿರೂಪಿಸಿದರು ಯಶವಂತ್ ವಿ ಧನ್ಯವಾದ ಅರ್ಪಿಸಿದರು