ಯುವಸಿಂಚನ ವಿಶೇಷಾಂಕ : 2021

ವಿಶುಕುಮಾರ್ ಮತ್ತು ತುಕಾರಾಮ್ ಪೂಜಾರಿ

ನಮಗೆಲ್ಲರಿಗೂ ತಿಳಿದಿರುವಂತೆ ವಿಶುಕುಮಾರ್ ಓರ್ವ ಧೀಮಂತ ವ್ಯಕ್ತಿ. ಆಡು ಮುಟ್ಟದ ಸೊಪ್ಪಿಲ್ಲ. ವಿಶುಕುಮಾರ್ ಕೈಯಾಡಿಸದ ಕ್ಷೇತ್ರವಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿ ಈ ಎಲ್ಲಾ ಕ್ಷೇತ್ರಗಳಲ್ಲಿ ಕೈಯಾಡಿಸಿ ಛಾಪನ್ನು ಒತ್ತಿದವರು. ಕೋಟಿ ಚೆನ್ನಯ, ಕರಾವಳಿ ಯಂತಹ ಅದ್ಭುತ ಸಿನೆಮಾ ನಿರ್ಮಾಣ ಮಾಡಿದವರು. ಒಂದರ್ಥದಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟವರು. ಅವರ ನಾಟಕ ಡೊಂಕು ಬಾಲದ ನಾಯಕರು ಭ್ರಷ್ಟರಿಗೆ ನುಂಗಲಾರದ ತುತ್ತಾಗಿ ಮೈಪರಚಿಕೊಂಡದ್ದು ಇಂದು ಇತಿಹಾಸ.

ನನ್ನ ಅಭಿಪ್ರಾಯದಂತೆ ನಮ್ಮ ಸಮಾಜದಲ್ಲಿ ಕತೆ, ಕವನ, ಕಾದಂಬರಿಗಳು ಮಾತ್ರ ಸಾಹಿತ್ಯದ ಪ್ರಕಾರಗಳು ಎನ್ನುವ ತಪ್ಪು ಕಲ್ಪನೆ ಇದೆ. ಬಯೋಗ್ರಾಫಿ, ಪ್ರವಾಸ ಕಥನ, ಜಾನಪದ ಸಾಹಿತ್ಯ, ವೈಜ್ಞಾನಿಕ ಸಾಹಿತ್ಯ ಹಾಗೆಯೇ ಇತಿಹಾಸ ಸಂಬಂಧಿತ ಸಾಹಿತ್ಯ, ಸಂಶೋಧನೆಗಳೂ ಕೂಡ ಸಾಹಿತ್ಯದ ಪ್ರಕಾರಗಳೇ. ಇದು ಸಾಹಿತ್ಯದ ಒಂದು ಮಗ್ಗುಲಾದರೆ ಸಾಹಿತ್ಯಕ್ಕೆ ಇನ್ನೊಂದು ಮಗ್ಗುಲು ಇದೆ. ಅದುವೇ ಭೌತಿಕ ಸ್ವರೂಪದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳು.

ಈ ನಿಟ್ಟಿನಲ್ಲಿ ಗುರುತಿಸಿಕೊಂಡವರೆ ಪ್ರೊ ತುಕಾರಾಮ್ ಪೂಜಾರಿಯವರು. ಇವರು ಮೂರು ದಶಕಗಳ ನಿರಂತರ ಪರಿಶ್ರಮದಿಂದ ಕಟ್ಟಿ ಬೆಳೆಸಿದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಇಂದು ಅಂತರ್‌‌ರಾಷ್ಟೀಯ ಮನ್ನಣೆ ಪಡೆದಿದೆ. ರಾಷ್ಟ-ಅಂತರ್ ರಾಷ್ಟ್ರ ಮಟ್ಟದಲ್ಲಿ ಒಂದು ಆಕರ ಕೇಂದ್ರವಾಗಿ ಇಂದು ಕಾರ್ಯ ನಿರ್ವಹಿಸುತ್ತಿದೆ. ರಾಣಿ ಅಬ್ಬಕ್ಕ ಕಲಾ ಗ್ಯಾಲರಿಯನ್ನು ನಿರ್ಮಾಣ ಮಾಡುವುದರೊಂದಿಗೆ ಅಬ್ಬಕ್ಕನಿಗೆ ಮೊದಲ ಬಾರಿಗೆ ಸ್ಪಷ್ಟ ರೂಪವನ್ನು ಕೊಟ್ಟ ಖ್ಯಾತಿಗೆ ಪಾತ್ರರಾದವರು. ಭಾರತೀಯ ಅಂಚೆ ಇಲಾಖೆ ಕೇಂದ್ರದ ಕೊಪಿರೈಟ್ ಹೊಂದಿದ ಅಬ್ಬಕ್ಕನ ತೈಲ ಚಿತ್ರದ ಅಂಚೆ ಲಕೋಟೆ ಬಿಡುಗಡೆ ಮಾಡುವುದರೊಂದಿಗೆ ಇದನ್ನು ಅಧಿಕೃತಗೊಳಿಸಿದೆ.

ಎಸ್.ಯು ಪಣಿಯಾಡಿಯವರು ತುಳುವಿಗಾಗಿ ಹೋರಾಡಿದ ಅವರ ಸಾಹಸವನ್ನು ಮರೆಯುತ್ತಿರುವ ಕಾಲಘಟ್ಟದಲ್ಲಿ ಅವರದೇ ಹೆಸರಿನಲ್ಲಿ ‘ಎಸ್ ಯು ಪಣಿಯಾಡಿ ಗ್ರಂಥಾಲಯ’ವನ್ನು ನಿರ್ಮಾಣ ಮಾಡಿ ಯುವ ಪೀಳಿಗೆ ಅವರನ್ನು ಎಂದಿಗೂ ಮರೆಯದಂತೆ ಮಾಡಿರುವುದು ಸಣ್ಣ ಸಾಧನೆಯಲ್ಲ. ಈ ಸಂದರ್ಭದಲ್ಲಿ ಗೋವಾ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್ ಪ್ರೊ ಶ್ರೀಪಾದರು ಕೇಂದ್ರಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಆಡಿದ ಒಂದು ಮಾತು ಇಲ್ಲಿ ಉಲ್ಲೇಖನೀಯ. “ನಾನೊಬ್ಬ academician ಆಗಿ ಹೇಳುವುದೆನೆಂದರೆ, ಪೂಜಾರಿಯವರು ಕಟ್ಟಿ ಬೆಳೆಸಿದ ಈ ವಸ್ತು ಸಂಗ್ರಹಾಲಯ ಹನ್ನೆರಡು ಪಿಹೆಚ್.ಡಿ ಗೆ ಸಮ’. ಈ ಮಾತಿನ ಮಹತ್ವವನ್ನು ಅರ್ಥ ಮಾಡಿಕೊಂಡರೆ ಇವರ ಸಾಧನೆಯ ಮಹತ್ವ ಅರ್ಥವಾದೀತು.

ಇನ್ನೊಂದು ವಿಚಾರವನ್ನು ಪ್ರಸ್ತಾಪಿಸದೆ ಹೋದರೆ ಖಂಡಿತಾ ತಪ್ಪಾದೀತು. ಎಸ್.ವಿ.ಎಸ್ ಕಾಲೇಜಿಗೆ ಬಂದ ನ್ಯಾಕ್ ತಂಡದ ಮುಖ್ಯಸ್ಥ ಶಿವಾಜಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ವಸಂತ ಚೌಹಾನ್‌ರು ಈ ಸಾಧನೆ ‘ಪದ್ಮಶ್ರೀ’ ಪ್ರಶಸ್ತಿಗೆ ಯೋಗ್ಯವಾದುದು ಎಂದು ಬಣ್ಣಿಸಿರುವುದು ಸುಳ್ಳಲ್ಲ. ಮರಾಠಿ ಲೇಖಕಿ ಸುರೇಖ ಷಾ ಅಬ್ಬಕ್ಕ ಗ್ಯಾಲರಿಯಿಂದ ಪ್ರಚೋದಿತರಾಗಿ ಕೇಂದ್ರದ ಸಂಪನ್ಮೂಲವನ್ನು ತಮ್ಮ ಮರಾಠಿಯ ಅಬ್ಬಕ್ಕ ಕಾದಂಬರಿಗೆ ಬಳಸಿಕೊಂಡಿದ್ದು ಸಾಮಾನ್ಯ ವಿಷಯವಲ್ಲ. ವಿದೇಶಿ ಸಂಶೋಧಕರುಗಳಾದ ಡೇನಿಯಲ್ ಸಿಮೊನ್, ಎಲಿಜೆಬೆತ್ ಲಂಬೊರ್ನ್, ಸೆಟ್ಲಾನಾ ರೆಜೆಕೊವಾ ಮುಂತಾದವರು ಅಂತರಾಷ್ಟ್ರೀಯ ಜರ್ನಲ್‌ಗಳಲ್ಲಿ ಕೇಂದ್ರದ ಆಕರಗಳನ್ನು ಉಲ್ಲೇಖಿಸಿ ಸಂಶೋಧನಾತ್ಮಕ ಪ್ರಬಂಧಗಳನ್ನು ರಚಿಸಿರುತ್ತಾರೆ.

ಈ ವರ್ಷದ ವಿಶುಕುಮಾರ್ ಪ್ರಶಸ್ತಿಗೆ ಭಾಜನರಾದ ಮಾನ್ಯ ಡಾ. ತುಕಾರಾಮ ಪೂಜಾರಿಯವರು ವಿದ್ಯಾರ್ಥಿ ದೆಸೆಯಲ್ಲೆ ತಮ್ಮ ಬಹುಮುಖ ಪ್ರತಿಭೆಯಿಂದ ಗುರುತಿಸಿ ಕೊಂಡವರು. ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ಅಂದಿನಿಂದ ಇಂದಿನವರೆಗೂ ತೊಡಗಿಸಿಕೊಂಡ ನಿರಂತರತೆ ನಿಜವಾಗಿಯೂ ಅನುಕರಣೀಯ. ವಿದ್ಯಾರ್ಥಿ ದೆಸೆಯಲ್ಲೆ ಮಂಗಳೂರಿನ ಸರಕಾರಿ ಕಾಲೇಜು (ಇಂದು ವಿ.ವಿ ಕಾಲೇಜು) ಕೊಡ ಮಾಡುವ ‘ವರ್ಷದ ಅತ್ಯುತ್ತಮ ನಟ’ ಪ್ರಶಸ್ತಿಗೆ ಭಾಜನರಾದವರು. 1985-86ರಲ್ಲಿ ಜಾನಪದ ಶೈಲಿಯ ತುಳು ನಾಟಕಗಳ ಪ್ರೋತ್ಸಾಹಿಸುವ ಸಲುವಾಗಿ ಸಿಂಗಾರ ಮಂಗಳೂರು ನಾಟಕ ತಂಡವನ್ನು ಕಟ್ಟಿದವರು. 1980 ರ ದಶಕದ ಪ್ರತಿಷ್ಟಿತ ಭೂಮಿಕ ಹಾಗೂ ಕಾಳಜಿ ನಾಟಕ ತಂಡಗಳಲ್ಲಿ ಗೊಂದೊಳು, ಯಯಾತಿ ಮುಂತಾದ ನಾಟಕಗಳಲ್ಲಿ ನಟಿಸಿ ಸೈ ಎಣಿಸಿಕೊಂಡವರು.

          ಡಾ.ತುಕಾರಾಮ್ ಪೂಜಾರಿ

ನನ್ನ ಗುರುಗಳಾದ ತುಕಾರಾಮ ಪೂಜಾರಿ ನಿರ್ದೇಶನದ, ಅಮೃತ ಸೋಮೇಶ್ವರರ ರಚನೆಯ ‘ಪುತ್ತೂರ್ದ ಪುತ್ತೊಳಿ’ ನಾಟಕದಲ್ಲಿ ಸ್ವತ: ನಾನೇ ಅವರಿಂದ ಬಣ್ಣ ಹಚ್ಚಿಸಿಕೊಂಡು ಪ್ರಥಮ ಬಹುಮಾನ ಪಡೆದ ನೆನಪು ಇಂದಿಗೂ ಹಸಿರಾಗಿದೆ.

ಅಧ್ಯಯನ ಕೇಂದ್ರದಡಿಯಲ್ಲಿ ಹತ್ತು ಹಲವು ಪುಸ್ತಕಗಳು ಪ್ರಕಟಗೊಂಡಿವೆ. ‘ಕನ್ನಡ ನಾಡಿಗೆ ತುಳುವರ ಕೊಡುಗೆ’ ತುಕಾರಾಮರ ಮೊದಲ ಕೃತಿ. ಅವರ ಲೇಖನಗಳನ್ನೊಳಗೊಂಡ ಬಂಟ್ವಾಳ ಇತಿಹಾಸ ದರ್ಶನ, ತತ್ವಾನ್ವೇಷಣೆ, ಸಿರಿಸಂಪದ, ಭೌತಿಕಶೋಧ, ಕಣ್ಮರೆಯಾಗುತ್ತಿರುವ ತುಳು ಬದುಕು ಮುಂತಾದ ಕೃತಿಗಳನ್ನು ಇವರು ಸಂಪಾದಿಸಿದರೆ, 17 ಇತರ ಲೇಖಕರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಹತ್ತು ಹಲವು ಸಂಶೋಧನಾ ಪ್ರಬಂಧಗಳು ವಿವಿದೆಡೆಗಳಲ್ಲಿ ಪ್ರಕಟಗೊಂಡಿವೆ. ಅಲ್ಲದೆ, ಇವರ ಸಾಧನೆ, ಚಟುವಟಿಕೆಗಳ ಕುರಿತಂತೆ ನಾಲ್ಕು ಕೃತಿಗಳು ಹೊರಬಂದಿವೆ. 1997ರಲ್ಲಿ ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಟಿಯಲ್ಲಿ ಮೊದಲ ಪ್ರಬಂಧ ‘ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಪರಂಪರೆ’ ಎಂಬ ಪ್ರಬಂಧ ಮಂಡಿಸುವುದರೊಂದಿಗೆ ಇತಿಹಾಸವನ್ನೇ ನಿರ್ಮಿಸಿದ ಇವರು ಮುಂದೆ ಜಿಲ್ಲೆ ಹಾಗೂ ತಾಲೂಕು ಸಮ್ಮೇಳನಗಳಲ್ಲಿ ನಿರಂತರವಾಗಿ ಭಾಗಿಯಾದವರು. ಇವರ ಕೊಡುಗೆಯನ್ನು ಗಮನಿಸಿ ಕನ್ನಡ ಸಾಹಿತ್ಯ ಪರಿಷತ್ತು 2019 ರಲ್ಲಿ ಫರಂಗಿಪೇಟೆಯಲ್ಲಿ ನಡೆದ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ನೀಡಿ ಗೌರವಿಸಿತು.

ಈ ಮೂರು ದಶಕಗಳಲ್ಲಿ ಇವರು ಹಮ್ಮಿಕೊಂಡ, ಆಯೋಜಿಸಿದ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿ ನಿಂತಿದೆ. ಈ ಎಲ್ಲಾ ಸಾಧನೆಗಳನ್ನು ಮಾಡಿದ ಪೂಜಾರಿಯವರ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಹಲವು ಅಡೆತಡೆಗಳು, ಟೀಕೆ-ಟಿಪ್ಪಣಿಗಳನ್ನು ಮೆಟ್ಟಿ ನಿಂತು ಇಂದು ಅವರು ಕಟ್ಟಿದ ಸಂಸ್ಥೆಗಳು ಹೆಮ್ಮರವಾಗಿ ಬೆಳೆದು ನಿಂತಿದೆ. ಇಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾವೇರಿಯ ಜಾನಪದ ವಿಶ್ವವಿದ್ಯಾಲಯ, ಗಂಗಾವತಿಯ ಸಂಕಲ್ಪ ಕಾಲೇಜಿನ ವಸ್ತುಸಂಗ್ರಹಾಲಯಗಳಿಗೆ ಸಲಹೆಗಾರರಾಗಿರುವುದು (advisory committee member) ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ.

ತನ್ನ ಮದುವೆಯ ವಿಚಾರದಲ್ಲೂ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟು ಕೇವಲ ಹಾರ ವಿನಿಮಯದೊಂದಿಗೆ ಸರಳ ವಿವಾಹವಾಗಿ ಸಮಾಜಕ್ಕೆ ಮಾದರಿಯಾದವರು. ಇಂತಹ ಧೀಮಂತ ವ್ಯಕ್ತಿತ್ವವನ್ನು ಗುರುತಿಸಿಯೇ 2021 ಸಾಲಿನಲ್ಲಿ ಮೂರು ಪ್ರತಿಷ್ಟಿತ ಪ್ರಶಸ್ತಿಗಳು ಅರಸಿಕೊಂಡು ಬಂದವು- ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್ ಆರ್ ಹೆಗ್ಡೆ ಪ್ರಶಸ್ತಿ, ವಿಶುಕುಮಾರ್ ಪ್ರಶಸ್ತಿ ಹಾಗೂ ಮೈಸೂರಿನ ಪಿ ಆರ್ ಟಿ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಪಿ ಆರ್ ತಿಪ್ಪೆಸ್ವಾಮಿ ಜಾನಪದ ಕಲಾ ಪ್ರಶಸ್ತಿ.

ಸಾಹಿತ್ಯ ಕೃಷಿ ಬಹಳಷ್ಟು ಜನ ಮಾಡುತ್ತಾರೆ. ಸಮಗ್ರ ತುಳುನಾಡಿನ ಸಂಸ್ಕೃತಿಯನ್ನೇ ಕಟ್ಟಿಕೊಟ್ಟ ತುಕಾರಾಮ್ ಪೂಜಾರಿಯಂತವರು ಅತ್ಯಂತ ವಿರಳ ( ಬಿ.ಜಯಶ್ರೀ ಕಲಾವಿದೆ, ಕೇಂದ್ರಕ್ಕೆ ಬೇಟಿ ನೀಡಿದಾಗ). ಸಾಹಿತ್ಯಕ್ಕೆ ಆಕರಗಳನ್ನು ಸೃಷ್ಟಿ ಮಾಡಿದ ಸಾಧಕರಂದರೆ ತಪ್ಪಾಗಲಿಕ್ಕಿಲ್ಲ. ಜೀವಮಾನದುದ್ದಕ್ಕೂ ಶ್ರೀಗಂಧದಂತೆ ತೇಯ್ದು ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ ಡಾ.ತುಕಾರಾಮ್ ಪೂಜಾರಿಯವರನ್ನು ಗಮನಿಸುವಾಗ ನನಗೆ ವಿಶುಕುಮಾರ್‌ರವರ ಹಟ, ಛಲ, ಕೋಪ ಎಲ್ಲವೂ ಕಣ್ಣ ಮುಂದೆ ಕಟ್ಟುತ್ತದೆ. ಅವರೊಬ್ಬ ಸಂಸ್ಕೃತಿ ಪೂಜಾರಿ.

ಪ್ರೊ ತುಕಾರಾಮ್ ಪೂಜಾರಿಯವರು ಕೇವಲ ಇತಿಹಾಸ ಭೋಧಿಸಲಿಲ್ಲ. ಇತಿಹಾಸ ನಿರ್ಮಿಸಿದರು. ಸಾಧ್ಯವಾದರೆ ಒಮ್ಮೆ ಕೇಂದ್ರಕ್ಕೆ ಬೇಟಿ ನೀಡಿ. ಅವರ ಸಾಧನೆಯ ಪರಿಚಯವನ್ನು ಪಡೆಯಿರಿ.

ಲೇಖನ : ರಾಜೇಶ್ ಸುವರ್ಣ ಬಿ.ಸಿ.ರೋಡ್

 

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!