ಡಾ.ಈಶ್ವರ್ ಅಲೆವೂರು -ರಜತ ರಶ್ಮಿ -2012

ವಿಶುಕುಮಾರ್- ತಾತ್ವಿಕ ನಿಲುವುಗಳು

ಅಧ್ಯಯನ

ವಿಶುಕುಮಾರ್ ಕಾಲವಾಗಿ (1989) ಇದೀಗ 26 ವರ್ಷಗಳು ಪೂರ್ಣವಾಗುತ್ತಿದೆ. ಆದರೆ ಅವರು ಬಿಟ್ಟು ಹೋದ ಸಾಹಿತ್ಯ ಕೃತಿಗಳು, ನಾಟಕ, ಸಿನೆಮಾಗಳು ಇಂದಿಗೂ ನಮ್ಮನ್ನು ಕಾಡಿಸುತ್ತವೆ; ಯೋಚನೆಗೆ ಹಚ್ಚುತ್ತವೆ. ವಿಶುಕುಮಾರ್ ತಮ್ಮ ಕೃತಿಗಳಲ್ಲಿ ಆಯ್ದುಕೊಂಡ ವಸ್ತುಗಳು, ಸಾಮಾಜಿಕ ಸಮಸ್ಯೆಗಳು, ಸಂಘರ್ಷಗಳು, ಇವತ್ತಿಗೂ ಪ್ರಸ್ತುತವೆನಿಸುತ್ತವೆ. ವಿಶುಕುಮಾರ್ ಭಿನ್ನವಾಗಿ ಆಲೋಚಿಸುವ ಮನೋಧರ್ಮದವರು. ಹಾಗಾಗಿ ಕೆಲವೊಮ್ಮೆ ಅವರು ವಿವಾದಾತ್ಮಕ ವ್ಯಕ್ತಿಯೂ ಆದರು.

ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಒಂದು ಕ್ಷೇತ್ರದಲ್ಲಿ ಯಶಸ್ಸನ್ನು, ಪ್ರಸಿದ್ಧಿಯನ್ನು ಪಡೆಯುವುದನ್ನು ನಾವು ಕಾಣುತ್ತೇವೆ. ಆದರೆ ವಿಶುಕುಮಾರ್ ತಾವು ಪ್ರವೇಶಿಸಿದ ಎಲ್ಲಾ ಕ್ಷೇತ್ರಗಳಲ್ಲೂ ಸಫಲತೆಯನ್ನು ಸಾಧಿಸಿದರು. ವಿಶುಕುಮಾರರು ರಾಜಕೀಯವೂ ಸೇರಿ ಈ ಎಲ್ಲಾ ಕ್ಷೇತ್ರಗಳಿಗೆ ಧುಮ್ಮಿಕ್ಕಿದುದು ಹೆಸರಿಗಾಗಿ ಅಲ್ಲ. ತಾವು ಪ್ರತಿನಿಧಿಸುತ್ತಿರುವ ಎಲ್ಲಾ ಕ್ಷೇತ್ರಗಳನ್ನು ತಮ್ಮ ಸಾಮಾಜಿಕ ಹೋರಾಟದ ಮಾಧ್ಯಮವಾಗಿ ಬಳಸಿಕೊಳ್ಳುವುದು ಅವರ ಇಚ್ಛೆ ಆಗಿತ್ತು.

ಸ್ವತಃ ವಿಶುಕುಮಾರರೇ ಒಂದು ಕಡೆ ಸಾಹಿತ್ಯದಿಂದ ಕ್ರಾಂತಿಯಾಗಬೇಕು. ಹೆಸರು, ಹಣ ಗಳಿಕೆಯೇ ನಮ್ಮ ಪುಸ್ತಕ ರಚನೆಯ ಉದ್ದೇಶವಾಗಬಾರದು. ಬರವಣಿಗೆಯ ಉದ್ದೇಶ ಪಬ್ಲಿಸಿಟಿಯಲ್ಲ (ಸಂಕ್ರಮಣ 1974) ಎಂದಿದ್ದಾರೆ.

ಒಂದು ರೀತಿಯಲ್ಲಿ ವಿಶುಕುಮಾರರ ಬರಹಗಳು ಮಾರುಕಟ್ಟೆ ಕೇಂದ್ರಿತ ಬರಹಗಳು. ಪತ್ರಿಕೆಗಳ ಹಸಿವನ್ನು ಹಿಂಗಿಸಲು ಅವರು ಬರೆದರು. ವಿಶುಕುಮಾರರ ಎಲ್ಲ ಕಾದಂಬರಿಗಳು ಒಂದಲ್ಲ ಒಂದು ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹರಿದು ಬಂದವುಗಳು. ಹಾಗಂತ ಮನರಂಜನೆಯೇ ಅವರ ಸಾಹಿತ್ಯದ ಉದ್ದೇಶವಾಗಿರಲಿಲ್ಲ. ಸಾಹಿತ್ಯದ ಮೂಲಕ ಸಾಮಾಜಿಕ ಎಚ್ಚರವನ್ನು ಮೂಡಿಸುವುದು ಅವರ ಗುರಿಯಾಗಿತ್ತು. ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಧಾರ್ಮಿಕ ಶೋಷಣೆ, ಮೂಢನಂಬಿಕೆ, ಸ್ತ್ರೀ ಶೋಷಣೆ, ಮತಾಂತರ, ಭ್ರಷ್ಟಾಚಾರ ಇತ್ಯಾದಿಗಳ ವಿರುದ್ಧ ಸಮರ ಸಾರಲು ವಿಶುಕುಮಾರರು ತಮ್ಮ ಲೇಖನಿಯನ್ನು ಉಪಯೋಗಿಸಿಕೊಂಡರು. ವಿಶುಕುಮಾರರು ತಮ್ಮ ಎಲ್ಲಾ ಕಾದಂಬರಿಗಳಲ್ಲಿ ತಮ್ಮ ಕಾಲದ ಸಮಸ್ಯೆಯ ವಸ್ತುವನ್ನು ಆಯ್ದುಕೊಂಡು ಈ ಬಗ್ಗೆ ಎಲ್ಲ ಮಗ್ಗುಲುಗಳಲ್ಲಿ ಚರ್ಚಿಸಿದ್ದಾರೆ. ’ಕನ್ನಡ ಕಾದಂಬರಿಗಳಿಗೆ ವಸ್ತುವಿನ ಆಯ್ಕೆಯ ದೃಷ್ಟಿಯಿಂದ ಹೊಸತನ ತಂದವರಲ್ಲಿ ವಿಶುಕುಮಾರ್ ಒಬ್ಬರು. ಆತ ಬಾಳಿನ ಏಣಿ ಏರಿ ಬಂದದ್ದನ್ನು ಮುಚ್ಚು ಮರೆಯಿಲ್ಲದೆ ಹೇಳುತ್ತಿದ್ದರು’ (ಡಾ. ಹಂಪನಾ- ಕನ್ನಡ ನುಡಿ 1986)

ವಿಶುಕುಮಾರರು ತಮ್ಮನ್ನು ಯಾವುದೇ ಸಾಹಿತ್ಯಿಕ ಪಂಥಕ್ಕೆ ಸೇರಿಸಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ. ಹಾಗಂತ ಅವರ ಸಾಹಿತ್ಯದಲ್ಲಿ ತಾತ್ವಿಕ ಧೋರಣೆ ಇಲ್ಲವೆಂದು ತಳ್ಳಿ ಹಾಕುವಂತಿಲ್ಲ. ಖ್ಯಾತ ಸಾಹಿತಿ, ವಿಮರ್ಶಕಿ ಡಾ. ಸಬಿಹಾ ಭೂಮೆ ಗೌಡ ಅವರು ವಿಶುಕುಮಾರರ ಬರಹಗಳಲ್ಲಿ ಬಂಡಾಯದ ಮನೋಧರ್ಮವಿರುವುದನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶುಕುಮಾರರ ಸಾಹಿತ್ಯ ಒಂದು ಬಗೆಯ ಪ್ರತಿಭಟನೆಯ ಸ್ವರೂಪದ್ದು ಎನ್ನಲು ಅಡ್ಡಿಯಿಲ್ಲ. ವಿಶುಕುಮಾರರ ಜೀವನ ಮತ್ತು ಸಾಹಿತ್ಯ ಶೋಷಣೆಯನ್ನು ಪ್ರತಿಭಟಿಸಬೇಕೆಂದು ಒತ್ತಾಯದಿಂದ ಕೂಡಿದುವು. ಅವರ ಹೆಚ್ಚಿನ ಕಾದಂಬರಿ ನಾಟಕ- ಸಿನೆಮಾಗಳಲ್ಲಿ ಈ ಮೇಲಿನ ಧೋರಣೆಯಿದೆ ನರೇಂದ್ರ ರೈ ದೇರ್ಲ (ವಿಶುಕುಮಾರರ ಜೀವನ ಮತ್ತು ಕೃತಿಗಳ ಅಧ್ಯಯನ)

ವಿಶುಕುಮಾರರು ಒಟ್ಟು 16 ಕಾದಂಬರಿಗಳನ್ನು ಬರೆದಿದ್ದಾರೆ. ಇವೆಲ್ಲ ಕೃತಿ ರೂಪದಲ್ಲಿ ಪ್ರಕಟವಾಗಿದೆ. ಆದರೆ ಒಂದು ಕಾದಂಬರಿ ’ಹೇಮಾವತಿ’ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದರೂ ಕೃತಿ ರೂಪದಲ್ಲಿ ಬಂದಿಲ್ಲ. ವಿಶುಕುಮಾರರ ಒಂದೆರಡು ಕಾದಂಬರಿಗಳು ಪತ್ತೆದಾರಿ ಶೈಲಿಯಲ್ಲಿದ್ದರೆ ಉಳಿದವುಗಳು ಸಾಹಿತ್ಯಿಕ ಮೌಲ್ಯವನ್ನು ಹೊಂದಿದವುಗಳಾಗಿವೆ.

ವಿಶುಕುಮಾರರ ಮೊದಲ ಕಾದಂಬರಿ ’ನೆತ್ತರಗಾನ’ ಕಲಾತ್ಮಕವಾಗಿದ್ದು ಹೆಚ್ಚು ಚರ್ಚೆಗೆ ಒಳಗಾಗಿಲ್ಲ. ಇದು ಓರ್ವ ಯಕ್ಷಗಾನ ಕಲಾವಿದನ ದುರಂತಮಯ ಬದುಕನ್ನು ನಿರೂಪಿಸುತ್ತ ಕಲಾವಿದನ ಕನಸುಗಳು, ವ್ಯಥೆಗಳು, ಚಟಗಳು, ಆರ್ಥಿಕ ಸಂಕಟಗಳು ಮೇಳದ ವ್ಯವಸ್ಥಾಪಕನ ಗೋಳು, ಮೇಲಾಟಗಳು ಇತ್ಯಾದಿಗಳನ್ನು ಹೃದಯ ಸ್ಪರ್ಶಿಯಾಗಿ ನಿರೂಪಿಸುತ್ತದೆ.

ವಿಶುಕುಮಾರರ ಪ್ರಸಿದ್ಧ ’ಕರಾವಳಿ’ ಕಾದಂಬರಿ ಮೊಗವೀರ ಜನಾಂಗದ ಸೂಕ್ಷ್ಮ ವಿವರಗಳನ್ನು ನೀಡುತ್ತಲೇ ಇಲ್ಲಿನ ಸಾಂಪ್ರದಾಯಿಕ ನ್ಯಾಯಾಂಗ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಎತ್ತಿ ಹಿಡಿದು ಆ ಮೂಲಕ ಅನ್ಯಾಯಗಳನ್ನು ಬಯಲಿಗೆಳೆಯುತ್ತದೆ. ಇಲ್ಲಿ ಬಂದ ಕಥಾ ನಾಯಕಿ ಮೊಗವೀರ ಹೆಣ್ಣು ಸಾಂಪ್ರದಾಯಿಕ ಕಟ್ಟುಗಳನ್ನು ಮುರಿದು ಅನ್ಯ ಧರ್ಮದ ಯುವಕನನ್ನು ಮದುವೆಯಾಗಿ ಬಂಡಾಯ ಸಾರುತ್ತಾಳೆ. ಜೊತೆಗೆ ಇಲ್ಲಿ ಬರುವ ಮೊಗವೀರ ಯುವಕ ಬಾಲ್ಯ ವಿವಾಹವನ್ನು ತೊರೆದು ಮರು ವಿವಾಹವಾಗುವುದರ ಮೂಲಕ ಪ್ರತಿಭಟನೆಯನ್ನು ಸೂಚಿಸುತ್ತಾನೆ.

ವಿಶುಕುಮಾರರ ಇನ್ನೊಂದು ಮಹತ್ವದ ಕಾದಂಬರಿ ’ಮದರ್’ ಮತಾಂತರ ಸಮಸ್ಯೆಯನ್ನು ಚರ್ಚಿಸುತ್ತದೆ. ಹಿಂದೂ ಧರ್ಮದ ಪಾರಂಪರಿಕ ಅನಾದರ ಪ್ರವೃತ್ತಿಯನ್ನು ಕ್ರೈಸ್ತ ಧರ್ಮ ಸದುಪಯೋಗಪಡಿಸಿಕೊಳ್ಳುವ ವಿವರವಿದೆ. ಇದರ ಜೊತೆಗೆ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ನರು ಅನುಭವಿಸಿದ ತಾರತಮ್ಯ ಭಾವನೆ, ಶೋಷಣೆಗಳನ್ನು ಕಾದಂಬರಿ ತೆರೆದಿಡುತ್ತದೆ.

’ಭೂಮಿ’ ಕಾದಂಬರಿ ಕಿರಿದಾದರೂ ವಿಶುಕುಮಾರರ ಉತ್ಕೃಷ್ಟ ಕಾದಂಬರಿ. ಇದು ’ಭೂ ಮಸೂದೆ’ ಯ ಸಾಧಕ ಬಾಧಕಗಳನ್ನು ಚರ್ಚಿಸುತ್ತ ಈ ಕಾನೂನಿನಿಂದ ಒಕ್ಕಲಿಗರು, ಧಣಿಗಳು ಅನುಭವಿಸಿದ ಕಷ್ಟ ನಷ್ಟಗಳನ್ನು ಪರಿಣಾಮಕಾರಿಯಾಗಿ ಬಿಚ್ಚಿಡುತ್ತದೆ.

’ಹಂಸಕ್ಷೀರ’ ಕಾದಂಬರಿ ಸರಕಾರಿ ಆಸ್ಪತ್ರೆಯ ಕಾರ್ಯ ವೈಖರಿ, ಭ್ರಷ್ಟಾಚಾರ, ಅವ್ಯವಸ್ಥೆ, ಕಾಮ ಕೇಳಿಗಳನ್ನು ಬಯಲಿಗೆಳೆಯುತ್ತ ಆಸ್ಪತ್ರೆ ದಾದಿಯರು ಎದುರಿಸುವ ಶೋಷಣೆ, ಕರುಣಾ ಕಥೆಯನ್ನು ನಿರೂಪಿಸುತ್ತದೆ.

’ಈ ಪರಿಯ ಬದುಕು’ ಕಾದಂಬರಿಯಲ್ಲಿ ಅಮಾಯಕ ವೇಶ್ಯಾ ಹೆಣ್ಣುಗಳನ್ನು ಸಮಾಜ, ಮಂತ್ರಿಮಾಗಧರು, ವಿದ್ಯಾರ್ಥಿಗಳು ಮೋಜಿಗಾಗಿ ಬಳಸಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ಪರಿಯನ್ನು ವಿವರಿಸುತ್ತದೆ.

’ವಿಪ್ಲವ’ದಲ್ಲಿ ಸಾಂಪ್ರದಾಯಿಕತೆ ಹಾಗೂ ಸಾಮಾಜಿಕ ಸಮಸ್ಯೆಯ ಸುತ್ತ ಈ ಕಾದಂಬರಿ ಬೆಳೆಯುತ್ತದೆ. ’ಭಟ್ಕಳದಿಂದ ಬೆಂಗಳೂರಿಗೆ’ ಕಾದಂಬರಿ ಭೂಗತ ಲೋಕದ ವಿಸ್ಮಯವನ್ನು, ಕಳ್ಳ ಸಾಗಾಣಿಕೆಯ ವೈಖರಿಯನ್ನು ನಿರೂಪಿಸುತ್ತದೆ. ’ಮಥನ’ ಕಾದಂಬರಿ ಸಮಾಜದ ವಿವಿಧ ಸ್ತರದ ಮಹಿಳೆಯರು ಕಾಮಕ್ಕೆ ಯಾವ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎನ್ನುವುದನ್ನು ನಿರೂಪಿಸುತ್ತದೆ. ’ಮಿಯಾಂವ್ ಕಾಮತ್’ ಶ್ರೀಮಂತ ವ್ಯಕ್ತಿಗಳನ್ನು, ಅವರ ಖಯಾಲಿಗಳನ್ನು ಹಾಸ್ಯಮಯವಾಗಿ ವಿಡಂಬಿಸುತ್ತದೆ. ’ಗಗನಗಾಮಿಗಳು’ ವಿಜ್ಞಾನದ ದುರುಪಯೋಗವನ್ನು ಭೇದಿಸುವ ಕಾದಂಬರಿ. ’ಕಪ್ಪುಸಮುದ್ರ’ ಕಳ್ಳ ಸಾಗಾಣಿಕೆಯ ವಸ್ತುವುಳ್ಳ ವಿಶಿಷ್ಟ ತಂತ್ರಗಾರಿಕೆಯ ಕಾದಂಬರಿ. ’ಪ್ರಜೆಗಳು, ಪ್ರಭುಗಳು’ ರಾಜಕೀಯ ರಂಗದ ಹೊಲಸುತನ, ಅಪವಿತ್ರತೆಯನ್ನು ನಿರೂಪಿಸುವ ಕಾದಂಬರಿಯಾಗಿದೆ. ’ಕರ್ಮ’ ಮತ್ತು ’ಭಗವಂತನ ಆತ್ಮಕಥೆ’ ಕಾದಂಬರಿಗಳು ದೇವಸ್ಥಾನ ಹಾಗೂ ಮಾರಿಗುಡಿಗಳಲ್ಲಿ ದೇವರ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ಪ್ರತಿಬಿಂಬಿಸುತ್ತವೆ. ಇದರ ಜೊತೆಗೆ ನಮ್ಮ ಆರಾಧನಾ ಸಂಪ್ರದಾಯದ ದೋಷಗಳನ್ನು, ವೈಪರೀತ್ಯಗಳನ್ನು ವಿವರಿಸುತ್ತವೆ.

ಹೀಗೆ ವಿಶುಕುಮಾರರು ಸಮಾಜದ ವಿಭಿನ್ನ ಮುಖಗಳನ್ನು ತಮ್ಮ ಕಾದಂಬರಿಗಳಲ್ಲಿ ಪ್ರತಿಬಿಂಬಿಸಿದ್ದಾರೆ. ಬದುಕಿನ ವೈರುಥ್ಯಗಳನ್ನು ತಮ್ಮ ಕಾದಂಬರಿಗಳಲ್ಲಿ ನೇರ ವಿಮರ್ಶೆಗೆ ಒಡ್ಡಿದ್ದಾರೆ. ಖ್ಯಾತ ವಿಮರ್ಶಕ ಸಾಹಿತಿ ಜನಾರ್ದನ್ ಭಟ್ ಅನ್ನುವಂತೆ ವಿಶುಕುಮಾರರ ಕಾದಂಬರಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇಪ್ಪತ್ತನೇ ಶತಮಾನದ ಬದುಕಿನ ಸಾಹಿತ್ಯೀಕರಣವಿದೆ. ಡಾ| ಸಬಿಹಾ ಭೂಮೆ ಗೌಡ ಅವರು ವಿಶುಕುಮಾರ್ ಅವರ ಕಾದಂಬರಿಗಳ ವಸ್ತುವನ್ನು ಅವಲೋಕಿಸಿದರೆ ಅವರಿಗೆ ಸಾಮಾಜಿಕ ವಿಷಮತೆಗಳ ಬಗ್ಗೆ, ಅನ್ಯಾಯ ಶೋಷಣೆಗಳ ಬಗ್ಗೆ, ಶ್ರೇಣೀಕರಣದ ಬಗ್ಗೆ ಸ್ಪಷ್ಟ ವಿರೋಧವಿದ್ದುದು ವ್ಯಕ್ತವಾಗುತ್ತದೆ ಎನ್ನುತ್ತಾರೆ. ಇನ್ನೋರ್ವ ಖ್ಯಾತ ವಿಮರ್ಶಕರಾದ ವಿ.ಗ. ನಾಯಕ ಅವರು ವಿಶುಕುಮಾರ್ ಕನ್ನಡ ನಾಡ ನುಡಿಯನ್ನು ಶ್ರೀಮಂತಗೊಳಸಿದ ಧೀಮಂತ ಸಾಹಿತಿ. ಉದ್ದಕ್ಕೂ ಕೆಟ್ಟ ವ್ಯವಸ್ಥೆಯೊಂದಿಗೆ ಸೆಣಸಾಡಿದ ಧೀರ ಸಾಹಿತಿ! ವಿಶುಕುಮಾರ ತನ್ನ ನಿರ್ಭಿಡತೆಯ ವ್ಯಕ್ತಿತ್ವದಿಂದ, ಬರವಣಿಗೆಯಿಂದ ಬಹಳ ಮಂದಿಗೆ ’ಕಹಿ’ ಯಾದವರು. ಆದರೆ ಅದಕ್ಕಾಗಿ ಅವರು ಬದಲಾದವರಲ್ಲ. ಕೊನೆಯ ತನಕವೂ ಅವರು ಸತ್ಯಕ್ಕೆ ’ಮನಸ್ಸಿಗೆ’ ಅನುಭವಕ್ಕೆ ಪ್ರಾಮಾಣಿಕವಾಗಿ ನಡೆದುಕೊಂಡವರು ಎಂದು ಮೆಚ್ಚಿಕೊಂಡಿದ್ದಾರೆ.

ವಿಶುಕುಮಾರರ ನಾಟಕಗಳೂ ಕೂಡ ಸಮಾಜದ ಕಟು ವಿಮರ್ಶೆಯನ್ನು ವಿಡಂಭನಾತ್ಮಕವಾಗಿ ನಿರೂಪಿಸುತ್ತವೆ. ಇವರ ’ಡೊಂಕು ಬಾಲದ ನಾಯಕರು’ ರಾಜಕೀಯ ರಂಗದ ವಿಕೃತಿಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುತ್ತದೆ. ಇವರ ಜನಪ್ರಿಯ ತುಳುನಾಟಕ ’ಕೋಟಿ- ಚೆನ್ನಯ’ ಕೂಡ ಅನ್ಯಾಯದ ವಿರುದ್ಧ ಸೆಣಸಾಡುವ ಜಾನಪದ ವೀರರಾದ ’ಕೋಟಿ- ಚೆನ್ನಯ’ ರ ಯಶೋಗಾಥೆಯಾಗಿದೆ.

ವಿಶುಕುಮಾರ್‌ರ ಒಂದು ಕಥಾ ಸಂಕಲನ ’ಕುಸುಮ ಕೀರ್ತನೆ’ ಅವರು ಬದುಕಿರುವಾಗಲೇ ಪ್ರಕಟವಾಗಿದೆ. ಅವರು ನಿಧನರಾದ ನಂತರ ಅವರ ಪತ್ನಿ ವಿಜಯಲಕ್ಷ್ಮಿ ವಿಶುಕುಮಾರ್ ಅವರ ೨೦ ಕಥೆಗಳನ್ನು, ಒಂದು ಗೂಡಿಸಿ ’ಚೆಲ್ಲಾಟದ ಚದುರೆಯರು ಮತ್ತು ಇತರ ಕಥೆಗಳು’ ಕೃತಿಯನ್ನು ಪ್ರಕಟಿಸಿದ್ದಾರೆ. ಇಲ್ಲಿ ವಿಶುಕುಮಾರರು ಬದುಕಿನಲ್ಲಿ ಕಂಡುಂಡ ಅನುಭವಗಳನ್ನು ಸುಂದರವಾಗಿ ಕಥಾ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ವಿಭಿನ್ನ ಪತ್ರಿಕೆಯಲ್ಲಿ ಪ್ರಕಟವಾದ ವಿಶುಕುಮಾರರ ಸುಮಾರು ೬೦ಕ್ಕೂ ಮಿಕ್ಕ ಬಿಡಿ ಕಥೆಗಳು ಇನ್ನೂ ಪುಸ್ತಕ ರೂಪವನ್ನು ಕಂಡಿಲ್ಲ. ವಿಶುಕುಮಾರರು ಕರಾವಳಿಯ ಸೂಕ್ಷ್ಮ ವಿವರಗಳನ್ನು ಅಲ್ಲಿನ ಸಂಸ್ಕೃತಿ, ಆಚಾರ, ವಿಚಾರಗಳನ್ನು ತಮ್ಮ ಕೃತಿಗಳಲ್ಲಿ ಕಲಾತ್ಮಕವಾಗಿ ಪಡಿ ಮೂಡಿಸಿದ್ದಾರೆ.

ವಿಶುಕುಮಾರರ ಬರವಣಿಗೆಯ ಕ್ಷೇತ್ರ ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು, ಕುಂದಾಪುರ, ಬೆಂಗಳೂರು, ಮುಂಬಯಿಗೂ ಹರಿಯುತ್ತದೆ. ವಿಶುಕುಮಾರರ ಪಾತ್ರವೊಂದು ಮಂಜೇಶ್ವರಕ್ಕೆ ಹೋಗಿ ಮಂಜೇಶ್ವರ ಗೋವಿಂದ ಪೈಗಳಲ್ಲಿ ತೆಂಕುತಿಟ್ಟು ಹಾಗೂ ಬಡಗುತಿಟ್ಟು ಯಕ್ಷಗಾನದ ಬಗ್ಗೆ ಚರ್ಚೆ ಮಾಡುತ್ತದೆ. ವಿಶುಕುಮಾರರ ಕೆಲವು ಪಾತ್ರಗಳು ಮುಂಬಯಿಯ ನೆಲದಲ್ಲೂ ಓಡಾಡಿವೆ. ವಿಶುಕುಮಾರರು ದಕ್ಷಿಣ ಕನ್ನಡ, ಬೆಂಗಳೂರಿನಂತೆ ಮುಂಬಯಿ ಮಹಾನಗರವನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

ವಿಶುಕುಮಾರರು ಮುಜರಾಯಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾಗ ಧಾರ್ಮಿಕ ಕೇಂದ್ರಗಳ ಅವ್ಯವಸ್ಥೆಯನ್ನು ಸ್ವತಃ ಅನುಭವಿಸಿದ್ದಾರೆ. ಇದರ ಜೊತೆಗೆ ವಿಶುಕುಮಾರರು ದಕ್ಷಿಣ ಕನ್ನಡದ ಅನೇಕ ಧಾರ್ಮಿಕ ಕ್ಷೇತ್ರಗಳ ಪರಿಚಯವನ್ನು ಪತ್ರಿಕೆಗಳಿಗೆ ಸಚಿತ್ರವಾಗಿ ಬರೆದು ಗಮನ ಸೆಳೆಯುವಂತೆ ನೀಡಿದ್ದಾರೆ. ಬಾರಕೂರಿನ ಬಗ್ಗೆ ವಿಶುಕುಮಾರರು ಬರೆದಿರುವ ಲೇಖನ ಕೃತಿರೂಪದಲ್ಲಿ ಬರುವಷ್ಟು ಮಾಹಿತಿ ಪೂರ್ಣವೂ, ವಿಸ್ತಾರವೂ ಆಗಿದೆ.

ಅಸ್ಪೃಶ್ಯತೆ, ಮತ ಭೇದಗಳಿಗೆ ವಿಶುಕುಮಾರರ ಮನಸ್ಸು ತುಂಬ ನೊಂದಿತ್ತು. ಕರ್ಮ ಕಾದಂಬರಿಯಲ್ಲಿ ಶೂದ್ರರನ್ನು ದೇವಸ್ಥಾನದೊಳಗೆ ಬರಲು ಬಿಡದ ಪರಿಸ್ಥಿತಿ ಬಗ್ಗೆ ಪಾತ್ರದ ಮೂಲಕ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ. ಸತ್ತ ಇಲಿ, ಕಾಗೆ, ನಾಯಿಗಳು ಒಳಗೆ ಪ್ರವೇಶಿಸಬಹುದಾದರೆ ಹೊರಗೆ ಹೆಬ್ಬಾಗಿಲ ಬಳಿ ನಿಲ್ಲುವ ಶೂದ್ರರನ್ನು ನೀವು ಒಳಗೆ ಬಿಡಬೇಕು. ಬಾರದಿದ್ದರೆ ಕರೆಯಬೇಕು. ದೇವರಿಗೆ ಚಿನ್ನಾಭರಣ, ಬ್ರಾಹ್ಮಣರಿಗೆ ದಕ್ಷಿಣೆ ಹಾಕುವ ಯೋಗ್ಯತೆಯುಳ್ಳ ಹೊಲತಿ ಒಳಗೆ ಬರಬಹುದಾದರೆ ಹೂ, ಹಣ್ಣು, ಎಳನೀರುಗಳನ್ನು ಸಮರ್ಪಿಸಲು ಬರುವ ಶೂದ್ರರನ್ನು ಒಳಗೆ ಕರೆಯಬೇಕು (’ಕರ್ಮ’ ಪುಟ 116) ಹೀಗೆ ನಿಮ್ನ ಸ್ತರದ ಜನರ ನೋವಿನ ಬಗ್ಗೆ ವಿಶುಕುಮಾರರು ತಮ್ಮ ಕಾದಂಬರಿಗಳಲ್ಲಿ ಸ್ಪಂದಿಸಿದ್ದಾರೆ.

ವಿಶುಕುಮಾರರ ಕಲ್ಪನಾಶಕ್ತಿ ಅಪೂರ್ವವಾದುದು. ಅವರ ಕಥೆ ಅಥವಾ ಕಾದಂಬರಿಗಳ ಕೊನೆಗಳನ್ನು ಮೊದಲು ಊಹಿಸಲು ಸಾಧ್ಯವೇ ಇಲ್ಲ. ವಿಶುಕುಮಾರರ ಬರವಣಿಗೆ ಶೈಲಿಯೂ ಆಕರ್ಷಕವಾದುದು, ಖ್ಯಾತ ವಿಮರ್ಶಕರಾದ ಶಂಕರ ಮೊಕಾಶಿ ಪುಣೀಕರ ಅವರು ವಿಶುಕುಮಾರ್ ಶೈಲಿಯನ್ನು ಪ್ರಶಂಶಿಸಿದ್ದಾರೆ. ಕನ್ನಡದ ಒಳ್ಳೆಯ ಶೈಲಿಯನ್ನು ನಾವು ವಿಶುಕುಮಾರ, ಪ. ನಾರಾಯಣ, ಭಾರತೀಸುತ, ಶೇಷನಾರಾಯಣ, ಮಲ್ಲಿರಾಜ ಅರಸು, ಕುಮಾರ ತನಯ, ಎಂ.ಕೆ. ಸೀತಾರಾಮಯ್ಯ ಇಂಥವರಲ್ಲಿ ನೋಡಬಹುದು (ಸಂಕ್ರಮಣ ೪೪) ಎಂದಿದ್ದಾರೆ. ಒಟ್ಟಿನಲ್ಲಿ ವಿಶುಕುಮಾರರ ಬರವಣಿಗೆಯಲ್ಲಿ ಸಾಮಾಜಿಕ ಬದಲಾವಣೆಯನ್ನು ಬಯಸುವ ಕಳಕಳಿಯಿದೆ. ಅವರ ಒಟ್ಟು ಸಾಹಿತ್ಯವನ್ನು ಮರು ಮೌಲ್ಯಮಾಪನಕ್ಕೆ ಒಡ್ಡುವ ಅವಶ್ಯಕತೆಯಿದೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!