ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ರಾಷ್ಟೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ನಿರ್ಮಾಣಕ್ಕೆ ಕಲಿಕೆಯ ಸಮಯದಲ್ಲಿ ಬುನಾದಿ ಹಾಕುವುದು ಸೂಕ್ತ : ಸುರೇಶ್ ಎಂ.ಎಸ್

ಕೊಲ್ಯ : ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ನಿರ್ಮಾಣಕ್ಕೆ ಕಲಿಕೆಯ ಸಮಯದಲ್ಲೆ ಬುನಾದಿ ಹಾಕುವುದು ಸೂಕ್ತ ,ಐ.ಎ.ಎಸ್ ,ಐ.ಪಿ.ಎಸ್ ನಂತಹ ಪರೀಕ್ಷೆಗಳಿಗೆ ಇಂದಿನಿಂದಲೇ ಕಠಿಣ ಪರಿಶ್ರಮ ಪಟ್ಟು ಓದಿ ಅಭ್ಯಾಸ ಮಾಡಿಕೊಂಡು ಸರಕಾರಿ ಅಧಿಕಾರಿಯಾಗಿ ಮುಂದಿನ ಜೀವನವನ್ನು ಸಂತೋಷದಿಂದ ಕಳೆಯಲು ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಸರ್ವಜ್ಞ ಐ.ಎ.ಎಸ್.ಅಕಾಡೆಮಿ ಇದರ ನಿರ್ದೇಶಕರು, ಯುವವಾಹಿನಿ (ರಿ) ಕಂಕನಾಡಿ ಘಟಕದ ಉಪಾಧ್ಯಕ್ಷರಾಗಿರುವ ಸುರೇಶ್ ಎಂ.ಎಸ್ ರವರು ಮಾತನಾಡಿ ತಿಳಿಸಿದರು.

ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ಮಂಗಳೂರು ವಿಶ್ವ ವಿದ್ಯಾನಿಲಯ ರಾಷ್ಟೀಯ ಸೇವಾ ಯೋಜನೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇದರ ರಾಷ್ಟೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗಾಗಿ ” ಶೈಕ್ಷಣಿಕ ವೃತ್ತಿ ಮಾರ್ಗದರ್ಶನ “ಕಾರ್ಯಗಾರವು ದಿನಾಂಕ 28/12/2018 ನೇ ಶುಕ್ರವಾರದಂದು ಶ್ರೀ ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುರ್ನಾಡುವಿನಲ್ಲಿ ಜರಗಿತು.
ವಿದ್ಯಾರ್ಥಿ ದೆಸೆಯಲ್ಲೆ ಸೂಕ್ತ ವೃತ್ತಿಯ ಬಗ್ಗೆ ಆಯ್ಕೆ ಮಾಡಿ ಅದರ ಬಗ್ಗೆ ದೃಡ ವಿಶ್ವಾಸವಿದ್ದಲ್ಲಿ ಖಂಡಿತ ಯಶಸ್ಸು ಸಾಧ್ಯ ಎಂದು ಜೆ.ಕೆ ಎ ಪ್ರಿಂಟರ್ಸ್ನ ಮಾಲಕರು, ಯುವವಾಹಿನಿ (ರಿ) ಕೊಲ್ಯ ಘಟಕದ ಸದಸ್ಯರು ಆಗಿರುವ ಅಜಿತ್ ಪೂಜಾರಿ ಪಜೀರು ರವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಯುವವಾಹಿನಿಯು ಸುಮಾರು 33 ಘಟಕಗಳು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಉದ್ಯೋಗ ನಿರ್ಮಾಣದ ಕುರಿತು ಎಲ್ಲಾ ರೀತಿಯ ಮಾರ್ಗದರ್ಶನ ಸಲಹೆ, ಸೂಚನೆಗಳನ್ನು, ಸಹಕಾರವನ್ನು ನೀಡಿತ್ತದೆ. ಈ ರೀತಿಯ ಕಾರ್ಯಕ್ರಮ ಆಯೋಜಿಸಲು ತುಂಬ ಸಂತೋಷವಾಗುತ್ತದೆ, ವಿದ್ಯಾರ್ಥಿಗಳು ಈ “ಶೈಕ್ಷಣಿಕ ವೃತ್ತಿ ಮಾರ್ಗದರ್ಶನ” ಕಾರ್ಯಗಾರದ ಪ್ರಯೋಜನವನ್ನು ಪಡೆದು ಉನ್ನತ ಸರಕಾರಿ ಉದ್ಯೋಗಗಳನ್ನು ಅಲಂಕರಿಸಬೇಕೆಂದು ಎಂದು ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಕುಸುಮಾಕರ್ ಕುಂಪಲರವರು ಶುಭ ಹಾರೈಸಿದರು.
ವಿದ್ಯಾರ್ಥಿಗಳು ತಮ್ಮ ವಿಧ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ರಾಷ್ಟೀಯ ಸೇವಾ ಯೋಜನೆಯ ಮೂಲಕ ನಿಮ್ಮ ಭವಿಷ್ಯವು ಉಜ್ವಲವಾಗಲಿ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇದರ ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರು ನಿವೃತ್ತ ಹಿರಿಯ ಶಿಕ್ಷಕರಾಗಿರುವ ಕೆ.ಟಿ ಆಳ್ವ ರವರು ಶುಭಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ವಿಶೇಷ ಉಪನ್ಯಾಸಕಾರರಾಗಿ ಸುರೇಶ್ ಎಂ.ಎಸ್ ರವರು ಸುಮಾರು 1ಗಂಟೆಗಳ ಕಾಲ “ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ” ಕುರಿತು ರಾಷ್ಟೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಯುವವಾಹಿನಿ (ರಿ) ಕೊಲ್ಯ ಘಟಕದ ಪ್ರಧಾನ ಕಾರ್ಯದರ್ಶಿ ಲತೀಶ್ ಪಾಪುದಡಿ ಮಾಡೂರು, ಕೋಶಾಧಿಕಾರಿ ರಘುರಾಮ್ ಸುವರ್ಣ, ಸಂಘಟನಾ ಕಾರ್ಯದರ್ಶಿ ಶಶಿಕಾಂತ್ ಪರ್ಯತ್ತೂರು, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾ ಅಧಿಕಾರಿ ಶೋಭಾಮಣಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇದರ ಪ್ರಾಧ್ಯಾಪಕರು ಹಾಗೂ ಶಿಬಿರಾಧಿಕಾರಿಗಳಾದ ಮೀನಾಕ್ಷಿ ಆಚಾರ್ಯ ಮತ್ತು ಪ್ರದೀಪ್ ಬಂಗೇರ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿ ವಿದ್ಯಾರ್ಥಿನಿ ಅಕ್ಷಿತಾ ಸ್ವಾಗತಿಸಿದರು, ವಿದ್ಯಾರ್ಥಿ ಯಕ್ಷಿತ್ ಕುಮಾರ್ ಪ್ರಾರ್ಥನೆಗೈದರು, ಯಶಸ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು, ಭವ್ಯಶ್ರೀ ರವರು ಧನ್ಯವಾದ ನೀಡಿದರು.

Leave a Reply

Your email address will not be published. Required fields are marked *

error: Content is protected !!