ಯುವವಾಹಿನಿ (ರಿ) ವಿಟ್ಲ ಘಟಕ

ವಿಟ್ಲ ಅರಮನೆ ಗದ್ದೆಯಲ್ಲಿ ಅದ್ದೂರಿಯಾಗಿ ನಡೆದ ಕೆಸರ್‍‌ಡ್‌ ಒಂಜಿ ದಿನ ಕಾರ್ಯಕ್ರಮ – ಕೆಸರಿನಲ್ಲಿ ಮಿಂದೆದ್ದ ಮಕ್ಕಳು

ವಿಟ್ಲ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ವಿಟ್ಲ ಘಟಕ, ಬಿಲ್ಲವ ಸಂಘ (ರಿ) ವಿಟ್ಲ, ಮಹಿಳಾ ಘಟಕ ಮತ್ತು ಆರ್‌ .ಕೆ ಕಲಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ದಿ. 28-07-2024 ರಂದು ಕೆಸರ್‍‌ಡ್‌ ಒಂಜಿ ದಿನ ಕಾರ್ಯಕ್ರಮ ವಿಟ್ಲ ಅರಮನೆ ಗದ್ದೆಯಲ್ಲಿ ನಡೆಯಿತು.

ಬಂಗಾರು ಅರಸರು ವಿಟ್ಲ ಅರಮನೆ ಇವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಉದ್ಘಾಟನಾ ಸಮಾರಂಭವನ್ನು ಮಾಧವ ಪೂಜಾರಿ ಪಟ್ಲ, ಅಧ್ಯಕ್ಷರು ಬಿಲ್ಲವ ಸಂಘ (ರಿ) ವಿಟ್ಲ ದೀಪ ಬೆಳಗಿಸಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಕ್ಯಾಪ್ಟನ್‌ ದಾಸಪ್ಪ ನೆಕ್ಕಿಲಾರ್‌ ನಿವೃತ್ತ ಸೇನಾಧಿಕಾರಿ, ಶ್ರೀ ಅಶೋಕ್ ಕುಮಾರ್‌ ಪಡ್ಡು ದ್ವಿತೀಯ ಉಪಾಧ್ಯಕ್ಷರು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು, ಸಂಜೀವ ಪೂಜಾರಿ ನಿಡ್ಯ ಗೌರವಾಧ್ಯಕ್ಷರು ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘ ವಿಟ್ಲ, ಬಾಬು ಕೊಪ್ಪಳ ಗೌರವಾಧ್ಯಕ್ಷರು ಬಿಲ್ಲವ ಸಂಘ (ರಿ.) ವಿಟ್ಲ, ಅಜಿತ್‌ ಕುಮಾರ್‌ ವ್ಯಕ್ತಿತ್ವ ವಿಕಸನ ನಿರ್ದೇಶಕರು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು, ಯಶವಂತ್‌ ಎನ್‌ ಸ್ಥಾಪಕ ಅಧ್ಯಕ್ಷರು ಯುವವಾಹಿನಿ (ರಿ) ವಿಟ್ಲ ಘಟಕ, ರಾಜೇಶ್ ವಿಟ್ಲ ಅಧ್ಯಕ್ಷರು ಯುವವಾಹಿನಿ (ರಿ) ವಿಟ್ಲ ಘಟಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಪದಾಧಿಕಾರಿಗಳು ಮತ್ತು ನಿರ್ದೇಶಕರು ಹಾಗೂ ವಿವಿಧ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಕಾರ್ಯಕ್ರಮಕ್ಕೆ ಬಂದು ಹಿತನುಡಿದರು.

ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಧನಲಕ್ಷ್ಮೀ ರಾಜೇಶ್‌ ವಿಟ್ಲ ಸ್ವಾಗತಿಸಿದರು. ಶೋಭ ವಂದಿಸಿದರು. ಮನ್ಮಥ ಶೆಟ್ಟಿ ಮತ್ತು ಉದಯ್ ಸಾಲಿಯಾನ್ ನಿರೂಪಿಸಿದರು.

ಭೂಮಿ ತಾಯಿಗೆ ಹಾಲೆರೆದು, ಕೆಸರು ಗದ್ದೆಯಲ್ಲಿ ನಡೆಯಬೇಕಾದ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಸೇರಿದಂತೆ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.

ಸಂಜೆ ರಾಜೇಶ್ ವಿಟ್ಲ ಅಧ್ಯಕ್ಷರು ಯುವವಾಹಿನಿ (ರಿ) ವಿಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀಕೃಷ್ಣ ಗುರೂಜಿ ಧರ್ಮದರ್ಶಿ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ ಕುಕ್ಕಾಜೆ, ಮಾಣಿಲ ಇವರು ಆಶೀರ್ವಚನ ನೀಡಿದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅಶೋಕ್‌ ಕುಮಾರ್‌ ರೈ, ಶಾಸಕರು ಪುತ್ತೂರು, ಕೃಷ್ಣಯ್ಯ ಕೆ ವಿಟ್ಲ ಅರಮನೆ, ಸುಧಾಕರ ಪೂಜಾರಿ ಬಡಗೋಡಿ ಪ್ರಗತಿಪರ ಜೇನು ಕೃಷಿಕರು, ರವಿ ವರ್ವ, ವರ್ಮ ಸೌಂಡ್ಸ್‌ ವಿಟ್ಲ, ಮನೋಜ್ ಕಂಪ ಅಧ್ಯಕ್ಷರು ಶ್ರೀ ವಿಷ್ಣು ಮೂರ್ತಿ ಯುವಕರ ಮಂಡಲ ವಿಷ್ಣುನಗರ, ಮಮತಾ ಸಂಜೀವ ಪೂಜಾರಿ ಅಧ್ಯಕ್ಷರು ಬಿಲ್ಲವ ಮಹಿಳಾ ಘಟಕ ವಿಟ್ಲ, ಯಶೋಧ ಹರೀಶ್ ಮರುದಾಳ ಫೇಮ್ಸ್ ಹರ್ಬಲ್ ಬ್ಯೂಟಿ ಪಾರ್ಲರ್‌ ವಿಟ್ಲ, ರಮನಾಥ ವಿಟ್ಲ ವಿಆರ್‌ಸಿ, ಶ್ರೀನಿವಾಸ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು.  ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ವಿಟ್ಲ ಘಟಕ, ಬಿಲ್ಲವ ಸಂಘ (ರಿ) ವಿಟ್ಲ ಮಹಿಳಾ ಘಟಕ ಮತ್ತು ಆರ್‌ ಕೆ ಕಲಾ ಸಂಸ್ಥೆಗಳ ಎಲ್ಲಾ ಸದಸ್ಯರು ಪದಾಧಿಕಾರಿಗಳು ಸೇರಿದಂತೆ ಸಾರ್ವಜನಕರೆಲ್ಲರೂ ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು.

Leave a Reply

Your email address will not be published. Required fields are marked *

error: Content is protected !!