ಯಡ್ತಾಡಿ : ಯುವವಾಹಿನಿ (ರಿ) ಯಡ್ತಾಡಿ ಘಟಕದ ಸಾರಥ್ಯದಲ್ಲಿ ವಿದ್ಯಾರ್ಥಿಗಳಿಗಾಗಿ ಸತತವಾಗಿ 7ನೇ ವರ್ಷದ ಐದು ದಿನಗಳ ಮಕ್ಕಳ ಉಚಿತ ಬೇಸಿಗೆ ಶಿಬಿರ, ವಿಕಸನ – 2019, ಅರಿವಿನ ತಂಗಾಳಿ ಕಾರ್ಯಕ್ರಮ ದಿನಾಂಕ 21-04-2019 ರಿಂದ 25-04-2019 ರವರೆಗೆ ಅತ್ಯಂತ ಯಶಸ್ವಿಯಾಗಿ ಜರಗಿತು. ನರೇಂದ್ರ ಕುಮಾರ್ ಕೋಟಾ ನಿರ್ದೇಶನದಲ್ಲಿ ನಡೆದ ಈ ಶಿಬಿರದಲ್ಲಿ ಏಳು ಜನ ಸಂಪನ್ಮೂಲ ವ್ಯಕ್ತಿಗಳು 83 ಜನ ವಿದ್ಯಾರ್ಥಿಗಳನ್ನು ವಿವಿಧ ರೀತಿಯ ಚಟುವಟಿಕೆಗಳಿಂದ ರಂಜಿಸುವ ಜೊತೆ ಅವರ ವ್ಯಕ್ತಿತ್ವ ವಿಕಸನದಲ್ಲಿ ಪರಿಣಾಮಕಾರಿಯಾದ ಬದಲಾವಣೆ ಮೂಡಿಸುವಲ್ಲಿ ಹೆಚ್ಚಿನ ಶ್ರಮವಹಿಸಿದರು.
ಶಿಬಿರವನ್ನು ಸ್ಥಳೀಯ ಉದ್ಯಮಿ ಮಹಮ್ಮದ್ ರಫೀಕ್ ಉದ್ಘಾಟಿಸಿ, ಯುವವಾಹಿನಿಯ ಈ ಕಾರ್ಯಕ್ರಮವನ್ನು ಹೃದಯಾಂತರಾಳದಿಂದ ಶ್ಲಾಘಿಸಿದರು. A.P.M.C ಅಧ್ಯಕ್ಷರಾದ ನಿರಂಜನ ಆಲ್ತಾರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶಿಬಿರದ ಆಯೋಜನೆಯನ್ನು ಪ್ರಶಂಸಿದರು. ಪ್ರತಿ ದಿನವೂ ಶಿಬಿರವನ್ನು ಸ್ಥಳೀಯ ಹೆಸರಾಂತ ವ್ಯಕ್ತಿಗಳಿಂದ ಉದ್ಘಾಟಿಸಿ ಪ್ರಾರಂಭಿಸಲಾಯಿತು. ಈ ಉದ್ಘಾಟನಾ ಸಭಾ ಕಾರ್ಯಕ್ರಮವನ್ನು ಮಕ್ಕಳಿಗೆ ನಿರ್ವಹಿಸುವ ಜವಾಬ್ದಾರಿಯನ್ನು ನೀಡಲಾದುದರಿಂದ ಎಲ್ಲ ಶಿಬಿರಾರ್ಥಿಗಳು ಸಭಾ ಕಾರ್ಯಕ್ರಮ ನಿರ್ವಹಣೆಯ ಅರಿವನ್ನು ಪಡೆದರು.
ಎಲ್ಲ ಶಿಬಿರಾರ್ಥಿಗಳನ್ನು ಮೂರು ತಂಡಗಳಾಗಿ ವಿಂಗಡಿಸಿ, ಪ್ರತಿ ತಂಡಕ್ಕೆ ನಾಯಕರನ್ನು ನೇಮೀಸಲಾಗಿತ್ತು. ಪ್ರಥಮ ದಿನದಂದು ಶಿಬಿರದ ಸಂಪನ್ಮೂಲ ವ್ಯಕ್ತಿಗಳು ವಿವಿಧ ರೀತಿಯ ಐಸ್ ಬ್ರೇಕಿಂಗ್ ಆಟಗಳ ಮೂಲಕ ಮಕ್ಕಳನ್ನು ರಂಜಿಸಿದರು. ಪ್ರತಿ ಆಟದ ಒಳ ಗುಟ್ಟನ್ನು, ಅದರ ಪ್ರಯೋಜನವನ್ನು ಸವಿವರವಾಗಿ ಮಕ್ಕಳಿಗೆ ವಿವರಿಸಲಾಯಿತು. ಹಾಗೆಯೇ ಒಂದು ಅಂಶವನ್ನು ಕೇಂದ್ರೀಕರಿಸಿ ಕಿರುನಾಟಕವನ್ನು ನಿರ್ದೇಶಿಸಿ ಮೂಕಾಭಿನಯದ ಮೂಲಕ ಪ್ರದರ್ಶಿಸುವ ಅವಕಾಶವನ್ನು ನೀಡಲಾಯಿತು. ದ್ವಿತೀಯ ದಿನದಂದು ಸಂಪನ್ಮೂಲ ವ್ಯಕ್ತಿಗಳು ಸಭಾ ಕಾರ್ಯಕ್ರಮದ ನಿರ್ವಹಣೆ ಹಾಗೂ ನಾಯಕತ್ವದ ಬಗ್ಗೆ ತರಬೇತಿಯನ್ನು ನೀಡಿದರು. ಹಾಗೆಯೇ ಮಕ್ಕಳಿಗೆ ಪಾನೀಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರತಿ ತಂಡವು ವಿವಿಧ ರೀತಿಯ, ಆರೋಗ್ಯಭರಿತ, ಪಾನೀಯಗಳನ್ನು ತಯಾರಿಸಿ ತಮ್ಮ ಕೌಶಲ್ಯವನ್ನು ತೋರಿಸಿದರು. ತೃತೀಯ ದಿನದಂದು ಚಿತ್ರಕಲಾ ಮಾಹಿತಿಯನ್ನು ಮಕ್ಕಳಿಗೆ ನೀಡಲಾಯಿತು. ಪ್ರತಿ ತಂಡಕ್ಕೆ ೨೦ ನಿಮಿಷಗಳ ಪ್ರತಿಭಾ ಪ್ರದರ್ಶನದ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಎಲ್ಲ ತಂಡಗಳು ಬರೀ ೩೦ನಿಮಿಷಗಳ ಪೂರ್ವ ತಯಾರಿಯ ಮೂಲಕ ವೈವಿಧ್ಯಮಯ ಕಾರ್ಯಕ್ರಮವನ್ನು ನೀಡಿದರು. ನಾಲ್ಕನೇ ದಿನದಂದು ಅಗ್ನಿ ಅನಾಹುತಗಳನ್ನು ಸರಿಯಾದ ಮಾಹಿತಿಯ ಮೂಲಕ ಆದಷ್ಟು ಕಡಿಮೆ ಮಾಡುವ ಉದ್ದೇಶದಿಂದ ಅಗ್ನಿ ಶಾಮಕ ದಳದವರಿಂದ ಅಗ್ನಿ ಸುರಕ್ಷತೆ ಮತ್ತು ಮುಂಜಾಗ್ರತೆಯ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿತೆಯನ್ನು ನೀಡಲಾಯಿತು. ಅಂತೆಯೇ ಪ್ರಥಮ ಚಿಕಿತ್ಸೆಯ ಅವಶ್ಯಕತೆಯನ್ನು ಮನಕಂಡು ಸ್ಥಳೀಯ ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಪ್ರಥಮ ಚಿಕಿತ್ಸೆಯ ಮಾಹಿತಿಯನ್ನು ಒದಗಿಸಲಾಯಿತು. ಹಾಗೆಯೇ ಬೆಂಕಿರಹಿತ ಅಡುಗೆ ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರತಿತಂಡಗಳು ವೈವಿಧ್ಯಮಯ ತಿಂಡಿ ತಿನಿಸುಗಳನ್ನು ತಯಾರಿಸಿ ತಮ್ಮತಮ್ಮ ಅಡುಗೆಯ ಕೌಶಲ್ಯವನ್ನು ಪ್ರದರ್ಶಿಸಿದರು. ಶಿಬಿರದ ಕೊನೆಯ ದಿನದಂದು ಮಕ್ಕಳು ಸ್ಥಳೀಯ ಜನರಿಗೆ ನೀರಿನ ಹಿತ ಮಿತ ಬಳಕೆಯ ಬಗ್ಗೆ ಅರಿವನ್ನು ಜಾಥಾ ಮೂಲಕ ತಿಳಿಹೇಳಿದರು. ಹಾಗೆಯೇ ಶಿಬಿರಾರ್ಥಿಗಳಿಗೆ ವೈವಿಧ್ಯಮಯ ಉಡುಗೆತೊಡುಗೆಗಳ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಪ್ರತಿದಿನವೂ ಸ್ಥಳೀಯ ಸಾಧಕರನ್ನು ಶಿಬಿರದಲ್ಲಿ ಸ್ವಾಗತಿಸಿ ಅವರ ಬದುಕು, ಎಡೆಬಿಡದ ಛಲ, ಹೋರಾಟ ಹಾಗೂ ಸಾಧನೆಯನ್ನು ಮಕ್ಕಳಿಗೆ ವಿವರಿಸಿ ಹುರಿದುಂಬಿಸಲಾಯಿತು. ದಿನಂಪ್ರತಿ ಮಕ್ಕಳಿಗೆ ಶುಚಿ ರುಚಿಯಾದ ಆರೋಗ್ಯಭರಿತ ಉಪಹಾರ, ಊಟ ಹಾಗೂ ಪಾನೀಯಗಳನ್ನು ನೀಡಲಾಗುತ್ತಿತ್ತು. ಐದನೇ ದಿನದ ಸಮಾರೋಪ ಸಂದರ್ಭದಲ್ಲಿ ಮಕ್ಕಳು ಒಂದು ಘಂಟೆಯ ವೈವಿಧ್ಯಮಯ ಕಾರ್ಯಕ್ರಮವನ್ನು ಪ್ರದರ್ಶಿಸಿದರು.
ತಂಡಗಳನ್ನು ಅವರ ಭಾಗವಹಿಸುವಿಕೆ, ಶಿಸ್ತು, ಸಮಯ ಪಾಲನೆ, ಶುಚಿತ್ವ, ಕ್ರೀಯಾಶೀಲತೆ, ವೈಶಿಷ್ಟತೆ ಯನ್ನು ಕೇಂದ್ರೀಕರಿಸಿ ಅಂಕಗಳನ್ನು ನೀಡಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಯಿತು. ಹಾಗೆಯೇ ಪ್ರತಿ ತಂಡದಿಂದ ಓರ್ವ ಅತ್ಯಂತ ಮೆಚ್ಚುಗೆಯ ಶಿಬಿರಾರ್ಥಿ ಎಂಬ ಪುರಸ್ಕಾರವನ್ನು ನೀಡಲಾಯಿತು.
ಪ್ರತಿಯೊಬ್ಬ ಶಿಬಿರಾರ್ಥಿಯು ಮುಂದಿನ ವರುಷದಿಂದ 10 ದಿನಗಳ ಬೇಸಿಗೆ ಶಿಬಿರ ನಡೆಸಲು ಯುವವಾಹಿನಿ ಸದಸ್ಯರಲ್ಲಿ ಯಲ್ಲಿ ಕೋರಿ ಕೊಂಡರು. ಮಕ್ಕಳು, ಪೋಷಕರು ಕೃತಜ್ಞತಾ ಮಾತುಗಳಿಂದ ಶಿಬಿರದ ಉದ್ದೇಶ ಸಾರ್ಥಕವಾಯಿತೆಂಬ ಧನ್ಯತೆ ಯುವವಾಹಿನಿದಾಯಿತು
Best memory in my life