ಯುವವಾಹಿನಿ (ರಿ) ಮಂಗಳೂರು ಘಟಕದ ವಾರ್ಷಿಕ ಕ್ರೀಡಾಕೂಟ – 2019
ದಿನಾಂಕ 17.11.2019ರ ಭಾನುವಾರದಂದು ಪ್ರಪ್ರಥಮ ಬಾರಿಗೆ ಯುವವಾಹಿನಿ (ರಿ) ಮಂಗಳೂರು ಘಟಕದ ವಾರ್ಷಿಕ ಕ್ರೀಡಾಕೂಟ – 2019 ನಗರದ ಹೊರವಲಯದಲ್ಲಿರುವ ಪದವು ಮೈದಾನ ದಲ್ಲಿ ನಡೆಯಿತು. ಕ್ರೀಡಾಕೂಟವು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಯುವ ಉದ್ಯಮಿ, ಗೆಜ್ಜೆಗಿರಿ ನಂದನ ಬಿತ್ತಿಲ್ ನ ಪ್ರದಾನ ಕೋಶಾಧಿಕಾರಿಯವರಾದ ಶ್ರೀಯುತ ದೀಪಕ್ ಕೋಟ್ಯಾನ್ ರವರು ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸಿ, ವಾಲಿಬಾಲ್ ಮತ್ತು ಕ್ರೀಕೆಟ್ ಆಡುವ ಮೂಲಕ ಕ್ರೀಡಾ ಕೂಟವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೆ.ಆರ್ ಲಕ್ಷ್ಮೀನಾರಾಯಣ ರವರು ವಹಿಸಿದ್ದರು ಮತ್ತು ಕಾರ್ಯದರ್ಶಿಯವರಾದ ಗಣೇಶ್ ವಿ. ರವರು ಎಲ್ಲರನ್ನು ಸ್ವಾಗತಿಸಿದರು.
ಕ್ರೀಡಾಕೂಟದಲ್ಲಿ ನೇತ್ರಾವತಿ ತಂಡವನ್ನು – ಶ್ರವಣ್ ಕುಂದರ್, ಶಾಂಭವಿ ತಂಡವನ್ನು – ಸುಜಿತ್ ಕೋಟ್ಯಾನ್, ಫಲ್ಗುಣಿ ತಂಡವನ್ನು – ಸುಜಿತ್ ಧರ್ಮಸ್ಥಳ ಮತ್ತು ನಂದಿನಿ ತಂಡವನ್ನು – ಯೋಗೀಶ್ ಪೂಜಾರಿ ಯವರು ನಾಯಕತ್ವ ವಹಿಸಿದ್ದರು. ತಂಡದ ನಾಯಕರುಗಳು ಕ್ರೀಡೆಗಳಿಗುಣವಾಗಿ ವಿವಿಧ ತಂಡಗಳನ್ನು ರಚಿಸಿ ಕ್ರಿಕೆಟ್, ವಾಲಿಬಾಲ್, ಕಬಡ್ಡಿ ಮತ್ತು ಹಗ್ಗಜಗ್ಗಾಟದಂತಹ ಕ್ರೀಡೆಗಳನ್ನು ಆಡಿದರು. ವೈಯಕ್ತಿಕ ಕ್ರೀಡೆಗಳಾದ ಮಡಿಕೆ ಹೊಡೆಯುವುದು, ವೇಗದ ನಡಿಗೆ ಹಾಗೂ ಸಂಗೀತ ಕುರ್ಚಿ ಕ್ರೀಡೆಗಳಲ್ಲಿ ಘಟಕದ ಎಲ್ಲಾ ಸದಸ್ಯರು ಪಾಲ್ಗೊಂಡರು. ಮಂಗಳೂರು ಮಹಿಳಾ ಘಟಕದ ಸದಸ್ಯರು ಮಹಿಳೆಯರಿಗಾಗಿ ಏರ್ಪಾಡಿಸಿದ್ದವೇಗದ ನಡಿಗೆ ಕ್ರೀಡೆಯಲ್ಲಿ ಪಾಲ್ಗೊಂಡು ತಮ್ಮ ಕ್ರೀಡಾ ಸ್ಪೂರ್ತಿಯನ್ನು ಮೆರೆದರು. ಘಟಕದ ಕ್ರೀಡಾ ಸಲಹೆಗಾರರಾದ ಅಮಿತ್ ರವರು ಹಾಗೂ ತೀರ್ಪುಗಾರರಾದ ಸುದರ್ಶನ್ ಮತ್ತು ಮಂಜಪ್ಪನವರು ಕ್ರೀಡಾಕೂಟವು ಅತ್ಯುತ್ತಮವಾಗಿ ನಡೆಯುವಂತೆ ಮಾರ್ಗದರ್ಶನ ನೀಡಿದರು. ಕ್ರೀಡಾಕೂಟದ ಕಾಮೆಂಟರಿಯನ್ನು ಸದಸ್ಯರಾದ ಪ್ರವೀಣ್ ಕಿರೋಡಿ, ನಾಗೇಶ್ ಮುಲ್ಲಕಾಡು, ಜೈಕುಮಾರ್, ಪ್ರಕಾಶ್ ಕುಮಾರ್, ತಿಲಕ್ ರಾಜ್, ಚಂದ್ರ ಶೇಖರ್ ಕರ್ಕೇರ ಮತ್ತು ಗಣೇಶ ರವರು ಪ್ರಸ್ತುತಪಡಿಸಿದರು. ಶೈಕ್ಷಣಿಕ ದತ್ತು ಸ್ವೀಕಾರ ನಿಧಿಯ ಪ್ರಯುಕ್ತ ಸಂಚಾಲಕರಾದ ಸತೀಶ್ ಕುಮಾರ್ ರವರು ಹಾಕಿದ್ದ ಐಸ್ ಕ್ರೀಂ ಮತ್ತು ತಂಪುಪಾನೀಯದ ಸ್ಟಾಲ್ ಎಲ್ಲರ ಗಮನ ಸೆಳೆಯಿತು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಎಸ್. ಆರ್. ಪ್ರದೀಪ್ ರವರು ಕ್ರೀಡಾಂಗಣದಲ್ಲಿದ್ದು ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಪ್ರಥಮ ಬಾರಿಗೆ ನಡೆದ ಘಟಕದ ವಾರ್ಷಿಕ ಕ್ರೀಡಾಕೂಟದಲ್ಲಿ ಘಟಕದ ಎಲ್ಲಾ ಮಾಜಿ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಎಲ್ಲಾ ಕ್ರೀಡೆಗಳಲ್ಲಿ ತುಂಬಾ ಉತ್ಸಾಹದಿಂದ ಭಾಗವಹಿಸುವ ಮೂಲಕ ತಮ್ಮ ಕ್ರೀಡಾ ಸ್ಪೂರ್ತಿಯನ್ನು ತೋರಿಸಿಕೊಟ್ಟರು. ಸಾಯಂಕಾಲ 5.30 ಗಂಟೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಕೆ.ಆರ್ ಲಕ್ಷ್ಮೀನಾರಾಯಣರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ಡಾ. ರಾಜಾರಾಮ್ ರವರು, ಘಟಕದ ಸದಸ್ಯರಾದ ಯುವಉದ್ಯಮಿ ವಿನಾಯಕ ಮಾರ್ಕೆಟಿಂಗ್ ನ ಮಾಲೀಕರಾದ ಉಮಾನಾಥ್ ಕೋಟ್ಯಾನ್ ರವರು ಮತ್ತು ಮಹಿಳಾ ಘಟಕದ ಅಧ್ಯಕ್ಷರಾದ ಉಮಾ ಶ್ರೀಕಾಂತ್ ರವರು ಬಾಗವಹಿದ್ದರು. ಕಾರ್ಯದರ್ಶಿ ಗಣೇಶ್ ವಿ.ರವರು ಎಲ್ಲಾ ಅತಿಥಿಗಳನ್ನು ಮತ್ತು ಸರ್ವ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅತಿಥಿಗಳು ಚಾಂಪಿಯನ್ ಟ್ರೋಫಿ ವಿಜೇತರಾದ ನೇತ್ರಾವತಿ ತಂಡ ಕ್ಕೆ ಟ್ರೋಫಿ ಮತ್ತು ಮೆಡಲ್ ಗಳನ್ನು ಹಾಗೂ ವಿವಿಧ ಆಟಗಳಲ್ಲಿ ವಿಜೇತರಾದ ಉಳಿದ ತಂಡಗಳಿಗೆ ಫಲಕಗಳನ್ನು ವಿತರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರವೀಣ್ ಕಿರೋಡಿಯವರು ನಡೆಸಿಕೊಟ್ಟರೆ, ಯಶಸ್ವಿ ಕ್ರೀಡಾ ಸಂಚಾಲಕರಾದ ಸಂತೋಷ್ ಕುಮಾರ್ ರವರು ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.