ಕಟಪಾಡಿ: ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿಯಲ್ಲಿ ವನಮಹೋತ್ಸವ ಮತ್ತು ನೇಜಿ ನಾಟಿಯನ್ನು ಮಾಧವ ಅಮೀನ್ ರವರ ಗದ್ದೆಯಲ್ಲಿ ದಿನಾಂಕ 14-07-2024 ನೇ ಆದಿತ್ಯವಾರ, ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00 ಗಂಟೆಯ ತನಕ ನಡೆಯಿತು. ಕಾರ್ಯಕ್ರಮವು ಪ್ರಾರ್ಥನೆ ಮೂಲಕ ಪ್ರಾರಂಭವಾಯಿತು.
ಘಟಕದ ಅಧ್ಯಕ್ಷರಾದ ಶ್ರೀಮತಿ ಪ್ರತಿಮಾ ವಿ ಪೂಜಾರಿಯವರು ಎಲ್ಲರನ್ನು ಸ್ವಾಗತಿಸಿದರು, ಶ್ರೀ ವಿಶ್ವನಾಥ ಕ್ಷೇತ್ರದ ಜೊತೆ ಕೋಶಾಧಿಕಾರಿ ಶ್ರೀ ರಮೇಶ್ ಜಿ ಕೋಟ್ಯಾನ್ ರವರು ವನಮಹೋತ್ಸವ ಮತ್ತು ನೇಜಿ ನಾಟಿಯ ಬಗ್ಗೆ ಹಿತನುಡಿಯನ್ನು ವರ್ಣಿಸಿದರು. ಜೊತೆ ಕಾರ್ಯದರ್ಶಿ ಶ್ರೀಮತಿ ದೀಪಿಕಾರವರು ಧನ್ಯವಾದ ಸಲ್ಲಿಸಿದರು. ಘಟಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.