ಹಳೆಯಂಗಡಿ : ಯುವವಾಹಿನಿ ಹಳೆಯಂಗಡಿ ಘಟಕದ ವತಿಯಿಂದ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ದಿ.ಕಮಲ ಬೂಬ ಅಮೀನ್ ಸ್ಮರಣಾರ್ಥ ಅವರ ಮಕ್ಕಳ ಪ್ರಾಯೋಜಕತ್ವದಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ದಿನಾಂಕ 09.06.19 ರಂದು ಸಂಜೆ 4 ಗಂಟೆಗೆ ಸರಿಯಾಗಿ ಹಳೆಯಂಗಡಿಯ ಹರಿ ಓಂ ಸಭಾಗ್ರಹದಲ್ಲಿ ಜರಗಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬ್ಬೆಲ್ ರವರು ತನ್ನ ಬಾಲ್ಯದ ಜೀವನವನ್ನು ಮೆಲುಕು ಹಾಕುತ್ತಾ, ವಿದ್ಯಾರ್ಥಿಗಳಿಗೆ ಈ ಪುಸ್ತಕ ವಿತರಣಾ ಕಾರ್ಯಕ್ರಮದ ಮಹತ್ವವನ್ನು ತಿಳಿ ಹೇಳಿದರು. ಸಂಘಟನೆಯ ಮೂಲಕ ಸದೃಢವಾಗಿ ಸಮಾಜದಲ್ಲಿ ಶೋಷಿತರ ಧ್ವನಿಯಾಗಿ ಬೆಳೆದ ಬಿಲ್ಲವ ಸಮಾಜ ಇಂದು ಸಮಾಜದ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಹಳೆಯಂಗಡಿ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ವಸಂತ್ ಬೆರ್ನಾಡ್ ಹೇಳಿದರು.
ಹಳೆಯಂಗಡಿ ಬಿಲ್ಲವ ಸಮಾಜದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ನಾನಿಲ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಮಕ್ಕಳಲ್ಲಿ ಸಮಾಜ ಸಂಘಟನೆಯ ಚಿಂತನೆಯನ್ನು ಬೆಳಗಿಸಲು ಪೂರಕವಾದ ಮೌಲ್ಯಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದು ಹೇಳಿದರು.
ಬಿಲ್ಲವ ಸಮಾಜದ ಕಟ್ಟಡ ನಿಧಿಗೆ ಒಂದು ಲಕ್ಷ ರೂಪಾಯಿ ದೇಣಿಗೆ
ಈ ಸಂದರ್ಭದಲ್ಲಿ ಯುವವಾಹಿನಿ ಹಳೆಯಂಗಡಿ ಅಧ್ಯಕ್ಷರಾದ ಅರುಣ್ ರವರು ಘಟಕದ ವತಿಯಿಂದ ಹಳೆಯಂಗಡಿ ಬಿಲ್ಲವ ಸಮಾಜದ ಕಟ್ಟಡ ನಿಧಿಗೆ ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದರು. ಹಾಗೂ ವಿದ್ಯಾ ನಿಧಿಗಾಗಿ ಕೈಗೊಂಡ ಯೋಜನೆಯನ್ನು ಉದ್ಘಾಟಿಸಲಾಯಿತು. ಅಂತೆಯೇ ಕಾರ್ಯಕ್ರಮದ ಪ್ರಾಯೋಜಕರಾದ ಹಳೆಯಂಗಡಿ ಪೂಜಾ ಎರೇಂಜರ್ ನ ಮಾಲಕರಾದ ಶ್ರೀ ಜೈಕೃಷ್ಣ ಕೋಟ್ಯಾನ್ ಮತ್ತು ನಯನಾ. ಜೆ ಕೋಟ್ಯಾನ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ಒಟ್ಟು 58 ವಿದ್ಯಾರ್ಥಿಗಳಿಗೆ ರೂ.35,000 /- ಮೊತ್ತದ ಪುಸ್ತಕವನ್ನು ವಿತರಿಸಲಾಯಿತು.
ಹಳೆಯಂಗಡಿ ಘಟಕದ ಸಲಹೆಗಾರರಾದ, ರಾಜೀವ ಪೂಜಾರಿ, ಕಟ್ಟಡ ಸಮಿತಿಯ ಅಧ್ಯಕ್ಷರಾದ ಮೋಹನ್ ಸುವರ್ಣ, ಸಮಾಜ ಸೇವಕ ವಿಶ್ವನಾಥ ಕೋಟ್ಯಾನ್, ಸಂಘದ ಗೌರವಾಧ್ಯಕ್ಷ ಗಣೇಶ್ ಬಂಗೇರ, ಮುಂಡ್ಕೂರು ಜೆಸೀಐ ನ ಅಧ್ಯಕ್ಷೆಯಾದ ಕುಮಾರಿ.ಅರುಣಾ ಕುಲಾಲ್ ಉಪಸ್ಥಿತರಿದ್ದರು.
ಯುವವಾಹಿನಿಯ ಮಾಜಿ ಅಧ್ಯಕ್ಷರಾದ ಶರತ್ ಸಾಲ್ಯಾನ್ ಸ್ವಾಗತಿಸಿದರು, ರಮೇಶ್ ಬಂಗೇರ ಪ್ರಸ್ತಾವನೆ ಗೈದರು, ನಿಕಟಪೂರ್ವ ಅಧ್ಯಕ್ಷರಾದ ಹೇಮನಾಥ ಕರ್ಕೇರಾರವರು ಪಟ್ಟಿ ವಾಚಿಸಿದರು, ಯುವವಾಹಿನಿಯ ಅಧ್ಯಕ್ಷರಾದ ಶ್ರೀ ಅರುಣ್ ರವರು ವಂದಿಸಿದರು. ಹಿಮಕರ್ ಸುವರ್ಣ ಹಾಗೂ ಬ್ರಿಜೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.