ಸಮುದಾಯ ಸೇವೆಗೆ ಗೈಡ್ ಸಂಸ್ಥೆ ಹೆಸರುವಾಸಿಯಾಗಿದ್ದು ಅತ್ಯಂತ ಉತ್ಕೃಷ್ಠ ರಾಷ್ಟ್ರಪತಿಗೈಡ್ಸ್ ಪುರಸ್ಕಾರ ಪಡೆಯುವ ಅರ್ಹತೆ ಲಕ್ಷದಲ್ಲೊಬ್ಬರಿಗೆ ಬರಬಹುದು. ರಾಷ್ಟ್ರಮಟ್ಟದಲ್ಲಿ ಇಂತಹ ಮಹೋನ್ನತ ಗೈಡ್ಸ್ ಪುರಸ್ಕಾರ ಪಡೆದು ಬಿಲ್ಲವ ಸಮುದಾಯಕ್ಕೆ ಕಿರೀಟ ಸದೃಶ ಕೀರ್ತಿ ತಂದ ಕು. ತೃಪ್ತಿ ಆನಂದ್ ಮಂಗಳೂರಿನ K.S Hegde ವೈದ್ಯಕೀಯ ಕಾಲೇಜಿನ ಪೊಫೆಸರ್ ಡಾ. ಆನಂದ ಬಂಗೇರ ಹಾಗೂ ಅಲ್ಲೇ ಪ್ರೊಫೆಸರ್ ಆಗಿರುವ ಡಾ. ವಸಂತಿ ಕೋಟ್ಯಾನ್‌ರವರ ಸುಪುತ್ರಿ
St. ತೆರೆಸಾ ಶಾಲೆ, ಬೆಂದೂರಿನಲ್ಲಿ 10ನೇ ತರಗತಿವರೆಗೆ ಓದಿ ಮೌಲ್ಯ ಶಿಕ್ಷಣ (Value Education)ದಲ್ಲಿ 100 ಶೇಕಡಾ ಅಂಕಗಳಿಸಿ ಒಟ್ಟು 92 ಶೇಕಡಾ ಅಂಕಗಳಿಸಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಸಂಗೀತ ಹಾಗೂ ಭರತನಾಟ್ಯ ಕಲಾವಿದೆಯಾಗಿದ್ದು ರಂಗ ಪ್ರವೇಶ ಮಾಡಿರುವ ತೃಪ್ತಿ ರಾಜ್ಯದ ಹತ್ತು ಹಲವು ಕಡೆ ನಾಟ್ಯ, ಸಂಗೀತ ಪ್ರರ್ದಶನವನ್ನು ಈಗಾಗಲೇ ನೀಡಿದ್ದಾರೆ.
ಇವರ ಶೈಕ್ಷಣಿಕ, ಸೇವಾ ಹಾಗೂ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದ ಉನ್ನತ ಸಾಧನೆಗಾಗಿ ಬೆಂಗಳೂರಿನ ಜ್ಞಾನ ಮಂದಾರ ಶೈಕ್ಷಣಿಕ ಸಾಂಸ್ಕೃತಿಕ ಅಕಾಡಮಿ ಇವರಿಗೆ ವಚನ ಮಂದಾರ ರಾಜ್ಯ ಪುರಸ್ಕಾರ ನೀಡಿ ಗೌರವಿಸಿದೆ. Expert P.U. (ಪ್ರಸುತ) ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿರುವ ತೃಪ್ತಿ ಆನಂದ್ ನಮ್ಮ ಸಮುದಾಯದ ಹೆಮ್ಮೆಯ ಪ್ರತಿಭಾವಂತ ಕುವರಿ.
ಯುವವಾಹಿನಿ ಪ್ರತಿಭಾ ಪುರಸ್ಕಾರಕ್ಕೆ ಅತಿ ಅರ್ಹವಾದ ಪ್ರತಿಭಾವಂತ ಈಕೆಯನ್ನು ಅತ್ಯಂತ ಹೆಮ್ಮೆಯಿಂದ ಗೌರವಿಸುತ್ತೇವೆ.