ಮಂಗಳೂರು : ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಆಶ್ರಯದಲ್ಲಿ ಮತ್ತು ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ ರಾಜ್ಯ ಮಟ್ಚದ ಭಾಷಣ ಸ್ಪರ್ಧೆಯು ಯುವವಾಹಿನಿ ಸಭಾ಼ಂಗಣದಲ್ಲಿ ದಿನಾ಼ಂಕ 15.02.2019ರಂದುಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಲಕ್ಮಣ ಸಾಲ್ಯನ್ ರವರು ದೀಪ ಬೆಳಗಿಸುದರೊ಼ಂದಿಗೆ ಉದ್ಘಾಟಿಸಿದರು .ವಿವಿಧ ಶಾಲೆಗಳಿಂದ ಬಂದ ವಿದ್ಯಾರ್ಥಿಗಳು ವಿಶುಕುಮಾರ್ ಬಾಷಣ ಸ್ಪರ್ಧೆಯಲ್ಲಿ ಭಾಗವಾಹಿಸಿದರು.
ಅನುಷಾ ಪ್ರಥಮ, ನಿಶಾ ದ್ವಿತೀಯ, ಪ್ರತೀಕ್ಷಾ ತೃತೀಯ ಬಹುಮಾನ ಪಡೆದರು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಮಾಜಿ ಅಧ್ಯಕ್ಷ ಟಿ.ಶಂಕರ್ ಸುವರ್ಣ , ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಂಚಾಲಕ ಪ್ರದೀಪ್. ಎಸ್. ಆರ್ , ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ , ಮಂಗಳೂರು ಘಟಕದ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.