ಶ್ರೀಯುತ ಬಿ. ವಾಸು ಮತ್ತು ಶ್ರೀಮತಿ ಕುಸುಮ ದಂಪತಿಯವರ ಸುಪುತ್ರ ಶ್ರೀ ರವಿರಾಜ ಕುಮಾರ್ 10.04.1963 ರಂದು ಉಡುಪಿಯ ಉದ್ಯಾವರದಲ್ಲಿ ಜನಿಸಿದರು. ಬಿ.ಕಾಂ., ಎಲ್.ಎಲ್.ಬಿ ಪದವೀಧರರಾದ ಇವರು ಉಡುಪಿ ಹೃದಯ ಭಾಗದಲ್ಲಿರುವ ಮೈತ್ರಿ ಕಾಂಪ್ಲೆಕ್ಸ್‌ನಲ್ಲಿ ಸ್ವಂತ ಕಛೇರಿಯೊಂದಿಗೆ ವಕೀಲ ವೃತ್ತಿ ನಡೆಸುತ್ತಿದ್ದಾರೆ. ಉಡುಪಿ ಜಿಲ್ಲಾ ನ್ಯಾಯಾಲಯದ ವಕೀಲರಾದ ಶ್ರೀಯುತರು ಹಲವಾರು ಇನ್ಸೂರೆನ್ಸ್ ಕಂಪೆನಿಗಳಿಗೆ ಸಲಹಾ ವಕೀಲರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮೂರು ವರ್ಷಗಳವರೆಗೆ ಸರಕಾರೀ ಹೆಣ್ಮಕ್ಕಳ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ, 1995-2005 ರ ವರೆಗೆ ಸರಕಾರೀ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ದುಡಿದ ಅನುಭವ ಇವರದ್ದು.
ಜಯಂಟ್ಸ್ ಇಂಟರ್ ನೇಶನಲ್ಸ್‌ನ ಉಡುಪಿ ಶಾಖೆ, ಉಡುಪಿ ಉದ್ಯಾವರ ಗಣೇಶೋತ್ಸವ ಸಮಿತಿಯಯಲ್ಲಿ ಅಧ್ಯಕ್ಷರಾಗಿ ದುಡಿದು, ಉಡುಪಿಯ ಜನಪ್ರಿಯ ಸೌಹಾರ್ದ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿಯಲ್ಲಿ ಕಳೆದ 12 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವರು. ಉದ್ಯಾವರ ಮಂಡಲ ಪಂಚಾಯ್ತಿಯ ಮಾಜಿ ಸದಸ್ಯರಾದ ಶ್ರೀಯುತ ರವಿರಾಜ ಕುಮಾರ್‌ರವರು ಉದ್ಯಾವರ ಬಿಲ್ಲವರ ಮಹಾಜನ ಸಂಘದ ಸಕ್ರಿಯ ಸದಸ್ಯರಾಗಿದ್ದು ಮೂಲ್ಕಿಯ ಬಿಲ್ಲವರ ಮಹಾಮಂಡಲದಲ್ಲಿ ಸದಸ್ಯರಾಗಿರುವರು.
ಯುವವಾಹಿನಿ(ರಿ) ಕೇಂದ್ರ ಸಮಿತಿಯಲ್ಲಿ 2008-09 ನೇ ಸಾಲಿನ ಅಧ್ಯಕ್ಷರಾಗಿ ಸ್ಮರಣೀಯ ಸೇವೆ ಸಲ್ಲಿಸಿರುವರು. ಇವರ ಅಧ್ಯಕ್ಷೀಯ ಅವಧಿಯಲ್ಲಿ ಉಡುಪಿ ಘಟಕದ ದಶಮಾನೋತ್ಸವ ಸಹಿತ ಹಲವಾರು ಕಾರ್ಯಕ್ರಮಗಳು ನಡೆದಿದ್ದವು. ರವಿರಾಜ ಕುಮಾರ್‌ರು ಪತ್ನಿ ಜಯಂತಿ ಹಾಗೂ ಪುತ್ರಿಯರಾದ ಕು. ಸ್ವಾತಿ ಮತ್ತು ಕು. ಸ್ವರ್ಣಾ (ಇಬ್ಬರೂ ಇಂಜಿನಿಯರ್ ವಿದ್ಯಾರ್ಥಿಗಳು)ರೊಂದಿಗೆ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ.
ವಿಳಾಸ : ಮೈತ್ರಿ ಕಾಂಪ್ಲಕ್ಸ್, ೩ನೇ ಮಹಡಿ, ಸರ್ವಿಸ್ ಬಸ್‌ಸ್ಟ್ಯಾಂಡಿನ ಬಳಿ, ಉಡುಪಿ – 576101
ಮೊಬೈಲ್: 9448104084