ವಿಟ್ಲ : ಯುವವಾಹಿನಿ (ರಿ.) ವಿಟ್ಲ ಘಟಕ ಬಿಲ್ಲವ ಸಂಘ ಮತ್ತು ಮಹಿಳಾ ಘಟಕ ವಿಟ್ಲ ಇದರ ಜಂಟಿ ಆಶ್ರಯದಲ್ಲಿ ಸರಕಾರಿ ಲೇಡಿ ಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ದಿನಾಂಕ 16-06-2024 ರಂದು ರಕ್ತದಾನ ಶಿಬಿರ ನಡೆಯಿತು.
ಬಿಲ್ಲವ ಸಂಘ (ರಿ.) ವಿಟ್ಲ ದ ಅಧ್ಯಕ್ಷರಾದ ಶ್ರೀ ಮಾಧವ ಪೂಜಾರಿ ಪಟ್ಲ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕೆ ಚಾಲನೆ ನೀಡಿದರು.
ಶಿಬಿರದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ವಿಟ್ಲ ಘಟಕದ ಅಧ್ಯಕ್ಷರಾದ ರಾಜೇಶ್ ವಿಟ್ಲ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹರೀಶ್ ಕೆ ಪೂಜಾರಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು, ಡಾ.ಗೀತ ಪ್ರಕಾಶ್ ( ಸುರಕ್ಷಾ ಹೆಲ್ತ್ ಸೆಂಟರ್ ವಿಟ್ಲ ) ರಕ್ತದಾನದ ಮಹತ್ವವನ್ನು ತಿಳಿಸಿಕೊಟ್ಟರು. ಸಂಜೀವ ಪೂಜಾರಿ ನಿಡ್ಯ ಹಾಗೂ ಗಣೇಶ್ ಪೂಂಜರಕೋಡಿ ಸಂಘಟನಾ ಕಾರ್ಯದರ್ಶಿ, ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಉಪಸ್ಥಿತರಿದ್ದರು.
ಸುಮಾರು 50 ಯೂನಿಟ್ ಗಿಂತಲೂ ಹೆಚ್ಚು ರಕ್ತ ಸಂಗ್ರಹಣೆ ಮಾಡಲಾಯಿತು. ಈ ಸಂದರ್ಭದಲ್ಲಿ 25 ಬಾರಿ ರಕ್ತದಾನ ಮಾಡಿರುವ ಪೃಥ್ವಿರಾಜ್ ಎಂ ಪೂಜಾರಿ, ಪ್ರಚಾರ ನಿರ್ದೇಶಕರು, ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇವರನ್ನು ಸನ್ಮಾನಿಸಲಾಯಿತು.
ಉದಯ್ ಸಾಲಿಯಾನ್ ಕಾರ್ಯಕ್ರಮ ನೆರವೇರಿಸಿದರು. ಕಾರ್ಯದರ್ಶಿ ಶ್ರೀಮತಿ ಶೋಭಾ, ಜೊತೆ ಕಾರ್ಯದರ್ಶಿ ಯಶೋದರ ಪಟ್ಲ, ಕೋಶಾಧಿಕಾರಿ ಶ್ರೀಮತಿ ನಿರ್ಮಲ , ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು