ಯುವವಾಹಿನಿ (ರಿ) ಮೂಡಬಿದಿರೆ‌ ಘಟಕ

ಯುವ ಸ್ಪಂದನ ಸೇವಾ ಯೋಜನೆಯ 18ನೇ ಸೇವೆ

ಯುವವಾಹಿನಿ ರಿ. ಮೂಡಬಿದಿರೆ‌ ಘಟಕದ ವತಿಯಿಂದ ಆರಂಭಿಸಲಾದ *ಯುವ ಸ್ಪಂದನ ಸೇವಾ ಯೋಜನೆಯ 18ನೇ ಸೇವೆಯನ್ನು ಕಡಂದಲೆ ಪಾಲಡ್ಕ ಬೆರ್ಕೆ ಮನೆ ಸೊಮಶೇಕರ್ ಇವರು ನಮ್ಮ ಘಟಕದ ಸಕ್ರಿಯ ಸದಸ್ಯರಾಗಿದ್ದಾರೆ ಇವರಿಗೆ ಬೆನ್ನು ಮೂಲೆಯ ತೀವ್ರವಾದ  ಸಮಸ್ಯೆಯಿಂದ ಇದ್ದರೆ ಇವರು ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು ಇವಾಗ ಸುಮಾರು ಒಂದು ವರ್ಷದಿಂದ ಯಾವುದೇ ಕೆಲಸ ಮಾಡಲಿಕ್ಕೆ ಆಗದೆ ಮನೆಯಲ್ಲಿಯೇ ಇದ್ದಾರೆ ಇವರು *ಯುವವಾಹಿನಿ ರಿ. ಮೂಡಬಿದಿರೆ‌  ಘಟಕಕ್ಕೆ  ಆರ್ಥಿಕ ನೆರವಿಗಾಗಿ ಮನವಿ ಸಲ್ಲಿಸಿದ್ದರು.  ಅದನ್ನು ಪರಿಶೀಲಿಸಿ ಇವರಿಗೆ ರೂ.5000/- ಚೆಕ್ ನ್ನು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ರೀ ಕಡಂದಲೆ ಪಾಲಡ್ಕ ಇದರ ಬ್ರಹ್ಮಶ್ರೀ ನಾರಾಯಣ ಗುರುವಿನ 165 ನೇ ಜನ್ಮದಿನಾಚರಣೆಯಂದು ಹಸ್ತಾಂತರಿಸಿದರು ಈ ಸಂದರ್ಭದಲ್ಲಿ  ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಬಲ್ಲೆಟ್ಟು ಮಠ ಹೊಸ್ಮಾರು, ರಾಜಶೇಖರ್ ಕೋಟ್ಯಾನ್ ಅಧ್ಯಕ್ಷರು ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮುಲ್ಕಿ, *ಯುವವಾಹಿನಿ ರಿ. ಮೂಡಬಿದಿರೆ‌ ಘಟಕದ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ ಕೆ,  ಯುವವಾಹಿನಿ ರಿ. ಮೂಡಬಿದಿರೆ‌ ಘಟಕದ  ಸ್ಥಾಪಕ ಅಧ್ಯಕ್ಷರು  ಯುವವಾಹಿನಿ ರಿ. ಕೇಂದ್ರ ಸಮಿತಿಯ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ರಾಜೇಶ್ ಡಿ. ಕೋಟ್ಯಾನ್, ನಮ್ಮ ಘಟಕದ ಆರೋಗ್ಯ ನಿರ್ದೇಶಕರಾದ ಶ್ರೀಮತಿ ಪಾವನ ಸಂತೋಷ, ಘಟಕದ ಸಲಹೆಗಾರರಾದ ಶಂಕರ್ ಕೋಟ್ಯಾನ್ ಹಾಗೂ ನಮ್ಮ ಘಟಕದ ಪದಾಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು ಇವರುಗಳಿಗೆ ಹಾಗೂ  ಯುವ ಸ್ಪಂದನ ಸೇವಾ ಯೋಜನೆಗೆ ಸಹಕಾರ ನೀಡಿದ  ಸರ್ವ ಸೇವಾ ಬಂಧುಗಳಿಗೆ  ಧನ್ಯವಾದಗಳು.

Leave a Reply

Your email address will not be published. Required fields are marked *

error: Content is protected !!