ಪಣಂಬೂರು – ಕುಳಾಯಿ: ಯುವವಾಹಿನಿ (ರಿ) ಪಣಂಬೂರು- ಕುಳಾಯಿ ಘಟಕದ ನೂತನ ಕಾರ್ಯಕಾರಿ ಸಮಿತಿಯಪದಗ್ರಹಣ ಸಮಾರಂಭ 2024-25 ಮತ್ತು ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣಾ ಕಾರ್ಯಕ್ರಮವು ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಕುಳಾಯಿಯಲ್ಲಿ ಭಾನುವಾರ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಪಣಂಬೂರು – ಕುಳಾಯಿ ಘಟಕದ ಅಧ್ಯಕ್ಷೆಶ್ರೀಮತಿ ಮನೀಷಾರೂಪೇಶ್ವಹಿಸಿದ್ದರು. ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕುಳಾಯಿ ಇದರ ಅಧ್ಯಕ್ಷರಾದ ಶ್ರೀ ಕೇಶವ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಸಂಸ್ಥೆಯು ಸಮಾಜಮುಖಿ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ತಾನು ಈ ಸಂಸ್ಥೆಯ ಸದಸ್ಯನೆಂದು ಹೇಳಲುಹೆಮ್ಮೆ ಪಟ್ಟುಕೊಳ್ಳುತ್ತೇನೆ ಎಂದು ಹೇಳಿದರು.
ಶ್ರೀ ಟಿ ಜಯಂತ್ ಸಾಲ್ಯಾನ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕೆ.ಪೂಜಾರಿ ಪಣಂಬೂರು ಕುಳಾಯಿ ಘಟಕದ ನೂತನ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
2023- 24ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು ಹಾಗೂ 20 ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಯಿತು. ಅಪ್ರತಿಮ ಸಾಧನೆಯನ್ನು ಮಾಡಿದಂತಹ ಕುಮಾರಿ ಶ್ರೇಯಾ,ಪರಿಸರ ಪ್ರೇಮಿ ನಾಗರಾಜ್ ಬಜಾಲ್ , ತುಷಾರ್ಇವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮಕ್ಕೆಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಮುದ್ದು ಮೂಡಬೆಳ್ಳೆಯವರು ಯುವವಾಹಿನಿ ಸಂಸ್ಥೆ ನಡೆಸುತ್ತಿರುವ ಎಲ್ಲಾ ಕಾರ್ಯಕ್ರಮಗಳು ಬಹಳ ಅರ್ಥ ಪೂರ್ಣವಾಗಿ ಜರಗುತ್ತಿದೆ. ಯುವ ಸಮುದಾಯವನ್ನು ಸುದೃಢವಾಗಿಸುವಲ್ಲಿ ಯುವವಾಹಿನಿಯು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕೆ ಪೂಜಾರಿ ಹಾಗೂಘಟಕವನ್ನು ಒಂದು ವರ್ಷ ಯಶಸ್ವಿಯಾಗಿ ಮುನ್ನಡೆಸಿದ ಶ್ರೀಮತಿ ಮನಿಷಾ ರೂಪೇಶ್ ಅವರನ್ನುಘಟಕದ ಪರವಾಗಿ ಅಭಿನಂದಿಸಲಾಯಿತು.
ಯುವವಾಹಿನಿಯ ವಿವಿಧ ಘಟಕಗಳಿಂದ ಬಂದಂತಹ ಪ್ರತಿನಿಧಿಗಳು ನೂತನ ಕಾರ್ಯಕಾರಿ ಸಮಿತಿಗೆ ಶುಭ ಹಾರೈಸಿದರು.
ಕುಮಾರಿ ಅಕ್ಷಿತಾ ಕುಮಾರಿ ಸುಕ್ಷಿತಾ ಪ್ರಾರ್ಥಿಸಿದರು.
ಯುವವಾಹಿನಿಯ ಅಧ್ಯಕ್ಷರಾದ ಶ್ರೀಮತಿ ಮನಿಷಾ ರೂಪೇಶ್ ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು.
ಮಾಜಿ ಅಧ್ಯಕ್ಷರಾದ ಶ್ರೀ ಜಗದೀಶ್ ಸುವರ್ಣ ಪ್ರಾಸ್ತಾವಿಕ ನುಡಿಯನ್ನಾಡಿದರು.
ಕಾರ್ಯದರ್ಶಿಯವರಾದ ಶ್ರೀ ಸಚಿನ್ ಜಿ ಅಮೀನ್ ವಾರ್ಷಿಕ ವರದಿ ಮಂಡಿಸಿದರು.
ನೂತನ ಕಾರ್ಯದರ್ಶಿಯವರಾದ ಶ್ರೀ ಮನೋಜ್ ಕುಮಾರ್ ವಂದಿಸಿದರು.
ಶ್ರೀ ಸಂಜೀವ ಸುವರ್ಣ ಹಾಗೂ ಶ್ರೀಮತಿ ರೇಖಾ ಅಂಚನ್ ಕಾರ್ಯಕ್ರಮವನ್ನು ನಿರೂಪಿಸಿದರು.