ಮಂಗಳೂರು : ದಿನಾಂಕ 30.01.2022 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸಂಸ್ಥೆಯ 34ನೇ ವಾರ್ಷಿಕ ಸಮಾವೇಶದಲ್ಲಿ 2021ನೇ ಸಾಲಿನ ಯುವವಾಹಿನಿ ಮುಖವಾಣಿ ಯುವಸಿಂಚನ ವಿಷೇಶಾಂಕವನ್ನು ಹೈಕೋರ್ಟ್‌ನ ಪದಮಿತ್ತ ಹಿರಿಯ ವಕೀಲರಾದ ಐ. ತಾರನಾಥ ಪೂಜಾರಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಎಚ್ ಎಸ್ ಸಾಯಿರಾಂ, ತುಳು ಚಲನಚಿತ್ರ ನಟ ಭೋಜರಾಜ್ ವಾಮಂಜೂರು, ಜಾನಪದ ವಿದ್ವಾಂಸರರಾದ ಬನ್ನಂಜೆ ಬಾಬು ಅಮೀನ್, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ,ಯುವಸಿಂಚನ ಪತ್ರಿಕೆಯ ಸಂಪಾದಕ ದೇವರಾಜ್ ಅಮೀನ್,ಕಾರ್ಯನಿರ್ವಾಹಕ ಸಂಪಾದಕ ದಿನಕರ್ ಡಿ ಬಂಗೆರ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಪಡ್ಪು, ವಾರ್ಷಿಕ ಸಮಾವೇಶ ನಿರ್ದೇಶಕ ಅಜೀತ್ ಕುಮಾರ್ ಪಾಲೇರಿ, ವಾರ್ಷಿಕ ಸಮಾವೇಶ ಸಂಚಾಲಕ ಕುಶಾಲಪ್ಪ ಹತ್ತುಕಳಸೆ ಹಾಗೂ 33 ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.