ಯುವವಾಹಿನಿಯ ಸಾಮಾಜಿಕ ಜಾಲತಾಣದ ಸಂಪಾದಕರಾಗಿ ಆಯ್ಕೆಯಾದಾಗ ಭಯ ಹಾಗೂ ಸವಾಲು ಇತ್ತು.
ಸ್ಥಬ್ದವಾಗಿದ್ದ ವೆಬ್‌ಸೈಟ್‌ಗೆ ವೀಕ್ಷಕರನ್ನು ಗಳಿಸುವ ಸವಾಲು, ಓದುಗರಿಗೆ ಬೋರ್ ಆಗದ ವರದಿ ತಯಾರಿಸಿ ಅಪ್‌ಲೋಡ್ ಮಾಡುವ ಭಯ…

ಆದರೆ ಈ ಸಮಯದಲ್ಲಿ ನನಗೆ ಧೈರ್ಯ ತುಂಬಿ, ಇಡೀ ವರ್ಷ ಸಹಕಾರ ನೀಡಿದ ವೆಬ್‌ಸೈಟ್ ಸ್ಥಾಪಕ ಸಂಪಾದಕ ರಾಜೇಶ್ ಸುವರ್ಣ ಬಂಟ್ವಾಳ, ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಇವರಿಗೆ ಮೊದಲಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.


ಘಟಕದ ವರದಿಗಳಿಗೆ ನಿರ್ದಿಷ್ಟ ರೂಪ ನೀಡಿ ಸಹಕರಿಸಿದ ಅರ್ಚನ.ಎಂ.ಬಂಗೇರ ಕೊಲ್ಯ ಹಾಗೂ ಧನುಷ್ ಕುಮಾರ್ ಕಂಕನಾಡಿ ಇವರಿಬ್ಬರಿಗೂ ಚಿರಋಣಿ.


ಯುವವಾಹಿನಿಯ ಕ್ಷಣ ಕ್ಷಣದ ವರದಿಯನ್ನು ಆಕರ್ಷಕವಾಗಿ ಅಪ್‌ಲೋಡ್ ಮಾಡುವ ಮೂಲಕ ಓದುಗರ ಹೃದಯದಲ್ಲಿ ಮಿಂಚಿನ ಸಂಚಾರ ಮೂಡಿಸಿದ ಮೂಡುಬಿದಿರೆ ಘಟಕದ ಕ್ರಿಯಾಶೀಲ ಸದಸ್ಯ ಆದರ್ಶ್ ಸುವರ್ಣ ಹಾಗೂ ಸುಕ್ಷೀತ್ ಸುವರ್ಣ ಇವರಿಬ್ಬರ ಕಾರ್ಯಕ್ಷಮತೆಗೆ ನನ್ನ ಮೆಚ್ಚುಗೆಯ ಅಭಿನಂದನೆಗಳು.


ಈ ವರ್ಷದ ಸೇವೆಯಲ್ಲಿ ಸಹಕರಿಸಿದ ಗೌರವ ಸಂಪಾದಕರಾದ ಹರೀಶ್ .ಕೆ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ, ಯುವಸಿಂಚನ ಕಾರ್ಯನಿರ್ವಾಹಕ ಸಂಪಾದಕರಾದ ಸತೀಶ್ ಕಿಲ್ಪಾಡಿ, ಸಂಪಾದಕರಾದ ದಿನಕರ್ ಬಂಗೇರ, ಪ್ರಚಾರ ನಿರ್ದೇಶಕರಾದ ಪೃಥ್ವಿರಾಜ್ ಎಂ, ಇವರುಗಳನ್ನು ಸ್ಮರಿಸುತ್ತಾ, ಸಹಕರಿಸಿದ ಎಲ್ಲಾ ಘಟಕದ ಅಧ್ಯಕ್ಷ/ಕಾರ್ಯದರ್ಶಿಯವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.





ವಂದನೆಗಳೊಂದಿಗೆ,
✍️ ನವಾನಂದ
ಸಂಪಾದಕ 2023-24
ಸಾಮಾಜಿಕ ಜಾಲತಾಣ
ಯುವವಾಹಿನಿ(ರಿ.) ಕೇಂದ್ರ ಸಮಿತಿ, ಮಂಗಳೂರು