ಹಳೆಯಂಗಡಿ : ಯುವವಾಹಿನಿ (ರಿ) ಹಳೆಯಂಗಡಿ ಘಟಕದ 2019-20 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ದಿನಾಂಕ 07-04-2019 ರಂದು ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿಯ ಸಭಾಗ್ರಹದಲ್ಲಿ ಜರಗಿತು. ಕಾರ್ಯಕ್ರಮವನ್ನು ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ನಾನಿಲ್ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಯುವವಾಹಿನಿ (ರಿ) ಹಳೆಯಂಗಡಿಯ ಘಟಕದ ಅಧ್ಯಕ್ಷರಾದ ಹೇಮನಾಥ ಕರ್ಕೇರಾರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಳ್ವಾಸ್ ಪದವಿ ಕಾಲೇಜಿನ ಉಪನ್ಯಾಸಕಿ ಕುಮಾರಿ.ಪ್ರಮೋದ, ಘಟಕದ ಸಲಹೆಗಾರರಾದ ರಾಜೀವ ಪೂಜಾರಿ ಹಾಗೂ ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಗಣೇಶ್. ಜಿ ಬಂಗೇರರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಚಂದ್ರಶೇಖರ್ ನಾನಿಲ್ ಇವರನ್ನು ಹಾಗೂ ಜಿಲ್ಲಾ ಯುವ ಪ್ರಶಸ್ತಿಯನ್ನು ಪಡೆದು ಕೊಂಡಿರುವ ನಮ್ಮ ಘಟಕದ ಸದಸ್ಯೆಯಾದ
ಕುಮಾರಿ ದಿವ್ಯಶ್ರೀ ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷರಾದ ಬ್ರಿಜೇಶ್ ಕುಮಾರ್ ನೆರವೇರಿಸಿದರು.
ಜೊತೆ ಕಾರ್ಯದರ್ಶಿಯಾದ ಹರೀಶ್ ಅಮೀನ್ ರವರು 2018-19ನೇ ಸಾಲಿನ ವರದಿ ವಾಚಿಸಿದರು.ಚುನಾವಣಾ ಅಧಿಕಾರಿಯಾದ ಶರತ್ ಕುಮಾರ್ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಸಭೆಗೆ ಪರಿಚಯಿಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಹಾಗೂ ನಮ್ಮ ಘಟಕದ ಸಲಹೆಗಾರರಾದ ರಾಜೀವ ಪೂಜಾರಿರವರು 2019-20 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಅರುಣ್ ಕುಮಾರ್ ರವರು ಸಭೆಯನ್ನು ಉದ್ದೇಶಿಸಿ ತನ್ನ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿದರು. ನಿರ್ಗಮನ ಅಧ್ಯಕ್ಷರಾದ ಹೇಮನಾಥ ಕರ್ಕೇರಾರವರು ತನ್ನ ಅಧಿಕಾರ ಅವಧಿಯಲ್ಲಿ ಸಹಕರಿಸಿದ ಎಲ್ಲ ಸದಸ್ಯರಿಗೂ ಹಾಗೂ ಆಗಮಿಸಿದ ಇತರ ಘಟಕದವರಿಗೂ ಕೃತಜ್ಞತೆ ಸಲ್ಲಿಸಿ ಆಗಮಿಸಿದ ಅಥಿತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಭಾಸ್ಕರ್ ಸಾಲ್ಯಾನ್ ಪ್ರಸ್ತಾವನೆ ಗೈದರು. ರಮೇಶ್ ಬಂಗೇರ ಸ್ವಾಗತಿಸಿದರು. ಗುರುಪ್ರಸಾದ್ ರವರು ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ರಾಜೇಶ್ವರಿ ರಾಮನಗರ ವಂದನಾರ್ಪಣೆ ಗೈದರು.