ಮಾಣಿ : ದಿನಾಂಕ 16-06-2019ರಂದು ಯುವವಾಹಿನಿ(ರಿ.)ಮಾಣಿ ಘಟಕದ ವತಿಯಿಂದ ಸ.ಹಿ.ಪ್ರಾ.ಶಾಲೆ ಗಡಿಯಾರ, ಕೆದಿಲ ಇಲ್ಲಿ ಯುವ ಸ್ಪೂರ್ತಿ 2018-19 ಪರಿಣಾಮಕಾರಿ ಭಾಷಣ ಕಲೆ, ಸಂವಹನ ಮತ್ತು ಮಾನಸಿಕ ಆರೋಗ್ಯ ಹಾಗೂ ವ್ಯಕ್ತಿತ್ವ ವಿಕಸನ ವಿಷಯಗಳ ಬಗ್ಗೆ ಕಾರ್ಯಾಗಾರ ನಡೆಯಿತು.
ಬೆಳಿಗ್ಗೆ 9.30ಕ್ಕೆ ಸರಿಯಾಗಿ ಉದ್ಘಾಟನಾ ಸಮಾರಂಭ ಜರಗಿತು.ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು,ನಿವೃತ್ತ ಸಿಎ ಬ್ಯಾಂಕ್ ಉದ್ಯೋಗಿ ಸೋಮಪ್ಪ ಪೂಜಾರಿ ಮಾದೆಲು, ,ಮಾಣಿ ಘಟಕ ಸಲಹೆಗಾರ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರವಿಚಂದ್ರ , ಗಡಿಯಾರ ಶಾಲೆ ಮುಖ್ಯ ಶಿಕ್ಷಕರು ಸುಚೇತ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುವವಾಹಿನಿ(ರಿ.)ಮಾಣಿ ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ ಅಧ್ಯಕ್ಷತೆಯನ್ನು ವಹಿಸಿದ್ದರು, ಯುವ ಸ್ಪೂರ್ತಿ 2018-19 ಸಂಚಾಲಕರಾದ ಜಯಪ್ರಕಾಶ್ ಕೆದಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. .ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ತುಕಾರಾಂ ಪೂಜಾರಿ, ಪದ್ಮನಾಭ ಮರೊಳಿ ಹಾಗೂ ಮಂಗಳೂರು ಘಟಕದ ಮಾಜಿ ಅಧ್ಯಕ್ಷರಾದ ಮೋಹನ ಪೆಜಕಳ ಉಪಸ್ಥಿತರಿದ್ದರು.ಕಾರ್ಯದರ್ಶಿ ಸುಜಿತ್ ಅಂಚನ್ ಸ್ವಾಗತಿಸಿದರು, ಉಪಾಧ್ಯಕ್ಷರಾದ ಪ್ರಶಾಂತ್ ಅನಂತಾಡಿ ವಂದಿಸಿದರು.
ಮನಸ್ಸಿನಲ್ಲಿ ಭಾಷಣ ಕಲೆಯನ್ನು ಆಲವಡಿಕೊಳ್ಳಬೇಕದರೆ ಕನಿಷ್ಠಪಕ್ಷ ಜಗತ್ತಿನ ಹಾಗೂ ಇತರ ವಿಷಯಗಳ ಬಗ್ಗೆ ಸಾಮಾನ್ಯ ಜ್ಞಾನ ಇರಬೇಕು. ಭಾಷಣ ಮಾಡುವ ಕಲೆಗಾರನಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಮುಖ ಭಾವವಿರಬೇಕು,ಸ್ಪಷ್ಟವಾದ ಉಚ್ಚಾರಣೆ ಇರಬೇಕು ಮತ್ತು ಎಲ್ಲ ವಿಚಾರ ಬಗ್ಗೆ ತಿಳಿದಿರಬೇಕು ಎಂದು ತರಬೇತಿದಾರರದ ಆಭಿಜಿತ್ ಕರ್ಕೇರ ತಿಳಿಸಿದರು.ಇವರು ಪರಿಣಾಮಕಾರಿ ಭಾಷಣಕಲೆ ಬಗ್ಗೆ ಕಾರ್ಯಾಗಾರ ನಡೆಸಿದರು.ಕೊನೆಯಲ್ಲಿ ಪ್ರೇಮನಾಥ್ ಬಂಟ್ವಾಳ,ಮಾಜಿ ಅಧ್ಯಕ್ಷರು ಕೇ.ಸ ಮಂಗಳೂರು ಇವರು ಶಾಲು ಹೊದಿಸಿ ಸನ್ಮಾನಿಸಿದರು.
ಮನುಷ್ಯನು ಹೊರಜಗತ್ತಿಗೆ ಎಷ್ಟು ಸಂತೋಷವಾಗಿ ಕಾಣುತ್ತಾನೊ ಆಗೆಯೇ ಮಾನಸಿಕವಾಗಿಯೂ ಸದೃಢ ಆಗಿರಬೇಕಾಗುತ್ತದೆ. ಮೂಡನಂಬಿಕೆಗಳನ್ನು ಹೆಚ್ಚು ನಂಬಿ ಮೊಸ ಹೊಂದುವುದರಿಂದ ತನ್ನಲ್ಲಿ ಇರುವ ಮಾನಸಿಕ ಸಮಸ್ಯೆಯನ್ನು ಪರಿಹರಿಸುವುದರಿಂದ ಜೀವನದಲ್ಲಿ ಮುಕ್ತಿ ಸಿಗುತ್ತದೆ. ಮನುಷ್ಯರು ತುಂಬಾ ತರಹದ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಮತ್ತು ಆದರಿಂದ ಹೇಗೆ ಮುಕ್ತಿ ಪಡೆಯಬೇಕು ಎಂದು ಮಾನಸಿಕ ಆಪ್ತಸಮಲೋಚಕರಾದ ಲೊಹಿತ್ ರವರು “ಯುವ ಸ್ಪೂರ್ತಿ 2018-19” ಮಾನಸಿಕ ಆರೋಗ್ಯ ತರಬೇತಿಯಲ್ಲಿ ತಿಳಿಸಿದರು.ನಂತರ ಅಥಿತಿಗಳಾದ ನಿತಿನ್ ಅರ್ಬಿ,ಉದ್ಯಮಿ ಮತ್ತು ಸತೀಶ್ ಬಾಯಿಲ,ಉಪಾಧ್ಯಕ್ಷರು ಬಂಟ್ವಾಳ ಘಟಕ ಇವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
“ವ್ಯಕ್ತಿತ್ವ ವಿಕಸನ” ತರಬೇತಿ ಕಾರ್ಯಗಾರದಲ್ಲಿ ಸುದಾಕರ್ ಕಾರ್ಕಳರವರು ವ್ಯಕ್ತಿ ತನ್ನ ಮನಸ್ಸಿನ ಒಳಗಿನ ತತ್ವಗಳನ್ನು ಬದಲಾವಣೆ ಮಾಡಿಕೊಂಡರೆ ಜೀವನದಲ್ಲಿ ಯಶಸ್ಸು ಖಂಡಿತ ಎಂದು ಹೇಳಿದರು.ಮನುಷ್ಯ ತನ್ನ ಜೀವನದಲ್ಲಿ ನಕಾರತ್ಮಕ ಭಾವನೆಗಳನ್ನು ಹೆಚ್ಚಾಗಿ ಆಲವಡಿಕೊಳ್ಳದೆ ಸಕಾರತ್ಮಕ ಭಾವನೆಗಳನ್ನು ಜೀವನದಲ್ಲಿ ಆಲವಡಿಕೊಳ್ಳಬೇಕು.
ವ್ಯಕ್ತಿ ತನ್ನ ಮನಸ್ಸಿನ ಒಳಗಿನ ತತ್ವಗಳನ್ನು ಬದಲಾಯಿಸಿಕೋಂಡರೆ ಮಾತ್ರ ವಿಕಸನ ಆಗಾಬಹುದು ಎಂದು ಎಲ್ಲಾರ ಮನಸ್ಸಿಗೆ ಮುಟ್ಟುವಾಗ ಹೇಳಿದರು.ಅತಿಥಿಯಾಗಿ ಜನಾಬ್ ಪಿ ಇಬ್ರಾಹಿಂ, SDMC ಅಧ್ಯಕ್ಷರು ಅಗಮಿಸಿದರು.ಮಾಣಿ ಘಟಕದ ಅಧ್ಯಕ್ಷರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಕೊನೆಯಲ್ಲಿ ಕಾರ್ಯಕ್ರಮದ ಸಂಚಾಲಕರಾದ ಜಯಪ್ರಕಾಶ್ ಕೆದಿಲ ಇವರನ್ನು ಅಧ್ಯಕ್ಷರು ಸನ್ಮಾನಿಸಿದರು.ರಾಜೇಶ್ ಬಲ್ಯ ಮತ್ತು ದಿನಕರ್ ಬರಿಮಾರ್ ಕಾರ್ಯಕ್ರಮ ನಿರೂಪಿಸಿದರು.ನಿ.ಪೂ ಅಧ್ಯಕ್ಷರಾದ ರಾಜೇಶ್ ಬಾಬನಕಟ್ಟೆ,ಉಪಾಧ್ಯಕ್ಷರಾದ ರಮೇಶ್ ಮುಜಲ ಮತ್ತು ಸಲಹೆಗಾರರಾದ ದಯಾನಂದ ಪೂಜಾರಿ ಕೊಡಜೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಸದಸ್ಯರು ಮತ್ತು ಶಾಲಾ ಮಕ್ಕಳು ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.