ಬೆಂಗಳೂರು : ಘಟಕದ ಒಂದು ದಿನದ ಪ್ರವಾಸ ಕಾರ್ಯ ಯೋಜನೆಯು ದಿನಾಂಕ ಅಕ್ಟೋಬರ್ 6 ಆದಿತ್ಯವಾರದಂದು ಯಶಸ್ವಿಯಾಗಿ ನಡೆಯಿತು.
ಈ ಪ್ರವಾಸದಲ್ಲಿ ಘಟಕದ ಸದಸ್ಯರು ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ, ಮಠಾಧೀಶರಾದ ರಾಮನಗರ ಜಿಲ್ಲೆಯ ಸೋಲೂರು ಮಠ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನ ಮತ್ತು ಎಡಿಯೂರು ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನಗಳಿಗೆ ಭೇಟಿಕೊಟ್ಟು ಶ್ರೀದೇವರ ದರ್ಶನವನ್ನು ಮಾಡಿದರು.
ಬೆಳಿಗ್ಗೆ 9:00ಗೆ ಬೆಂಗಳೂರಿನ ಜೆಪಿ ನಗರದಿಂದ ಬಸ್ ಮೂಲಕ ಬಾಂಧವ್ಯದ ಪಯಣ ಆರಂಭಗೊಂಡಿತು.
ಸದಸ್ಯರು, ಪದಾಧಿಕಾರಿಗಳು ಸೇರಿ ಒಟ್ಟು 40 ಸದಸ್ಯರು ಈ ಕುಟುಂಬ ಸಮ್ಮಿಲನದಲ್ಲಿ ಪಾಲ್ಗೊಂಡಿದ್ದರು. ಮನೋರಂಜನೆ ಹಾಗೂ ಇತಿಹಾಸದಲ್ಲಿ ತಿಳಿದಿರದ ವಿಷಯಗಳ ಚರ್ಚೆಗಾಗಿ ಬಸ್ಸಿನಲ್ಲಿ ಪಡುಮಲೆ, ಕೋಟಿ ಚೆನ್ನಯ ಹಾಗೂ ಬೆಂಗಳೂರು ಘಟಕಕ್ಕೆ ಸಂಬಂಧಪಟ್ಟ ವಿಷಯಗಳ ರಸಪ್ರಶ್ನೆಯನ್ನು ಆಯೋಜಿಸಿ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.
11:00 ಗಂಟೆಗೆ ಸರಿಯಾಗಿ ರಾಮನಗರ ಜಿಲ್ಲೆಯ ಸೋಲೂರು ಮಠ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನಕ್ಕೆ ತಲುಪಿ, ಮೊದಲನೆಯದಾಗಿ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಗಳನ್ನು ಭೇಟಿ ಮಾಡಿ ಎಲ್ಲ ಸದಸ್ಯರ ಪರಿಚಯವನ್ನು ಮಾಡಿಸಿ, ಘಟಕದ ಬೆಳವಣಿಗೆ, ಘಟಕದ ಸಂಘಟನೆ ಹಾಗೂ ಘಟಕದ ಸಮಾಜಮುಖಿ ಸೇವೆಯ ಬಗ್ಗೆ ತಿಳಿಸಿ, ಘಟಕದ ದೊಡ್ಡ ಕನಸು ಬೆಂಗಳೂರು ಯುವವಾಹಿನಿಗೆ ಸ್ವಂತ ಸೂರು ಕಚೇರಿ-ಜಾಗ ಹೊಂದಬೇಕೆನ್ನುವ ಮನವಿಯನ್ನು ಪತ್ರದ ಮುಖೇನ ಸ್ವಾಮೀಜಿಗಳಿಗೆ ನೀಡಲಾಯಿತು.
ಶ್ರೀ ಕ್ಷೇತ್ರಕ್ಕೆ ನವರಾತ್ರಿ ಉತ್ಸವದ ಅನ್ನದಾನಕ್ಕಾಗಿ ಘಟಕದ ವತಿಯಿಂದ 5,000/- ರುಪಾಯಿಯ ಚೆಕ್ಕನ್ನು ದೇಣಿಗೆಯಾಗಿ ಸ್ವಾಮೀಜಿ ಗಳಿಗೆ ಹಸ್ತಾಂತರಿಸಲಾಯಿತು.
ಸ್ವಾಮೀಜಿಗಳ ಮಾರ್ಗದರ್ಶನದಂತೆ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೂಜೆ ಹಾಗೂ ಎಲ್ಲಮ್ಮ ದೇವಿಯ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಲಾಯಿತು. ನಂತರ ಶ್ರೀ ಕ್ಷೇತ್ರದಲ್ಲಿ ಎಲ್ಲರೂ ಅನ್ನಪ್ರಸಾದವನ್ನು ಸ್ವೀಕರಿಸಿ ಸಂಜೆ 3:30ಕ್ಕೆ ಅಲ್ಲಿಂದ ಎಡಿಯೂರು ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಿದರು.
4:30ಕ್ಕೆ ಎಡಿಯೂರು ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನವನ್ನು ತಲುಪಿ ಶ್ರೀದೇವರ ದರ್ಶನವನ್ನು ಪಡೆದು ಪ್ರಸಾದವನ್ನು ಸ್ವೀಕರಿಸಿದರು. 5:30 ಕ್ಕೆ ಹೋಟೆಲಲ್ಲಿ ಚಾ- ತಿಂಡಿ ಸೇವಿಸಿ ಬೆಂಗಳೂರಿಗೆ ನಿರ್ಗಮಿಸಿದರು. ರಾತ್ರಿ 7:30 ಗಂಟೆಗೆ ಬೆಂಗಳೂರಿಗೆ ತಲುಪಿದರು.
ಕುಟುಂಬ ಸಮ್ಮಿಲನ ಪ್ರವಾಸ ಕಾರ್ಯಯೋಜನೆಯಲ್ಲಿ ಅಧ್ಯಕ್ಷರಾದ ಪ್ರಸಾದ್ ಕುಮಾರ್, ಕಾರ್ಯದರ್ಶಿಗಳಾದ ಧನುಷ್, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಧರ್ ಡಿ ಪೂಜಾರಿ, ಘಟಕದ ಗೌರವ ಸಲಹೆಗಾರರಾದ ಸುಧೀರ್ ಎಸ್ ಪೂಜಾರಿ, ಉಪಾಧ್ಯಕ್ಷರಾದ ಶಶಿಧರ್ ಕೋಟ್ಯಾನ್, 2ನೇ ಉಪಾಧ್ಯಕ್ಷರಾದ ಪ್ರಸಾದ್ ಕುಮಾರ್ CP, ನಿಕಟಪೂರ್ವ ಅಧ್ಯಕ್ಷರಾದ ಮಿತೇಶ್ ಕುಮಾರ್, ಜೊತೆಕಾರ್ಯದರ್ಶಿ ಅಶ್ವಿನಿ ಅಮೀನ್, ಕೋಶಾಧಿಕಾರಿಗಳಾದ ಚೇತನ್, ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಸಂತೋಷ್ ಪೂಜಾರಿ, ಸಾಂಸ್ಕೃತಿಕ ನಿರ್ದೇಶಕರಾದ ಶರತ್ ಪೂಜಾರಿ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಶಿವಪ್ರಸಾದ್, ಕ್ರೀಡಾ ನಿರ್ದೇಶಕರಾದ ಸುಧೀರ್, ಮಹಿಳಾ ಸಂಘಟನೆ ನಿರ್ದೇಶಕರಾದ ಪವಿತ್ರ, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಸಂದೀಪ್ ಎಚ್, ವಿದ್ಯಾ ನಿಧಿ ನಿರ್ದೇಶಕರಾದ ಸುದರ್ಶನ್, ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾದ ಪುನೀತ್, ಸಂಘಟನಾ ಕಾರ್ಯದರ್ಶಿಗಳಾದ ಸಚಿಂದ್ರ ಕೋಟ್ಯಾನ್, ನವನೀತ್, ದಿವ್ಯ HL, ಶ್ವೇತ ಕೋಟ್ಯಾನ್, ತಶ್ವೀರ್, ಸದಸ್ಯರಾದ ಗೀತಾ, ಚಂದ್ರ ಪಿ, ಪ್ರೀತಿ ಕರ್ಕೇರಾ, ಸುಷ್ಮಾ ಪೂಜಾರಿ, ಕಿರಣ್, ಭಾವನ, ಕಿರಣ್ ಸೂಜಿ, ರಂಜಿತಾ, ಪ್ರೀಯಾ ಮುಕೇಶ್ ಮತ್ತು ಇತರರು ಭಾಗವಹಿಸಿದ್ದರು.