ಯುವವಾಹಿನಿ (ರಿ) ಬಂಟ್ವಾಳ ಘಟಕದ ಸದಸ್ಯರಿಂದ ಸಾಂಸ್ಕೃತಿಕ ವೈವಿಧ್ಯ

ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರ 164 ನೇ ಜನ್ಮದಿನಾಚರಣೆ ಪ್ರಯುಕ್ತ ದಿನಾಂಕ 09.09.2018 ರಂದು ನಾರಾಯಣರು ಸಭಾಭವನ ಗಾಣದಪಡ್ಪು ಬಿ.ಸಿ.ರೋಡ್ ಇಲ್ಲಿ ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಪ್ರಥಮ ಪ್ರಶಸ್ತಿ ವಿಜೇತ CPL ಖ್ಯಾತಿಯ ವೈಷ್ಣವಿ ಕಲಾವಿದೆರ್ ಕೊಯಿಲ ಇವರಿಂದ “ಕುಸಲ್ದ ಗೌಜಿ” ಎಲ್ಲರನ್ನೂ ನಗೆಕಡಲಲ್ಲಿ ಮುಳುಗಿಸಿತು. ಸಂಚಾಲಕರಾದ ಸುಂದರ ಪೂಜಾರಿ ಬೋಳಂಗಡಿ ಮತ್ತು ಮಲ್ಲಿಕಾ ಪಚ್ಚಿನಡ್ಕ ಕಾರ್ಯಕ್ರಮದ ನೇತ್ರತ್ವ ವಹಿಸಿದ್ದರು.

ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಕೆ. ಸೇಸಪ್ಪ ಕೋಟ್ಯಾನ್ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಶಿವಾನಂದ ಎಮ್ , ಕಾರ್ಯದರ್ಶಿ ಕಿರಣರಾಜ್ ಪೂಂಜಾರಿಕೊಡಿ ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಶ್ರೀಧರ್ ಬಿ. ಅಮಿನ್ ಮತ್ತು ಕಾರ್ಯಕ್ರಮ ಸಂಚಾಲಕರಾದ ಮಲ್ಲಿಕಾ ಪಚ್ಚಿನಡ್ಕ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!