ಕೊಲ್ಯ : ಯುವವಾಹಿನಿ (ರಿ)ಕೊಲ್ಯ ಘಟಕದ ಶಾಶ್ವತ ವಿದ್ಯಾ ನಿಧಿ ಯೋಜನೆಯ ಸದಸ್ಯರಾದ ಶ್ರೀ ಶ್ರೀ ಮುತ್ತಪ್ಪ ಪೂಜಾರಿ ಮತ್ತು ಶ್ರೀಮತಿ ಸುಜಾತ ಎಚ್.ಕೆ.ದಂಪತಿಗಳ ಕುಟುಂಬ ಸದಸ್ಯರ ಸಹಕಾರದೊಂದಿಗೆ ವಿದ್ಯಾ ನಿಧಿಗೆ ದೇಣಿಗೆಯ ಹಸ್ತಾಂತರ ಕಾರ್ಯಕ್ರಮವು ದಿನಾಂಕ 26-12-2018 ನೇ ಬುಧವಾರದಂದು ಸಾಯಂಕಾಲ ಮುತ್ತಪ್ಪ ಪೂಜಾರಿಯವರ ಹಿರಿಯ ಮುಂದಾಳುತ್ವದಲ್ಲಿ ಅವರ ನಿವಾಸ ಕುಂಪಲದಲ್ಲಿ ಜರಗಿತು.
ಸಮಾಜದ ಹಿರಿಯ ಮಹಾನ್ಚೇತನ ಬಲಿಷ್ಠ ಭಾರತದ ಸ್ವಾತಂತ್ರ್ಯ ಹೋರಾಟಗಾರ 93 ವರ್ಷ ಹರೆಯದ ಮಂಗಳೂರು ಬಳ್ಳಾಲ್ ಭಾಗ್ ನಿವಾಸಿ ಎಚ್ .ಜಿ. ಕೃಷ್ಣಪ್ಪ ರವರ ಸುಪುತ್ರ ಸುಂದರೇಶ್ ಎಚ್.ಕೆ. ಮತ್ತು ಮಂಜುಳಾ ಸುಂದರೇಶ್ ಮೊಮ್ಮಗ ಅನೀಶ್ ಸುಂದರೇಶ್ ಇವರು ತನ್ನ ಮಾತ ಪಿತ ರ ಹೆಸರಲ್ಲಿ ವಿದ್ಯಾನಿಧಿಗೆ ದೇಣಿಗೆಯನ್ನು ನೀಡಬೇಕೆಂಬ ಸದಾಶಯವನ್ನು ಮನದಲ್ಲಿ ನಿಶ್ಚಯಿಸಿದ ಪ್ರಕಾರ ಇವರ ಕುಟುಂಬ ಸದಸ್ಯರಾದ ಚಂದ್ರಹಾಸ್ ಇಡ್ಯಾ ಮತ್ತು ಸತ್ಯವತಿ ಚಂದ್ರಹಾಸ್ ಇಡ್ಯಾ ಕುಂಪಲ, ವಸಂತ ಪೂಜಾರಿ ಮೈಸೂರು , ರಾಮಸ್ವಾಮಿ ಮತ್ತು ಸ್ವಾತಿ ರಾಮಸ್ವಾಮಿ ಬೆಂಗಳೂರು ಇವರ ಸಂಪೂರ್ಣ ಸಹಕಾರದೊಂದಿಗೆ “ಇಪ್ಪತ್ತು ಸಾವಿರ” ರೂಪಾಯಿ ಮೊತ್ತದ ದೇಣಿಗೆಯನ್ನು ಕುಟುಂಬದ ಹಿರಿಯರಾದ ಮಹಾನ್ ಚೇತನ ಎಚ್. ಜಿ.ಕೃಷ್ಣಪ್ಪ ರವರ ದಿವ್ಯ ಹಸ್ತದಿಂದ ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಕುಸುಮಾಕರ ಕುಂಪಲ ಹಾಗೂ ವಿದ್ಯಾ ನಿಧಿಯ ನಿರ್ದೇಶಕರಾದ ದೀಪಕ್ .ಎಸ್.ಕೋಟ್ಯಾನ್, ಕೋಶಾಧಿಕಾರಿ ರಘುರಾಮ ಸುವರ್ಣರವರಿಗೆ ಹಸ್ತಾಂತರಿಸಿದರು
ಯುವವಾಹಿನಿ (ರಿ) ಕೊಲ್ಯ ಘಟಕದ ಶಾಶ್ವತ ವಿದ್ಯಾನಿಧಿಯ ಸದಸ್ಯರಾದ ಮುತ್ತಪ್ಪ ಪೂಜಾರಿ ಕುಂಪಲ, ಈಶ್ವರ್ ಸುವರ್ಣ ಕನೀರುತೋಟ,ಕೊಲ್ಯ ಘಟಕದ ಪ್ರಧಾನ ಕಾರ್ಯದರ್ಶಿ ಲತೀಶ್ ಪಾಪುದಡಿ, ಜೊತೆ ಕಾರ್ಯದರ್ಶಿ ಯತೀಶ್ ಕೊಲ್ಯ, ಸದಸ್ಯರಾದ ಗೋಕುಲ್ ದಾಸ್ ಕುಂಪಲ ರವರು ಹಾಗೂ ದೇಣಿಗೆ ನೀಡಿದ ಕುಟುಂಬ ಸದಸ್ಯರು ಉಪಸ್ಥಿತರಿದ್ದ ಸರಳ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಕುಸುಮಾಕರ ಕುಂಪಲರವರು ಹಿರಿಯ ದಂಪತಿಗಳನ್ನು ಹಾಗೂ ಕುಟುಂಬ ಸದಸ್ಯರನ್ನು ಸ್ವಾಗತಿಸಿ ಶಾಶ್ವತ ವಿದ್ಯಾನಿಧಿಯ ಹುಟ್ಟು , ಭವಿಷ್ಯದಲ್ಲಿ ಇದರ ಬೆಳವಣಿಗೆ ಹಾಗೂ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ವಿತರಿಸುವ ರೀತಿ , ನಿಯಮಗಳನ್ನು ಕುಟುಂಬ ಸದಸ್ಯರಿಗೆ ಪ್ರಾಸ್ತಾವಿಕವಾಗಿ ತಿಳಿಯಪಡಿಸಿ ಅವರು ನೀಡಿದ ಮೊತ್ತವನ್ನು ಗೌರವಪೂರ್ಣವಾಗಿ ಘಟಕವು ಸ್ವೀಕರಿಸಿತು.ದೇಣಿಗೆಯನ್ನು ನೀಡಿದ ಕುಟುಂಬ ಸದಸ್ಯರಿಗೆ ಶಾಶ್ವತ ವಿದ್ಯಾನಿಧಿಯ ಸದಸ್ಯತ್ವದ ಲಾಂಛನವನ್ನು ತೊಡಿಸಿ ಶಾಶ್ವತ ವಿದ್ಯಾ ನಿಧಿ ಯೋಜನೆಗೆ ಘಟಕದ ಸದಸ್ಯರಿಂದ ಅವರನ್ನು ಸದಸ್ಯರನ್ನಾಗಿ ಸ್ವಾಗತಿಸಲಾಯಿತು.
ಯುವವಾಹಿನಿ (ರಿ) ಕೊಲ್ಯ ಘಟಕದ ಶಾಶ್ವತ ವಿದ್ಯಾ ನಿಧಿ ಯೋಜನೆಯ ಈ ಮಹತ್ಕಾರ್ಯಕ್ಕೆ ನಮ್ಮನ್ನು ಅನಿರೀಕ್ಷಿತವಾಗಿ ಈ ಕುಟುಂಬವು ಮನೆಗೆ ಕರೆಸಿ ಶಾಶ್ವತ ವಿದ್ಯಾ ನಿಧಿ ಯೋಜನೆಯು ಇನ್ನಷ್ಟು ಬೆಳಗಲು, ಅಪೇಕ್ಷಿಸದೆ ನಿರೀಕ್ಷಿಸದ ಮೊತ್ತವನ್ನು ನೀಡಿ ಸಹಕರಿಸಿದ ಈ ಸುಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಎಚ್.ಜಿ.ಕೃಷ್ಣಪ್ಪ ಮತ್ತು ಸುಶೀಲಾ ಕೃಷ್ಣಪ್ಪ ರವರನ್ನು ಘಟಕದ ವತಿಯಿಂದ ಗೌರಪೂರ್ಣವಾಗಿ ಅಭಿನಂದಿಸಲಾಯಿತು. ಪ್ರೋತ್ಸಾಹಿಸಿದ ಕುಟುಂಬದ ಸರ್ವ ಸದಸ್ಯರಿಗೆ ಯುವವಾಹಿನಿ(ರಿ) ಕೊಲ್ಯ ಘಟಕ ಹಾಗೂ ಯುವವಾಹಿನಿ (ರಿ) ಕೊಲ್ಯ ಘಟಕದ ಶಾಶ್ವತ ವಿದ್ಯಾನಿಧಿಯ ಸರ್ವ ಸದಸ್ಯರ ಪರವಾಗಿ ಘಟಕದ ಪ್ರಧಾನ ಕಾರ್ಯದರ್ಶಿ ಲತೀಶ್ ಪಾಪುದಡಿ ಧನ್ಯತಾಭಾವದಿಂದ ಧನ್ಯವಾದವನ್ನಿತ್ತರು.