ಯುವವಾಹಿನಿ (ರಿ) ಕಾರ್ಕಳ ಘಟಕ ಹಾಗು ಜೇಸಿಐ ಕಾರ್ಕಳ ರೂರಲ್ ಘಟಕದ ವತಿಯಿಂದ ತನ್ನ ಸದಸ್ಯರೀಗೆ ಮೋರಾಜಿ ದೇಸಾಯಿ ಶಾಲೆ ಮಿಯಾರ್ ಇಲ್ಲಿ Life is Beautiful ಎನ್ನುವ ತರಬೇತಿಯನ್ನು ನಡೆಸಲಾಯಿತು. ಅಧ್ಯಕ್ಷ ತೆಯನ್ನು ವೀಣಾ ರಾಜೇಶರವರು ವಹಿಸಿದ್ದರು. ಯುವವಾಹಿನಿಯ ಸದಸ್ಯರಾದ ಮತ್ತು ಪ್ರಾಂಶುಪಾಲರಾದ ಜಗದೀಶರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಯುವವಾಹಿನಿ ಕಾರ್ಕಳ ಘಟಕದ ಸ್ಥಾಪಕಾಧ್ಯಕ್ಷರಾದ ಸುಧಾಕರ್ ಕಾರ್ಕಳರವರು ಉಪಸ್ಥಿತರಿದ್ದರು. ರಾಷ್ಟ್ರೀಯ ತರಬೇತುದಾರರಾದ ಕೇರಳದ ಡಾ ಸರ್ನ ಸಿ ಮ್ ಮತ್ತು ವಲಯ ತರಬೇತುದಾರರಾದ ಪ್ರಕಾಶ್ ಕೆ ಪಿ ಯವರು ತರಬೇತಿಯನ್ನು ನಡೆಸಿಕೊಟ್ಟರು . ಕಾರ್ಯದರ್ಶಿ ಗಣೇಶ ಸಾಲಿಯಾನ್ ಜೇಸಿಐ ಕಾರ್ಯದರ್ಶಿ ಸಚಿನ್ ಜೇಸಿರೆಟ್ ಅದ್ಯಕ್ಷೆ ಲತಾ ಪ್ರಕಾಶ, ಮಧುಕರ್ ನಕ್ರೆ ಶ್ರೀಧರ ಸಾಲಿಯಾನ್ ಸತೀಶ ಪೂಜಾರಿ ಪ್ರಕಾಶ ಪೂಜಾರಿ ವನಿತಾ ಸುಧಾಕರ್ ವಿಜಯಾ ಸತೀಶ್ ಉಪಸ್ಥಿತರಿದ್ದರು.