ಪುತ್ತೂರು : ದಿನಾಂಕ 11.08.2019 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ವಿಶಾಲ ಗದ್ದೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವವಾಹಿನಿ ಸಂಸ್ಥೆಯ 32ನೇ ವಾರ್ಷಿಕ ಸಮಾವೇಶದಲ್ಲಿ 2019 ನೇ ಸಾಲಿನ ಯುವವಾಹಿನಿ ಮುಖವಾಣಿ ಯುವಸಿಂಚನ ವಿಶೇಷಾಂಕವನ್ನು ಐಪಿಎಸ್ ಅಧಿಕಾರಿ `ಕರ್ನಾಟಕದ ಸಿಂಗಂ’ ಖ್ಯಾತಿಯ ಅಣ್ಣಾಮಲೈ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ ಕೃಷ್ಣಮೂರ್ತಿ, ಸಾಗರೋತ್ತರ ಉದ್ಯಮಿ ಮಸ್ಕತ್‍ನಲ್ಲಿನ ಡಾ|ಸಿ.ಕೆ ಅಂಚನ್, ತುಳುರಂಗದ ಚಿತ್ರನಟಿ ನವ್ಯಾ ಪೂಜಾರಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ| ರಾಜಶೇಖರ ಕೋಟ್ಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್, ಯುವಸಿಂಚನ ಪತ್ರಿಕೆಯ ಸಂಪಾದಕ ರಾಜೇಶ್ ಸುವರ್ಣ, ಕಾರ್ಯನಿರ್ವಾಹಕ ಸಂಪಾದಕ ದಿನಕರ ಡಿ. ಬಂಗೇರ , ಯುವವಾಹಿನಿ ಕೇಂದ್ರ ಸಮಿತಿ ಸಮಾವೇಶದ ನಿರ್ದೇಶಕ ಶಶಿಧರ್ ಕಿನ್ನಿಮಜಲು, ಯುವವಾಹಿನಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕೆ.ಅಂಚನ್, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಹಾಗೂ ಯುವವಾಹಿನಿ ಸಂಸ್ಥೆಯ 35 ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.