ಯುವವಾಹಿನಿ (ರಿ) ಪಣಂಬೂರು ಘಟಕ

ಯುವವಾಹಿನಿ ಪಣಂಬೂರು ಘಟಕದ ಪದಗ್ರಹಣ

ಯುವವಾಹಿನಿ (ರಿ) ಪಣಂಬೂರು ಘಟಕದ 2017-18 ನೇ ಸಾಲಿನ ಪದಗ್ರಹಣ ಸಮಾರಂಭವು ದಿನಾಂಕ 22.07.2017 ರಂದು
ಪಣಂಬೂರು NMPT ಕ್ರೀಯೇಶನ್ ಕ್ಲಬ್ ನಲ್ಲಿ ಜರುಗಿತು ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಪ್ರಭಾಕರ ಕುಳಾಯಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮಂಗಳೂರು ಮಹಾನಗರ ಪಾಲಿಕಾ ಕಾರ್ಪೊರೇಟರ್ ಶ್ರೀಮತಿ ಪ್ರತಿಭಾ ಕುಳಾಯಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರವಿಚಂದ್ರ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು.
ಯುವವಾಹಿನಿ ಪಣಂಬೂರು ಘಟಕದ 2017-18 ನೇ ಸಾಲಿನ ಅಧ್ಯಕ್ಷರಾಗಿ ಉದಯ ಆರ್, ಕಾರ್ಯದರ್ಶಿಯಾಗಿ ನರೇಶ್ ಕುಮಾರ್ ನೇತ್ರತ್ವದ ತಂಡಕ್ಕೆ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ ಪ್ರತಿಜ್ಞಾ ವಿಧಿ ಭೋದಿಸಿದರು. PUC ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅನೂಜ್ನಾ ಸುವರ್ಣ ಇವರನ್ನು ಅಭಿನಂದಿಸಲಾಯಿತು.ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ವಿಶ್ವನಾಥ ಕೆ. ಪ್ರಸ್ತಾವನೆ ಮಾಡಿದರು. ವಿವಿಧ ಘಟಕಗಳಿಂದ ಆಗಮಿಸಿದ ಸದಸ್ಯರು ನೂತನ ತಂಡಕ್ಕೆ ಶುಭ ಹಾರೈಕೆ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸಂತ ಪೂಜಾರಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಪಣಂಬೂರು ಘಟಕದ ಸಲಹೆಗಾರರಾದ ವಿಜಯಕುಮಾರ್ ಕುಬೆವೂರು ಹಾಗೂ ಸಂಚಾಲಕರಾದ ಧನೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಸಂತ ಪೂಜಾರಿ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ನರೇಶ್ ಕುಮಾರ್ ಧನ್ಯವಾದ ನೀಡಿದರು.ರಾಜೀವ ಪೂಜಾರಿ ಕಾರ್ಯಕ್ರಮ ನಿರೂಪಿಸಿ ದರು

Leave a Reply

Your email address will not be published. Required fields are marked *

error: Content is protected !!