ಪ್ರಸ್ತುತ ಸನ್ನಿವೇಶಗಳಿಗೆ ಅಗತ್ಯವಿರುವಂತೆ ಯುವವಾಹಿನಿ ಜಾಲತಾಣ ಬದಲಾವಣೆಗೊಂಡಿದ್ದು ಈ ಬಗ್ಗೆ ಎಲ್ಲಾ ಘಟಕದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಗಳಿಗೆ ಮಾಹಿತಿ ನೀಡಲಾಯಿತು…
ದಿನಾಂಕ 30/03/2025 ರಂದು ಮದ್ಯಾಹ್ನ 2.15 ಕ್ಕೇ ಯುವವಾಹಿನಿ ಸಭಾಂಗನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಎಲ್ಲರನ್ನೂ ಸ್ವಾಗತಿಸಿದರು…ಕೇಂದ್ರ ಸಮಿತಿ ಜಾಲತಾಣ ಸಂಪಾದಕರಾದ ಉದಯ ಕುಮಾರ್ ಕೋಲಾಡಿ ಬದಲಾವಣೆಯ ಅಗತ್ಯತೆಯನ್ನು ತಿಳಿಸಿ ಮುಂದಿನ ದಿನಗಳಲ್ಲಿ ಸದಸ್ಯತನ,ರಶೀದಿ,ರಕ್ತದಾನ ಮತ್ತು ಉದ್ಯೋಗ ದ ಮಾಹಿತಿಯಿಂದಾಗಿ ಎಲ್ಲಾ ಸದಸ್ಯರಿಗೆ ಜಾಲತಾಣ ಒಂದು ಅವಿಭಾಜ್ಯ ಅಗತ್ಯತೆ ಆಗಲಿದೆ ಹಾಗೂ ಎಲ್ಲಾ ಸದಸ್ಯರು ಸಹಕರಿಸುವಂತೆ ತಿಳಿಸಿದರು…ನಂತರ ಸಮಿತಿ ಸದಸ್ಯರಾದ ರಾಘವೇಂದ್ರ ಪೂಜಾರಿಯವರು ಎಲ್ಲಾ ತಾಂತ್ರಿಕ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು… ಸಮಿತಿ ಸದಸ್ಯರಾದ ಅನೂಪ್ ಮತ್ತು ಸಾಪ್ಟ್ ವೇರ್ ಇಂಜಿನಿಯರ್ ಪವನ್ ಸಹಕರಿಸಿದರು….ಕೇಂದ್ರ ಸಮಿತಿ ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು,ಮಾಜಿ ಅದ್ಯಕ್ಷರು,ಎಲ್ಲಾ ಘಟಕಗಳ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…